ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಲೈವ್ ಬ್ಯಾಂಡ್: ಪರಿಗಣನೆಗೆ ಹೈಕೋರ್ಟ್ ಸೂಚನೆ
ಲೈವ್ ಬ್ಯಾಂಡ್ ಆರಂಭಿಸುವ ಕುರಿತು ಕೆಲವು ರೆಸ್ಟೋರೆಂಟುಗಳು ಸಲ್ಲಿಸಿರುವ ಅರ್ಜಿಯನ್ನು 30 ದಿನಗಳಲ್ಲಿ ಪರಿಗಣಿಸುವಂತೆ ಸರ್ಕಾರಕ್ಕೆ ಹೈಕೋರ್ಟ್ ಆದೇಶಿಸಿರುವುದರೊಂದಿಗೆ, ಲೈವ್ ಬ್ಯಾಂಡ್ ಪ್ರಿಯರು ಕನಸು ಕಟ್ಟಲಾರಂಭಿಸಿದ್ದಾರೆ.

ಸರ್ಕಾರ 30 ದಿನಗಳಲ್ಲಿ ಅರ್ಜಿ ಪರಿಗಣಿಸದಿದ್ದಲ್ಲಿ ಸುಪ್ರೀಂಕೋರ್ಟ್ ಆದೇಶದಂತೆ ಲೈವ್ ಬ್ಯಾಂಡ್ ಆರಂಭಿಸಲು ಅರ್ಜಿದಾರರಿಗೆ ಎಲ್ಲ ರೀತಿಯ ಸ್ವಾತಂತ್ರ್ಯವಿದೆ ಎಂದು ನ್ಯಾಯಮೂರ್ತಿ ಆನಂದ್ ಬೈರಾರೆಟ್ಟಿ ಅವರಿದ್ದ ಏಕಸದಸ್ಯ ಪೀಠ ತನ್ನ ತೀರ್ಪಿನಲ್ಲಿ ತಿಳಿಸಿದೆ. ಆದರೆ, ಲೈವ್ ಬ್ಯಾಂಡ್‌ಗಳಲ್ಲಿ ಅಶ್ಲೀಲತೆ ಅಥವಾ ಜೂಜಾಟಕ್ಕೆ ಅವಕಾಶ ನೀಡಬಾರದು ಎಂದು ತೀರ್ಪಿನಲ್ಲಿ ಹೇಳಿದೆ.

ಲೈವ್ ಬ್ಯಾಂಡ್ ಆರಂಭಿಸಲು ಅನುಮತಿ ನೀಡುವಂತೆ ಕೋರಿ ಸರ್ಕಾರಕ್ಕೆ ನಿರ್ದೇಶನ ನೀಡಬೇಕೆಂದು ಗಾಂಧಿನಗರದ ಶಾಶ್ವತಿ ಎಂಟರ್‌ಪ್ರೈಸಸ್, ದೊಮ್ಮಲೂರಿನ ಶೆಫ್-ಇನ್-ರೀಜನ್ಸಿ, ಶೇಷಾದ್ರಿಪುರದ ಸಮೃದ್ದಿ ಎಂಟರ್‌ಪ್ರೈಸಸ್ ಸಲ್ಲಿಸಿದ್ದ ಅರ್ಜಿಯನ್ನು ಪರಿಗಣಿಸಿದ ನ್ಯಾಯಪೀಠ ಈ ತೀರ್ಪು ನೀಡಿದ್ದು, ಇದು ಅರ್ಜಿದಾರರಿಗೆ ಮಾತ್ರ ಅನ್ವಯವಾಗುತ್ತದೆ.

ಈ ಮೊದಲು ನ್ಯಾಯಾಲಯವು ಲೈವ್ ಬ್ಯಾಂಡ್ ಆರಂಭ ಕೋರಿ ಸಲ್ಲಿಸುವ ಅರ್ಜಿಗಳನ್ನು 15 ದಿನಗಳಲ್ಲಿ ಇತ್ಯರ್ಥಪಡಿಸುವಂತೆ ಸರ್ಕಾರಕ್ಕೆ ಸೂಚಿಸಿತ್ತು. ಆದರೆ, ಸರ್ಕಾರ ಮರುಪರೀಶೀಲನಾ ವರದಿ ಸಲ್ಲಿಸಿಲ್ಲ ಹಾಗೂ ಲೈವ್ ಬ್ಯಾಂಡ್‌ಗೆ ಸಲ್ಲಿಸಿದ್ದ ಅರ್ಜಿಗಳನ್ನು ಇತ್ಯರ್ಥಪಡಿಸಲೂ ಇಲ್ಲ. ಈ ಹಿನ್ನೆಲೆಯಲ್ಲಿ ಅರ್ಜಿದಾರರು ಮತ್ತೆ ಹೈಕೋರ್ಟ್ ಮೆಟ್ಟಿಲೇರಿದ್ದರು. ಇದನ್ನು ಗಂಭೀರವಾಗಿ ಪರಿಗಣಿಸಿದ ನ್ಯಾಯಪೀಠ ವಿನಾಕಾರಣ ಕಾಲಹರಣ ಮಾಡಿದ ಬಗ್ಗೆ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿತು.

ಲೈವ್ ಬ್ಯಾಂಡ್‌ಗಳು ಬಹಿರಂಗ ಜೂಜಾಟ ನಡೆಸಬಾರದು, ವೇಶ್ಯಾವಾಟಿಕೆಗೆ ಅವಕಾಶವಿರಬಾರದು, ಬಟ್ಟೆಗಳ ಬಗ್ಗೆ ಕಟ್ಟುನಿಟ್ಟಿನ ನಿಯಮ ಪಾಲಿಸಬೇಕು ಎಂಬ ಷರತ್ತುಗಳನ್ನು ನ್ಯಾಯಾಲಯ ತೀರ್ಪಿನಲ್ಲಿ ತಿಳಿಸಿದೆ.
ಮತ್ತಷ್ಟು
ರಾಜ್ಯಪಾಲರ ವಿರುದ್ಧ ದೂರು: ಯಡಿಯೂರ್
ಕುಮಾರ ಸ್ವಾಮಿ-ದೇವೇಗೌಡ ಮಾತುಕತೆ
ಕಾಂಗ್ರೆಸ್‌ಗೆ ಮುಜುಗರ ಹುಟ್ಟಿಸಿದ ಲಾಡ್
ಎಚ್ಎಎಲ್: ತಡೆಯಾಜ್ಞೆಗೆ ಹೈಕೋರ್ಟ್ ನಕಾರ
ಗುರುತಿನ ಚೀಟಿಗಾಗಿ ವಿವಿಧೆಡೆ ಡ್ರಾಪ್ ಬಾಕ್ಸ್
ಮೊದಲ ದಿನದಲ್ಲಿ 7 ನಾಮಪತ್ರ ಸಲ್ಲಿಕೆ