ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಜೆಡಿಎಸ್ ಅಭ್ಯರ್ಥಿಗಳ ಪಟ್ಟಿ ಪ್ರಕಟ
ಜೆಡಿಎಸ್ 69 ಅಭ್ಯರ್ಥಿಗಳ ಅಧಿಕೃತ ಪಟ್ಟಿಯನ್ನು ಪಕ್ಷದ ವರಿಷ್ಠ ಎಚ್.ಡಿ ದೇವೇಗೌಡರು ಇಂದು (ಸೋಮವಾರ) ಬೆಳಗ್ಗೆ ಪ್ರಕಟಿಸಿದ್ದು, ತನ್ಮೂಲಕ ಎಲ್ಲ ಪಕ್ಷಗಳಲ್ಲೂ ಮೂಡಿದ್ದ ಕುತೂಹಲಕ್ಕೆ ತೆರೆ ಎಳೆದಿದ್ದಾರೆ.

ಅಭ್ಯರ್ಥಿಗಳ ಪಟ್ಟಿ ಮತ್ತು ಕ್ಷೇತ್ರ ವಿವರ:

ನಾಗಮಂಗಲ-ಚಲುವರಾಯಸ್ವಾಮಿ,
ಪದ್ಮನಾಭನಗರ-ಪ್ರಸಾದ್ಬಾಬು,
ರಾಮನಗರ-ಎಚ್.ಡಿ.ಕುಮಾರಸ್ವಾಮಿ,
ಚಾಮರಾಜಪೇಟೆ - ಜಮೀರ್ ಅಹ್ಮದ್
ಪಾವಗಡ-ತಿಮ್ಮರಾಯಪ್ಪ,
ಎಚ್.ಡಿ.ಕೋಟೆ- ಎಂ.ಸಿ.ದೊಡ್ಡನಾಯಕ,
ಆನೇಕಲ್- ಮುನಿಯಪ್ಪ,
ಬ್ಯಾಟರಾಯನಪುರ-ಸಿ.ನಾರಾಯಣಸ್ವಾಮಿ,
ತುರುವೇಕೆರೆ-ಎಂ.ಡಿ. ಕೃಷ್ಣಪ್ಪ,
ಹೊಳೆನರಸೀಪುರ- ಎಚ್.ಡಿ.ರೇವಣ್ಣ,
ಮಳವಳ್ಳಿ- ಅನ್ನದಾನಿ,
ಮಾಗಡಿ- ಎಚ್.ಸಿ. ಬಾಲಕೃಷ್ಣ,
ಗಾಂಧಿನಗರ-ಎಸ್. ಶಿವಪ್ಪ,
ಶಿರಾ-ಬಿ.ಸತ್ಯನಾರಾಯಣ,
ಕನಕಪುರ-ಡಿ.ಎಂ.ವಿಶ್ವನಾಥ್
ಕುಣಿಗಲ್-ಡಿ.ನಾಗರಾಜಯ್ಯ
ಚನ್ನಪಟ್ಟಣ- ಎಂ.ಸಿ.ಅಶ್ವಥ್,
ಚಿಕ್ಕನಾಯಕನಹಳ್ಳಿ-ಬಿ.ಸುರೇಶ್ಬಾಬು
ಗುಬ್ಬಿ-ಹೆಚ್.ಆರ್.ಶ್ರೀನಿವಾಸ್,
ತಿಪಟೂರು-ನಂಜಾಮರಿ

ಭಿನ್ನಮತದ ಭಯದಿಂದ ಭಾನುವಾರ ತಡರಾತ್ರಿಯವರೆಗೂ ಪಕ್ಷದ ಮುಖಂಡರು ಪಟ್ಟಿಯಲ್ಲಿ ಹೆಸರು ಸೇರಿಸುವ, ತೆಗೆಯುವ ಪ್ರಕ್ರಿಯೆಯಲ್ಲಿ ನಿರತರಾಗಿದ್ದರು. ಪಕ್ಷದ ಹೆಚ್ಚಿನ ಮಾಜಿ ಶಾಸಕರಿಗೆ ಟಿಕೆಟ್ ನೀಡಲಾಗಿದೆ. ಖಚಿತ ಅಭ್ಯರ್ಥಿಗಳಿಗೆ ದೇವೇಗೌಡರು ಬಿ ಫಾರಂ ನೀಡಿದ್ದಾರೆ.

ಜೆಡಿಎಸ್ ಕಚೇರಿಯಲ್ಲಿ ಭಾನುವಾರ ರಾತ್ರಿ 8.30ಕ್ಕೆ ಆರಂಭವಾದ ಪಕ್ಷದ ಸಂಸದರ ಸಭೆಯಲ್ಲಿ ಎಚ್.ಡಿ.ದೇವೇಗೌಡ, ಮೆರಾಜುದ್ದೀನ್ ಪಟೇಲ್ ಮತ್ತಿತರ ಮುಖಂಡರು ಭಾಗವಹಿಸಿದ್ದರು.
ಮತ್ತಷ್ಟು
ಲಾರಿ ಚಾಲಕನ ಎನ್‌ಕೌಂಟರ್
ಕಾಂಗ್ರೆಸ್ ಪಟ್ಟಿ ಪ್ರಕಟ: ಭುಗಿಲೆದ್ದ ಭಿನ್ನಮತ
ಸಿಲಿಂಡರ್ ಸ್ಪೋಟ:ಬಾಲಕನ ಸಾವು, 7ಮನೆ ಜಖಂ
ಎಸ್ಪಿ-ಜೆಡಿಎಸ್ ಮೈತ್ರಿ ಇಲ್ಲ-ಮೆರಾಜ್‌
ಲಾಡ್‌ಗೆ ಸೇರಿದ 3 ವಾಹನಗಳಿಗೆ ಬೆಂಕಿ
ಮಹಾವೀರ ಜಯಂತಿ: ನಾಮಪತ್ರ ಸಲ್ಲಿಕೆಗೆ ರಜೆ