ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಭ್ರಷ್ಟರ ಮನೆ ಮೇಲೆ ಲೋಕಾಯುಕ್ತರ ದಾಳಿ
ತಮ್ಮ ದಾಳಿಯನ್ನು ಮತ್ತೆ ಮುಂದುವರಿಸಿರುವ ಲೋಕಾಯುಕ್ತ ನ್ಯಾಯಮೂರ್ತಿ ಎನ್.ಸಂತೋಷ್ ಹೆಗ್ಡೆ ಮಂಗಳವಾರ ಕೆಲವು ಭ್ರಷ್ಟ ಅಧಿಕಾರಿಗಳ ಕಚೇರಿ ಹಾಗೂ ಮನೆ ಮೇಲೆ ದಾಳಿ ನಡೆಸಿದ್ದಾರೆ.

ಲೋಕಾಯುಕ್ತರು ಇಂದು ಬೆಳಗ್ಗೆ ಬೆಂಗಳೂರು, ಚಿಕ್ಕಪೇಟೆ, ಬೆಳಗಾವಿ, ಕೊಪ್ಪಳದಲ್ಲಿ ಅಧಿಕಾರಿಗಳ ಮನೆ ಮೇಲೆ ದಾಳಿ ನಡೆಸಿ ಅಪಾರ ಪ್ರಮಾಣದ ಆಸ್ತಿಯನ್ನು ವಶಪಡಿಸಿಕೊಂಡಿದ್ದಾರೆ. ಇದರಿಂದ ಭ್ರಷ್ಟರಲ್ಲಿ ಮತ್ತೆ ನಡುಕ ಶುರುವಾದಂತಾಗಿದೆ.

ಯಶವಂತಪುರದ ಎಸಿಪಿ ಪ್ರತಾಪ್‌ ಸಿಂಹ, ವಿಧಾನಸೌಧದ ಭದ್ರತಾ ವಿಭಾಗದ ಡಿಸಿಪಿ ಲಕ್ಷ್ಮಣ್ಸಿಂಗ್, ಚಿಕ್ಕಪೇಟೆಯ ಎಸಿಪಿ ವೆಂಕಟಸ್ವಾಮಿ, ಬೆಳಗಾವಿ ಆರ್ಟಿಒ ಇನ್ಸ್ಪೆಕ್ಟರ್ ಹನುಮಸೇಠ್, ಕೊಪ್ಪಳ ಪಂಚಾಯಿತಿಯ ಕಾರ್ಯನಿರ್ವಾಹಕ ಎಂಜಿನಿಯರ್ ಲಷ್ಕರಿನಾಯಕ್ ಹಾಗೂ ದಾವಣಗೆರೆಯ ಡಿವೈಎಸ್ಪಿ ಆಂಜನೇಯ ಅವರ ಕಚೇರಿ ಹಾಗೂ ಮನೆ ಮೇಲೆ ದಾಳಿ ನಡೆದಿದೆ.

ಲೋಕಾಯುಕ್ತರ ದಾಳಿ ಮುಂದುವರೆಯುತ್ತಿದ್ದು, ಇದರಿಂದ ಅಧಿಕಾರಿಗಳು ಎಚ್ಚೆತ್ತುಕೊಂಡಿದ್ದಾರೆ. ಲೋಕಾಯುಕ್ತರು ಪೂರ್ವಯೋಜಿತವಾಗಿ ಈ ದಾಳಿ ಸಂಘಟಿಸಿದ್ದಾರೆ ಎನ್ನಲಾಗಿದೆ.
ಮತ್ತಷ್ಟು
ಠಾಣೆಯಲ್ಲಿ ಶರಣಾಗುವಂತೆ ರೌಡಿಗಳಿಗೆ ಸೂಚನೆ
ಎರಡನೆ ಹಂತದ ಚುನಾವಣೆಗೆ ಅಧಿಸೂಚನೆ
ಎಲ್ಲೆಲ್ಲೂ ಮುಖವಾಡ ಸಾರ್ ಮುಖವಾಡ!
ಪರಪ್ಪನ ಅಗ್ರಹಾರದಲ್ಲಿ ಕೈದಿಗಳ ಗಾಂಧಿಗಿರಿ
ಒಂದೇ ದಿನದಲ್ಲಿ 214 ನಾಮಪತ್ರ ಸಲ್ಲಿಕೆ
ಸೂಕ್ತದಾಖಲೆಗಳಿಲ್ಲದೆ 10ಕೋ. ನಗದು ಸಾಗಾಟ