ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಲಾಡ್‌ಗೆ ಸೇರಿದ 3 ವಾಹನಗಳಿಗೆ ಬೆಂಕಿ
ಗಣಿ ರಾಜಕೀಯದ ಮಸಲತ್ತು
ಇತ್ತೀಚೆಗೆ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡಿರುವ ಮಾಜಿ ಶಾಸಕ ಅನಿಲ್ ಲಾಡ್ ಅವರ ಮನೆ ಮೇಲೆ ದುಷ್ಕರ್ಮಿಗಳು ದಾಳಿ ಮಾಡಿದ್ದು, ಮೂರು ವಾಹನಗಳನ್ನು ಸುಟ್ಟು ಹಾಕಿದ್ದಾರೆ. ಇದು ಬಿಜೆಪಿಯ ಕೃತ್ಯ ಎಂದು ಲಾಡ್ ದೂರಿದ್ದರೆ, ಬಿಜೆಪಿ ಜನರ ಮನವೊಲಿಕೆಗಾಗಿ ನಡೆಸುತ್ತಿರುವ ಕೃತ್ಯ ಎಂದು ಆರೋಪಿಸಿದೆ.

ಸುಮಾರು 4.30ರ ಸಮಯದಲ್ಲಿ ಬಿಜೆಪಿ ಕಾರ್ಯಕರ್ತರೊಂದಿಗೆ ಮಾಜಿ ಸಚಿವ ಶ್ರೀರಾಮುಲು ತನ್ನ ಮನೆಗೆ ಧಾವಿಸಿ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿರುವ ಅನಿಲ್ ಲಾಡ್, ಅವರ ಜೊತೆಯಲ್ಲಿದ್ದ ಗೂಂಡಾಗಳು ತಮ್ಮ ಮನೆಗೆ ಕಲ್ಲು ತೂರಾಟ ನಡೆಸಿದ್ದಾರೆ. ಅಲ್ಲದೆ, ತಮ್ಮ ಮೂರು ಕಾರುಗಳಿಗೆ ಬೆಂಕಿ ಹಚ್ಚಿದ್ದಾರೆ ಎಂದು ತಿಳಿಸಿದ್ದಾರೆ. ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿದ್ದು, ಪರೀಶೀಲನೆ ಕಾರ್ಯ ನಡೆಸಿದ್ದಾರೆ.

ಆದರೆ ಈ ಪ್ರಕರಣದಲ್ಲಿ ತಮ್ಮ ಕೈವಾಡವಿಲ್ಲ ಎಂದು ತಿಳಿಸಿರುವ ಬಿಜೆಪಿಯ ಹಿರಿಯ ಮುಖಂಡ ಶ್ರೀರಾಮುಲು, ತಾನು ಅಲ್ಲಿಗೆ ಹೋಗಲೇ ಇಲ್ಲ. ಇದು ಕಾಂಗ್ರೆಸ್ ರೂಪಿಸಿರುವ ತಂತ್ರ ಎಂದು ಪ್ರತಿಕ್ರಿಯಿಸಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಬಿಜೆಪಿ ಮುಖಂಡ ಜನಾರ್ಧನ ರೆಡ್ಡಿ, ಚುನಾವಣೆಯಲ್ಲಿ ರಾಜ್ಯದ ಜನತೆಯಿಂದ ಅನುಕಂಪ ಗಿಟ್ಟಿಸಲು ಈ ನಾಟಕವನ್ನು ಆಡುತ್ತಿದ್ದಾರೆ. ಬಿಜೆಪಿಯ ರಾಜಕೀಯ ಸಹನೆಯಿಂದ ಕೂಡಿದ್ದು, ಕಾಂಗ್ರೆಸ್ ಇಲ್ಲ ಸಲ್ಲದ ಆರೋಪ ಮಾಡುತ್ತಿದ್ದಾರೆ ಎಂದು ತಿಳಿಸಿದ್ದಾರೆ.
ಮತ್ತಷ್ಟು
ಮಹಾವೀರ ಜಯಂತಿ: ನಾಮಪತ್ರ ಸಲ್ಲಿಕೆಗೆ ರಜೆ
ಬಂಗಾರಪ್ಪ ಅನಾರೋಗ್ಯ: ಕಾಂಗ್ರೆಸ್ ಮೈತ್ರಿಗೆ ಹಿನ್ನಡೆ
ಶನಿವಾರ ಕರ್ನಾಟಕದಲ್ಲಿ ಸಿಇಟಿ ಪರೀಕ್ಷೆ
ಲೈವ್ ಬ್ಯಾಂಡ್: ಪರಿಗಣನೆಗೆ ಹೈಕೋರ್ಟ್ ಸೂಚನೆ
ರಾಜ್ಯಪಾಲರ ವಿರುದ್ಧ ದೂರು: ಯಡಿಯೂರ್
ಕುಮಾರ ಸ್ವಾಮಿ-ದೇವೇಗೌಡ ಮಾತುಕತೆ