ಮೇ 16ರಂದು ರಾಜ್ಯದಲ್ಲಿ ನಡೆಯಲಿರುವ ದ್ವಿತೀಯ ಹಂತದ ಮತದಾನಕ್ಕೆ ಚುನಾವಣಾ ಆಯೋಗವು ಮಂಗಳವಾರ ಅಧಿಸೂಚನೆ ಹೊರಡಿಸಿದೆ.
ರಾಯಚೂರು, ಕೊಪ್ಪಳ, ಉತ್ತರ ಕನ್ನಡ, ಬಳ್ಳಾರಿ, ಚಿತ್ರದುರ್ಗ, ದಾವಣಗೆರೆ, ಶಿವಮೊಗ್ಗ, ಉಡುಪಿ, ಚಿಕ್ಕಮಗಳೂರು, ದಕ್ಷಿಣ ಕನ್ನಡ ಈ ಹತ್ತು ಜಿಲ್ಲೆಗಳ 66 ವಿಧಾನಸಭಾ ಸ್ಥಾನಗಳಿಗೆ ಚುನಾವಣೆ ನಡೆಯಲಿದ್ದು ಸುಮಾರು 1,10,26,524 ಮಂದಿ ಮತಚಲಾಯಿಸಲಿದ್ದಾರೆ.
ದ್ವಿತೀಯ ಹಂತದ ಮತದಾನಕ್ಕೆ ಏಪ್ರಿಲ್ 29 ಕೊನೆಯ ದಿನವಾಗಿದ್ದು ಮರದಿನ ನಾಮಪತ್ರ ಪರಿಶೀಲನೆ ನಡೆಯಲಿದೆ. ನಾಮಪತ್ರ ಹಿಂತೆಗೆತಕ್ಕೆ ಮೇ 2 ಕೊನೆಯ ದಿನಾಂಕ.
ತೃತೀಯ ಹಾಗೂ ಕೊನೆಯ ಹಂತದ ಮತದಾನಕ್ಕೆ ಮೇ 22 ರಂದು ಅಧಿಸೂಚನೆ ಹೊರಡಿಸಲಾಗುವುದು. ಮೊದಲ ಹಂತದ ಮತದಾನ ಮೇ 10ರಂದು ನಡೆಯಲಿದ್ದು ಏಪ್ರಿಲ್ 16ರಿಂದ ಚುನಾವಣಾ ಪ್ರಕ್ರಿಯೆಗಳು ಆರಂಭಗೊಡಿವೆ.
|