ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಎಲ್ಲೆಲ್ಲೂ ಮುಖವಾಡ ಸಾರ್ ಮುಖವಾಡ!
NRB
ಕರ್ನಾಟಕದಲ್ಲಿ ಕಂಡುಬರುತ್ತಿರುವ ರಾಜಕೀಯ ಚದುರಂಗದಾಟ ಹಾಗೂ ರಂಗೇರುತ್ತಿರುವ ಚುನಾವಣಾ ಸನ್ನಿವೇಶದ ಹಿನ್ನೆಲೆಯಲ್ಲಿ ಬೆಂಗಳೂರಿನ ಇವೆಂಟ್ ಹಾಗೂ ಮಾಧ್ಯಮಸಂಸ್ಥೆ ನ್ಯೂಸ್ರೂಮ್ ರಾಜಕೀಯ ಮುಖಂಡರ ಮುಖವಾಡಗಳನ್ನು ಬಿಡುಗಡೆ ಮಾಡುತ್ತಿದೆ.

ಈಗಾಗಲೇ ರಾಷ್ಟ್ರೀಯ ಹಿಂದೂಸ್ಥಾನ್ ಸೇನಾದ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಅವರ ಮುಖವಾಡ ಸಿದ್ಧಗೊಂಡಿದ್ದು ಅದನ್ನು ಸಂಸ್ಥೆಯ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ರವಿಶಂಕರ ಬೆಟ್ಟಂಪಾಡಿ ಬಿಡುಗಡೆ ಮಾಡಿದ್ದಾರೆ. ಇದರ ಜೊತೆ ಜೊತೆಗೆ ದೇವೇಗೌಡ, ಅನಂತ್ಕುಮಾರ್, ಕುಮಾರಸ್ವಾಮಿ, ಯಡಿಯೂರಪ್ಪ ಇವರೇ ಮೊದಲಾದ ನಾಯಕರ ಮುಖವಾಡಗಳೂ ಸಿದ್ಧಗೊಳ್ಳುತ್ತಿವೆ.

ಅದು ಯಾವುದೇ ಕ್ಷೇತ್ರವಿರಲಿ ಅದಕ್ಕೆ ಸಂಬಂಧಿಸಿದ ಅಭ್ಯರ್ಥಿಗಳ ನಗುಮೊಗದ ಚಿತ್ರ ಲಭ್ಯವಾದರೆ ಕೇವಲ ಒಂದೇ ದಿನದಲ್ಲಿ ಈ ಮುಖವಾಡವನ್ನು ಸಿದ್ಧಪಡಿಸಿಕೊಡುವುದು ನ್ಯೂಸ್ರೂಮ್ ಸಂಸ್ಥೆಯ ವೈಶಿಷ್ಟ್ಯ. ಸದರಿ ಮುಖವಾಡಕ್ಕೆ ಕೇವಲ 5 ರಿಂದ 6 ರೂಪಾಯಿ ಮಾತ್ರವೇ ಖರ್ಚಾಗಲಿದ್ದು, ಚುನಾವಣಾ ಆಯೋಗದ ಸ್ಪಷ್ಟ ನಿರ್ದೇಶನದ ಹಿನ್ನೆಲೆಯಲ್ಲಿ ಪ್ಲಾಸ್ಟಿಕ್ ಬದಲಿಗೆ ದಪ್ಪ ಕಾಗದವನ್ನು ಈ ಮುಖವಾಡ ತಯಾರಿಕೆಯಲ್ಲಿ ಬಳಸಲಾಗಿರುವುದು ಇದರ ಜನಪ್ರಿಯತೆಗೆ ಸಾಕ್ಷಿ.

ಗುಜರಾತ್ ಕಳೆದ ಬಾರಿ ವಿಧಾನಸಭಾ ಚುನಾವಣೆಗಳು ನಡೆದಾಗ ಮುಖ್ಯಮಂತ್ರಿ ನರೇಂದ್ರ ಮೋದಿಯವರ ಮುಖವಾಡಗಳು ಭಾರೀ ಜನಪ್ರಿಯವಾದವು. ಅದನ್ನು ಗಮನದಲ್ಲಿರಿಸಿಕೊಂಡು ರೂಪಿಸಲಾಗಿರುವ ಈ ಮುಖವಾಡಗಳು ಈಗ ಎಷ್ಟೊಂದು ಹೈಪ್ ಸೃಷ್ಟಿಸಿದೆ ಎಂದರೆ, ಸಂಸ್ಥೆಯುಮುಖವಾಡ ಸೃಷ್ಟಿಗೆಂದೇ ಸಂಪೂರ್ಣ ತೊಡಗಿಸಿಕೊಂಡಿದೆ. ಪ್ರಮೋದ್ ಮುತಾಲಿಕ್ರವರ ಮುಖವಾಡ ಬಿಡುಗಡೆಯಾಗುತ್ತಿದ್ದಂತೆಯೇ ಬೈಲಹೊಂಗಲ, ಬೆಳಗಾಂ, ಗುಲ್ಬರ್ಗಾ, ರಾಯಚೂರು, ದಕ್ಷಿಣ ಕನ್ನಡ ಇವೇ ಮೊದಲಾದ ದೂರದ ಪ್ರದೇಶಗಳಿಂದ ಸಂಸ್ಥೆಗೆ ಮುಖವಾಡದ ಬೇಡಿಕೆ ಬಂದಿದೆ.

ಒಟ್ಟಿನಲ್ಲಿ, ಕರೆದಾಗ ‘ಓ’ ಎನ್ನಲೊಂದು ಮುಖವಾಡ..!! ನೀವು ಚುನಾವಣಾ ಪ್ರಚಾರ ಸಭೆಯಲ್ಲಿ ಮಂಜಾ, ರಂಗಾ, ಸಿದ್ದಾ, ಪರ್ಮೇಶೀ, ಸೀನಾ ಎಂದು ಯಾರನ್ನು ಕೂಗಿದರೂ ತಿರುಗಿ ನೋಡುವುದು ಒಂದೋ ಮುತಾಲಿಕ್ ಮುಖ, ಇಲ್ಲವೇ ಕುಮಾರಣ್ಣ, ದೇವೇಗೌಡರ ಮುಖಗಳು ಅಥವಾ ಈಗ ‘ಅಪೂರ್ವ ಜೋಡಿ’ ಎಂದೇ ಹೆಸರಾಗಿರುವ ಯಡಿಯೂರಪ್ಪ-ಅನಂತ್ಕುಮಾರ್ ಮುಖಗಳು!
ಮತ್ತಷ್ಟು
ಪರಪ್ಪನ ಅಗ್ರಹಾರದಲ್ಲಿ ಕೈದಿಗಳ ಗಾಂಧಿಗಿರಿ
ಒಂದೇ ದಿನದಲ್ಲಿ 214 ನಾಮಪತ್ರ ಸಲ್ಲಿಕೆ
ಸೂಕ್ತದಾಖಲೆಗಳಿಲ್ಲದೆ 10ಕೋ. ನಗದು ಸಾಗಾಟ
ಕಾಂಗ್ರೆಸ್‌ಗೆ ಸೋಲಿನ ಭೀತಿ: ಅನಂತ್‌ಕುಮಾರ್ ಲೇವಡಿ
ಬಿಜೆಪಿಯದು ಜನಾನುರಾಗಿ ಬಜೆಟ್: ಯಡಿಯೂರಪ್ಪ
ಜೆಡಿಎಸ್ ಅಭ್ಯರ್ಥಿಗಳ ಪಟ್ಟಿ ಪ್ರಕಟ