ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ರಾಜೀನಾಮೆಗೆ ನೀಡಲು ಮುಂದಾಗಿದ್ದರೇ ಕೃಷ್ಣ?
PIB
ತಮ್ಮ ಆಪ್ತ ಆರ್.ವಿ.ದೇವರಾಜ್‌ಗೆ ಟಿಕೆಟ್ ಕೊಡಿಸಲು ಸಾಧ್ಯವಾಗದ ಅಸಮಾಧಾನದಲ್ಲಿ ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಚುನಾವಣೆ ನಿರ್ವಹಣೆ ಮತ್ತು ಸಮನ್ವಯ ಸಮಿತಿ ಅಧ್ಯಕ್ಷ ಸ್ಥಾನ ತೊರೆಯಲು ಮುಂದಾಗಿದ್ದರು ಎನ್ನಲಾಗಿದೆ. ಆದರೆ ಸಂಭಾವ್ಯ ಬಿಕ್ಕಟ್ಟನ್ನು ಅರಿತ ವರಿಷ್ಠರು ಚಿಕ್ಕಪೇಟೆಯಿಂದ ಸ್ಪರ್ಧಿಸಲು ಆರ್.ವಿ.ದೇವರಾಜ್ ಅವರಿಗೆ ಟಿಕೆಟ್ ನೀಡಿದ ನಂತರ ಕೃಷ್ಣ ಸಮಾಧಾನಗೊಂಡರು ಎಂದು ತಿಳಿದುಬಂದಿದೆ.

ಅದಕ್ಕೂ ಮುನ್ನ ಹೈಕಮಾಂಡ್ ಪಿ.ಆರ್.ರಮೇಶ್ ಹೆಸರಿಗೆ ಒಪ್ಪಿಗೆ ಸೂಚಿಸಿದಾಗ, ಚುನಾವಣಾ ಸಮಿತಿ ಅಧ್ಯಕ್ಷನಾಗಿ ನನ್ನ ಮಾತು ನಡೆಯುವುದಿಲ್ಲ ಎಂದಾದರೆ ಈ ಹುದ್ದೆಯಲ್ಲಿ ಯಾಕೆ ಮುಂದುವರೆಯಬೇಕು ಎಂದು ಬೇಸರಗೊಂಡ ಕೃಷ್ಣ ರಾಜೀನಾಮೆಗೆ ಮುಂದಾದರು ಎನ್ನಲಾಗಿದೆ.

ರಾಜ್ಯದಲ್ಲಿ ಪಕ್ಷದ ಉಸ್ತುವಾರಿ ವಹಿಸಿರುವ ಕೇಂದ್ರ ಸಚಿವ ಪೃಥ್ವಿರಾಜ್ ಚವ್ಹಾಣ್ ಕೃಷ್ಣರನ್ನು ಸಂತೈಸುವ ಯತ್ನ ಮಾಡಿದರು. ಅದರ ಫಲವಾಗಿ ರಮೇಶ್ ಇನ್ನೂ ಬಿ ಫಾರಂ ನೀಡಲಾಗಿಲ್ಲ ಎನ್ನಲಾಗಿದೆ.

ಕೃಷ್ಣರ ಆಪ್ತರೆಂದು ಗುರುತಿಸಿಕೊಂಡಿದ್ದ ದೇವರಾಜ್ ಚಾಮರಾಜಪೇಟೆಯಿಂದ ಎರಡು ಬಾರಿ ಆಯ್ಕೆಯಾಗಿದ್ದು, ಕಳೆದ ಬಾರಿ ಈ ಕ್ಷೇತ್ರವನ್ನು ತಮ್ಮ ನಾಯಕ ಮೆಚ್ಚಿನ ಕೃಷ್ಣ ಅವರಿಗೆ ಬಿಟ್ಟುಕೊಟ್ಟಿದ್ದರು ಎಂಬುದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದಾಗಿದೆ.
ಮತ್ತಷ್ಟು
ಎರಡೆರಡು ಕಡೆಯಲ್ಲಿ ಮಾಜಿ ಮುಖ್ಯಮಂತ್ರಿಗಳ ಸ್ಫರ್ಧೆ
ಭ್ರಷ್ಟರ ಮನೆ ಮೇಲೆ ಲೋಕಾಯುಕ್ತರ ದಾಳಿ
ಠಾಣೆಯಲ್ಲಿ ಶರಣಾಗುವಂತೆ ರೌಡಿಗಳಿಗೆ ಸೂಚನೆ
ಎರಡನೆ ಹಂತದ ಚುನಾವಣೆಗೆ ಅಧಿಸೂಚನೆ
ಎಲ್ಲೆಲ್ಲೂ ಮುಖವಾಡ ಸಾರ್ ಮುಖವಾಡ!
ಪರಪ್ಪನ ಅಗ್ರಹಾರದಲ್ಲಿ ಕೈದಿಗಳ ಗಾಂಧಿಗಿರಿ