ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಕಾಂಗ್ರೆಸ್ ಪಟ್ಟಿ ಪ್ರಕಟ: ಭುಗಿಲೆದ್ದ ಭಿನ್ನಮತ
ಕಾಂಗ್ರೆಸ್ 84 ಅಭ್ಯರ್ಥಿಗಳ ಮೊದಲನೆ ಪಟ್ಟಿ ಪ್ರಕಟವಾಗುತ್ತಿದ್ದಂತೆಯೇ ಕಾಂಗ್ರೆಸ್ ಪಾಳಯದಲ್ಲಿ ತೀವ್ರ ಅಸಮಾಧಾನ ತಲೆದೋರಿದೆ. ಮೊದಲ ಹಂತದ ಚುನಾವಣೆ ನಡೆಯಲಿರುವ 89 ಕ್ಷೇತ್ರಗಳಲ್ಲೂ ಕಾಂಗ್ರೆಸ್ ಬಂಡಾಯದ ಬಿಸಿ ಅನುಭವಿಸುವ ಸ್ಪೋಟಕ ವಾತಾವರಣ ನಿರ್ಮಾಣವಾಗಿದೆ.

ತುರುವೇಕೆರೆಯಲ್ಲಿ ಟಿಕೆಟ್ ಸಿಗದೆ ಸಿಡಿದೆದ್ದಿರುವ ನಟ ಜಗ್ಗೇಶ್, ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿ, ಪಕ್ಷೇತರರಾಗಿ ಸ್ಪರ್ಧಿಸುವುದಾಗಿ ಈಗಾಗಲೇ ಘೋಷಿಸಿದ್ದರು. ಇದಕ್ಕೆ ಪೂರಕವೆಂಬಂತೆ ಸಂಸತ್ ಸದಸ್ಯ ಅಂಬರಿಶ್, ಶ್ರೀರಂಗಪಟ್ಟಣ ಕ್ಷೇತ್ರದಲ್ಲಿ ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿಯುವುದಾಗಿ ಪ್ರಕಟಿಸಿದ್ದರು. ಆದರೆ ಕಾಂಗ್ರೆಸ್ ಹೈಕಮಾಂಡ್ ನಿನ್ನೆ (ಭಾನುವಾರ) ರಾತ್ರಿ ಅಂಬರೀಶ್ ಮತ್ತು ಜಗ್ಗೇಶ್ ಅವರಿಗೆ ಕ್ರಮವಾಗಿ ಶ್ರೀರಂಗಪಟ್ಟಣ ಹಾಗೂ ತುರುವೇಕೆರೆಯಲ್ಲಿ ಸ್ಪರ್ಧಿಸಲು ಟಿಕೆಟ್ ನೀಡಿ ಅವರನ್ನು ತಣಿಸಿದೆ.

ಮಂಡ್ಯ ಜಿಲ್ಲೆಯ ಬಹುತೇಕ ಎಲ್ಲ ಕ್ಷೇತ್ರಗಳಲ್ಲೂ ಬಂಡಾಯ ಭುಗಿಲೆದ್ದಿದೆ. ಮಾಜಿ ಸಂಸದ ಜಿ. ಮಾದೇಗೌಡ ಮತ್ತು ನಾಗಮಂಗಲ ಕ್ಷೇತ್ರದಿಂದ ಟಿಕೆಟ್ ಬಯಸಿದ್ದ ಮಾಜಿ ಶಾಸಕ ಎಲ್. ಆರ್. ಶಿವರಾಮೇಗೌಡ ಕಾಂಗ್ರೆಸ್ ತೊರೆದು ಬಿಜೆಪಿಗೆ ಪಕ್ಷಾಂತರಗೊಳ್ಳುವ ಎಲ್ಲ ಸೂಚನೆಗಳು ಇವೆ. ಚಿಕ್ಕಬಳ್ಳಾಪುರ ಸಂಸದ ಆರ್.ಎಲ್. ಜಾಲಪ್ಪ ಅವರೂ ತೀವ್ರ ಅಸಮಾಧಾನಗೊಂಡಿದ್ದು ಪಕ್ಷ ತೊರೆಯುವ ಒತ್ತಡದಲ್ಲಿದ್ದಾರೆ.

ಬೆಂಗಳೂರು ನಗರ ಜಿಲ್ಲೆ ವ್ಯಾಪ್ತಿಯಲ್ಲೂ ಬಂಡಾಯದ ಬಿಸಿ ಏರಿದೆ. ಮಹಾಲಕ್ಷ್ಮಿ ಬಡಾವಣೆಯಲ್ಲಿ ಪಾಲಿಕೆ ಮಾಜಿ ಸದಸ್ಯ ಎಂ. ನಾಗರಾಜ್, ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿ ಯುವ ಕಾಂಗ್ರೆಸ್ ಸಮಿತಿ ಉಪಾಧ್ಯಕ್ಷ ಬಿ.ಕೆ.ಅನಿಲ್‌ಕುಮಾರ್ ಬಂಡಾಯ ಎದ್ದಿದ್ದಾರೆ. ದೇವನಹಳ್ಳಿ ಮೀಸಲು ಕ್ಷೇತ್ರದಲ್ಲಿ ಮುನಿನರಸಿಂಹಯ್ಯನವರಲ್ಲೂ ಅಸಮಾಧಾನ ಭುಗಿಲೆದ್ದಿದೆ ಎಂಬುದು ಗಮನಾರ್ಹ ವಿಷಯ.
ಮತ್ತಷ್ಟು
ಸಿಲಿಂಡರ್ ಸ್ಪೋಟ:ಬಾಲಕನ ಸಾವು, 7ಮನೆ ಜಖಂ
ಎಸ್ಪಿ-ಜೆಡಿಎಸ್ ಮೈತ್ರಿ ಇಲ್ಲ-ಮೆರಾಜ್‌
ಲಾಡ್‌ಗೆ ಸೇರಿದ 3 ವಾಹನಗಳಿಗೆ ಬೆಂಕಿ
ಮಹಾವೀರ ಜಯಂತಿ: ನಾಮಪತ್ರ ಸಲ್ಲಿಕೆಗೆ ರಜೆ
ಬಂಗಾರಪ್ಪ ಅನಾರೋಗ್ಯ: ಕಾಂಗ್ರೆಸ್ ಮೈತ್ರಿಗೆ ಹಿನ್ನಡೆ
ಶನಿವಾರ ಕರ್ನಾಟಕದಲ್ಲಿ ಸಿಇಟಿ ಪರೀಕ್ಷೆ