ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಠಾಣೆಯಲ್ಲಿ ಶರಣಾಗುವಂತೆ ರೌಡಿಗಳಿಗೆ ಸೂಚನೆ
ಬೆಂಗಳೂರು: ಜಾಮೀನಿನ ಮೇಲೆ ಜೈಲಿನಿಂದ ಬಿಡುಗಡೆಯಾಗಿ ತಲೆಮರೆಸಿಕೊಂಡಿರುವ ರೌಡಿಗಳು ಸಮೀಪದ ಪೊಲೀಸ್ ಠಾಣೆಯಲ್ಲಿ ಶರಣಾಗಲು ಕರೆ ನೀಡಿರುವ ನಗರ ಪೊಲೀಸರು ತಪ್ಪಿದ್ದಲ್ಲಿ ಕಠಿಣ ಕಾನೂನು ಕ್ರಮ ಎದುರಿಸಬೇಕಾದೀತು ಎಂಬ ಎಚ್ಚರಿಕೆ ನೀಡಿದ್ದಾರೆ.

ಚುನಾವಣೆ ಹಿನ್ನೆಲೆಯಲ್ಲಿ ಕಾನೂನು ಸುವ್ಯವಸ್ಥೆಗೆ ಧಕ್ಕೆಯಾಗದಂತೆ ಮುನ್ನೆಚ್ಚರಿಕೆ ವಹಿಸಲು ಈ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ನಗರ ಜಂಟಿ ಪೊಲೀಸ್ ಆಯುಕ್ತ ಗೋಪಾಲ್.ಬಿ.ಹೊಸೂರ್ ಸುದ್ದಿಗಾರರಿಗೆ ತಿಳಿಸಿದ್ದಾರೆ.

ಕೆಲವು ರೌಡಿಗಳು ಅಪರಾಧ ಚಟುವಟಿಕೆಯಲ್ಲಿ ನಿರತರಾಗಿರುವ ಬಗ್ಗೆ ನಮ್ಮ ಬಳಿ ವರದಿಗಳಿದ್ದು, ಅಂತಹ ರೌಡಿಗಳು ಶೀಘ್ರದಲ್ಲಿ ಹತ್ತಿರದ ಠಾಣೆಗಳಿಗೆ ಬಂದು ಶರಣಾಗದಿದ್ದರೆ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಅವರು ಎಚ್ಚರಿಸಿದರು.

ನಗರದಲ್ಲಿರುವ ರೌಡಿಗಳನ್ನು ಬಂಧಿಸಲು ಎಲ್ಲಾ ವಿಭಾಗಗಳ ಡಿಸಿಪಿಗಳಿಗೆ ಆದೇಶ ನೀಡಲಾಗಿದ್ದು, ಈಗಾಗಲೆ ಎಲ್ಲಾ ಪೊಲೀಸ್ ಠಾಣೆಗಳಲ್ಲೂ ರೌಡಿಗಳನ್ನು ಬಂಧಿಸುವ ಪ್ರಕ್ರಿಯೆ ಮುಂದುವರೆದಿದೆ. ಇಲ್ಲಿ ಯಾವುದೇ ತೊಂದರೆ ಉಂಟಾಗದಂತೆ ಮುನ್ನೆಚ್ಚರಿಕೆ ವಹಿಸಲಾಗಿದೆ ಎಂದರು.

500 ರೌಡಿಗಳ ಬಂಧನ:
ನಗರದಲ್ಲಿರುವ 1781 ರೌಡಿಗಳ ಪೈಕಿ ಈಗಾಗಲೆ 500 ರೌಡಿಗಳನ್ನು ಬಂಧಿಸಲಾಗಿದೆ. ಉಳಿದವರ ಬಂಧನಕ್ಕೆ ಕ್ಷಿಪ್ರ ಕಾರ್ಯಾಚರಣೆ ನಡೆಸಲಾಗುತ್ತಿದೆ. ಯಾವುದೇ ತಕರಾರು ಮಾಡದೆ ಸ್ವಯಂ ಪ್ರೇರಣೆಯಿಂದ ಠಾಣೆಗೆ ಬಂದು ಶರಣಾಗುವ ರೌಡಿಗಳಿಗೆ ಯಾವುದೇ ತೊಂದರೆ ಇರುವುದಿಲ್ಲ ಎಂದು ಅವರು ನುಡಿದರು.

ಉತ್ತರ ಪ್ರದೇಶ ಹಾಗೂ ಬಿಹಾರದಿಂದ ನಗರಕ್ಕೆ ಅಪಾರ ಪ್ರಮಾಣದ ಶಸ್ತ್ರಾಸ್ತ್ರ ಪೂರೈಕೆಯಾಗಿವೆ ಎಂಬ ಮಾಹಿತಿ ಇದೆ. ಇದನ್ನು ತಡೆಗಟ್ಟಲು ಎರಡು ರಾಜ್ಯಗಳ ಪೊಲೀಸರೊಂದಿಗೆ ಚರ್ಚೆ ನಡೆಸಲಾಗಿದೆ. ಈಗಾಗಲೇ ಬಂಧಿತ ರೌಡಿಗಳಿಂದ 45 ಕ್ಕೂ ಹೆಚ್ಚು ರಿವಾಲ್ವರ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.
ಮತ್ತಷ್ಟು
ಎರಡನೆ ಹಂತದ ಚುನಾವಣೆಗೆ ಅಧಿಸೂಚನೆ
ಎಲ್ಲೆಲ್ಲೂ ಮುಖವಾಡ ಸಾರ್ ಮುಖವಾಡ!
ಪರಪ್ಪನ ಅಗ್ರಹಾರದಲ್ಲಿ ಕೈದಿಗಳ ಗಾಂಧಿಗಿರಿ
ಒಂದೇ ದಿನದಲ್ಲಿ 214 ನಾಮಪತ್ರ ಸಲ್ಲಿಕೆ
ಸೂಕ್ತದಾಖಲೆಗಳಿಲ್ಲದೆ 10ಕೋ. ನಗದು ಸಾಗಾಟ
ಕಾಂಗ್ರೆಸ್‌ಗೆ ಸೋಲಿನ ಭೀತಿ: ಅನಂತ್‌ಕುಮಾರ್ ಲೇವಡಿ