ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ದೇವರ ಮೊರೆ ಹೋಗುತ್ತಿರುವ ರಾಜಕಾರಣಿಗಳು
ಚುನಾವಣೆ ಹತ್ತಿರ ಬರುತ್ತಿದ್ದಂತೆಯೇ ರಾಜಕಾರಣಿಗಳಿಗೆ ದೇವರುಗಳ ಮೇಲೆ ಅಪಾರ ನಂಬಿಕೆ ಶುರುವಾಗುತ್ತದೆ. ಹಿಂದೆ ತಾವು ಮುಖ ಹಾಕದ ದೇಗುಲಗಳು ಸೇರಿದಂತೆ ಅನೇಕ ಯಾತ್ರಾ ಸ್ಥಳಗಳಿಗೆ ಭೇಟಿ ನೀಡಿ ತಮ್ಮನ್ನು ಗೆಲ್ಲಿಸುವಂತೆ ದೇವರ ಮೊರೆ ಹೋಗುತ್ತಿದ್ದಾರೆ.

ಬುಧವಾರ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನಗರದ ಶಂಕರಮಠಕ್ಕೆ ಭೇಟಿ ನೀಡಿ ದೇವರಿಗೆ ವಿಶೇಷ ಪೂಜೆ ಸಲ್ಲಿಸಿ ತಮಗೆ ಚುನಾವಣೆಯಲ್ಲಿ ಜಯವಾಗಲೆಂದು ಪ್ರಾರ್ಥಿಸಿದರು. ನಂತರ ಜ್ಯೋತಿಷಿ ಸೋಮಯಾಜಿಯವರನ್ನು ಭೇಟಿಯಾಗಿ ತಮ್ಮ ಮುಂದಿನ ರಾಜಕೀಯ ಭವಿಷ್ಯದ ಬಗ್ಗೆ ಕೆಲ ಹೊತ್ತು ಚರ್ಚಿಸಿದರು.

ಎರಡು ದಿನಗಳ ಹಿಂದೆ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು ಕುಟುಂಬ ಸಮೇತ ದೇವಾಲಯಕ್ಕೆ ತೆರಳಿ ಯಜ್ಞ-ಯಾಗಾದಿಗಳನ್ನು ಮಾಡಿ ತಮ್ಮ ಪಕ್ಷ ಬಹುಮತದಿಂದ ಗೆದ್ದು ಬರುವಂತೆ ಪ್ರಾರ್ಥಿಸಿದ್ದಾರೆ. ದೇವೇಗೌಡರು ಹಾಗೂ ಯಡಿಯೂರಪ್ಪ ದೇಗುಲಗಳಿಗೆ ಹೋಗುವುದರಲ್ಲಿ ಎಲ್ಲರಿಗಿಂತ ಒಂದು ಹೆಜ್ಜೆ ಮುಂದು. ದೇವೇಗೌಡರು ಆಗಾಗ ತಮ್ಮ ಮನೆಯಲ್ಲಿ ಹೋಮಗಳನ್ನು ಮಾಡಿಸುತ್ತಿರುತ್ತಾರೆ.

ಜೆಡಿಎಸ್ ತೊರೆದು ಬಿಎಸ್ಪಿ ಸೇರಿದ ಡಿ.ಟಿ.ಜಯಕುಮಾರ್ ಕೂಡಾ ಇಂದು ಚಾಮುಂಡೇಶ್ವರಿ ಕ್ಷೇತ್ರದಿಂದ ಸ್ಪರ್ಧಿಸಲು ನಾಮಪತ್ರ ಸಲ್ಲಿಸುವ ಮುನ್ನ ಪತ್ನಿ ಸಮೇತ ದೇವಸ್ಥಾನಕ್ಕೆ ಬಂದು ತಟ್ಟೆಯಲ್ಲಿ ನಾಮಪತ್ರ ಇಟ್ಟು ಪೂಜೆ ಸಲ್ಲಿಸಿ, ನಂತರ ನಾಮಪತ್ರ ಸಲ್ಲಿಸಿದರು. ಮೊನ್ನೆ ತಾನೇ ಬಿಜೆಪಿ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ ಪ್ರಮೀಳಾ ನೇಸರ್ಗಿ, ಯಾರೋ ಜ್ಯೋತಿಷಿ ಹೇಳಿದರೆಂದು ಕೈಯಲ್ಲಿ ನಿಂಬೆಹಣ್ಣು ಹಿಡಿದು ನಾಮಪತ್ರ ಸಲ್ಲಿಸುವ ಮೊದಲು ಅದನ್ನು ಆ ಪತ್ರದ ಮೇಲೆ ತಿಕ್ಕಿ, ನಂತರ ಸಲ್ಲಿಸಿದ್ದಾರೆ. ಹೀಗೆ ಚುನಾವಣೆ ಬಂತೆಂದರೆ ಜ್ಯೋತಿಷಿಗಳಿಗೆ ಹಾಗೂ ಮಂತ್ರವಾದಿಗಳಿಗೆ ಸುಗ್ಗಿಯ ಕಾಲ.
ಮತ್ತಷ್ಟು
ಬಿಎಸ್ಪಿಗೆ ಹಾರಿದ ಡಿ.ಟಿ.ಜಯಕುಮಾರ್
ರಾಜೀನಾಮೆಗೆ ನೀಡಲು ಮುಂದಾಗಿದ್ದರೇ ಕೃಷ್ಣ?
ಎರಡೆರಡು ಕಡೆಯಲ್ಲಿ ಮಾಜಿ ಮುಖ್ಯಮಂತ್ರಿಗಳ ಸ್ಫರ್ಧೆ
ಭ್ರಷ್ಟರ ಮನೆ ಮೇಲೆ ಲೋಕಾಯುಕ್ತರ ದಾಳಿ
ಠಾಣೆಯಲ್ಲಿ ಶರಣಾಗುವಂತೆ ರೌಡಿಗಳಿಗೆ ಸೂಚನೆ
ಎರಡನೆ ಹಂತದ ಚುನಾವಣೆಗೆ ಅಧಿಸೂಚನೆ