ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಲಾರಿ ಚಾಲಕನ ಎನ್‌ಕೌಂಟರ್
ಏಳು ಲಕ್ಷ ರೂ. ಮೌಲ್ಯದ ಕಬ್ಬಿಣ ಕದ್ದು ಲಾರಿ ಸಮೇತ ಪರಾರಿಯಾಗುತ್ತಿದ್ದ ಕಳ್ಳನೊಬ್ಬ ಬೊಮ್ಮಸಂದ್ರ ಕೈಗಾರಿಕಾ ಪ್ರದೇಶದ ಬಳಿಯ ಹೆದ್ದಾರಿಯಲ್ಲಿ ಹೆಬ್ಬಗೋಡಿ ಪೊಲೀಸರ ಗುಂಡಿಗೆ ಬಲಿಯಾಗಿದ್ದಾನೆ ಎಂದು ತಿಳಿದುಬಂದಿದೆ.

ಪೊಲೀಸರ ಗುಂಡಿಗೆ ಹತನಾದವನು ನರಸಿಂಹಮೂರ್ತಿ(27). ತುಮಕೂರಿನವನಾದ ಈತ ಅತ್ತಿಬೆಲೆಯ ಮಂಜುನಾಥ ಟ್ರಾನ್ಸ್‌ಪೋರ್ಟ್ ಕಚೇರಿಯಲ್ಲಿ ಈ ಹಿಂದೆ ಕ್ಲೀನರ್ ಕೆಲಸ ಮಾಡುತ್ತಿದ್ದ.

ಇದೇ ಕಚೇರಿಯಲ್ಲಿ ನಿಲ್ಲಿಸಲಾಗಿದ್ದ ಕಬ್ಬಿಣ ತುಂಬಿದ ಲಾರಿಯನ್ನು ಈತ ಅಪಹರಿಸಿದ. ವಿಷಯ ತಿಳಿದ ಪೊಲೀಸರು ಚಂದಾಪುರದತ್ತ ಬರುತ್ತಿದ್ದ ಲಾರಿಯನ್ನು ಅಲ್ಲಿನ ಔಟ್‌ಪೋಸ್ಟ್ ಬಳಿ ತಡೆಯಲು ರಸ್ತೆಯಲ್ಲಿ ಬ್ಯಾರಿಕೇಡ್‌ಗಳನ್ನು ಇಟ್ಟಿದ್ದರು. ಆದರೆ ಮೂರ್ತಿ ಅವುಗಳ ಮೇಲೆಯೇ ಲಾರಿ ಹರಿಸಿ ಬೆಂಗಳೂರು ಕಡೆ ಪರಾರಿಯಾದ.

ಯಾರಂಡಹಳ್ಳಿ ಸಮೀಪ ಹೆಬ್ಬಗೊಡಿ ಹಾಗೂ ಬನ್ನೇರುಘಟ್ಟ ಪೊಲೀಸರು ಲಾರಿಯನ್ನು ಅಡ್ಡಗಟ್ಟಲು ಮುಂದಾದರು. ಆದರೆ ಮೂರ್ತಿ ಪೊಲೀಸರ ಮೇಲೆಯೇ ಲಾರಿ ಚಲಾಯಿಸಿದ. ಪೊಲೀಸರು ತಪ್ಪಿಸಿಕೊಂಡರೂ ಪೇದೆ ಅಪ್ರೋಜ್ ಖಾನ್ ಹಾಗೂ ಕೆಂಪಣ್ಣ ಗಾಯಗೊಂಡರು. ಪೊಲೀಸರು ಲಾರಿ ಚಾಲಕನಿಗೆ ಎಚ್ಚರಿಕೆ ನೀಡಿ ಗಾಳಿಯಲ್ಲಿ ಗುಂಡು ಹಾರಿಸಿದರು. ಪಿಎಸ್ಐ ಜಗದಿಶ್ ಜೀಪಿನಲ್ಲಿ ಲಾರಿ ಅಡ್ಡಗಟ್ಟಿದಾಗ ಆರೋಪಿ ಮೂರ್ತಿ ಜೀಪಿನ ಮೇಲೆ ಲಾರಿ ಹರಿಸಲು ಯತ್ನಿಸಿದಾಗ ಪಿಎಸ್ಐ ಜಗದಿಶ್ ಮತ್ತೆ ಗುಂಡು ಹಾರಿಸಿದರು. ಗುಂಡು ಚಾಲಕನ ದವಡೆ ಸೀಳಿತು. ಆದರೂ ಚಾಲಕ ಲಾರಿ ನಿಲ್ಲಿಸಲಿಲ್ಲ.

ಗಾಯದಲ್ಲಿಯೇ ನಾಲ್ಕು ಕಿ.ಮೀ ದೂರ ಲಾರಿ ಚಲಾಯಿಸಿದ್ದು, ಅನಂತರ ಲಾರಿ ನಿಲ್ಲಿಸಿ ಅದರಲ್ಲಿಯೇ ಅಸ್ವಸ್ಥಗೊಂಡು ಮಲಗಿದ್ದ. ಸ್ಥಳಾಕ್ಕಾಗಮಿಸಿದ ಪೊಲೀಸರು ಈತನನ್ನು ಆಸ್ಪತ್ರೆಗೆ ಸೇರಿಸಿದರು ಈತ ಮೃತಪಟ್ಟ ಎನ್ನಲಾಗಿದೆ.
ಮತ್ತಷ್ಟು
ಕಾಂಗ್ರೆಸ್ ಪಟ್ಟಿ ಪ್ರಕಟ: ಭುಗಿಲೆದ್ದ ಭಿನ್ನಮತ
ಸಿಲಿಂಡರ್ ಸ್ಪೋಟ:ಬಾಲಕನ ಸಾವು, 7ಮನೆ ಜಖಂ
ಎಸ್ಪಿ-ಜೆಡಿಎಸ್ ಮೈತ್ರಿ ಇಲ್ಲ-ಮೆರಾಜ್‌
ಲಾಡ್‌ಗೆ ಸೇರಿದ 3 ವಾಹನಗಳಿಗೆ ಬೆಂಕಿ
ಮಹಾವೀರ ಜಯಂತಿ: ನಾಮಪತ್ರ ಸಲ್ಲಿಕೆಗೆ ರಜೆ
ಬಂಗಾರಪ್ಪ ಅನಾರೋಗ್ಯ: ಕಾಂಗ್ರೆಸ್ ಮೈತ್ರಿಗೆ ಹಿನ್ನಡೆ