ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಬಂಗಾರಪ್ಪನಿಗೇಕೆ ಹೆದರಲಿ: ಯಡಿಯೂರ್
ಶಿಕಾರಿಪುರ: ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಶಿಕಾರಿಪುರ ಕ್ಷೇತ್ರದಿಂದ ಸ್ಪರ್ಧಿಸಲು ಗುರವಾರ ನಾಮಪತ್ರ ಸಲ್ಲಿಸಿದರು.

ಬೆಳಗ್ಗೆ ತಮ್ಮ ಮನೆ ದೇವರಿಗೆ ಪೂಜೆ ಸಲ್ಲಿಸಿ ಅಲ್ಲಿಂದ ಕುಟುಂಬ ವರ್ಗ ಹಾಗೂ ನೂರಾರು ಬೆಂಬಲಿಗರೊಂದಿಗೆ ಆಗಮಿಸಿದ ಅವರು ಶಿಕಾರಿಪುರದ ಹುಚ್ಚರಾಯ ಸ್ವಾಮಿ ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಿ ತಾವು ಗೆದ್ದು ಬರಲು ಆಶೀರ್ವದಿಸುವಂತೆ ಪ್ರಾರ್ಥಿಸಿದರು. ಇವರ ಜೊತೆ ಮಾಜಿ ಸಚಿವರಾದ ಶಂಕರಮೂರ್ತಿ, ಈಶ್ವರಪ್ಪ ಹಾಗೂ ರಾಮಚಂದ್ರಗೌಡರು ಕೂಡಾ ಇದ್ದರು.

ನಾಮಪತ್ರ ಸಲ್ಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಿಕಾರಿಪುರದ ಜನತೆಗೆ ನಾನು ಯಾವತ್ತಿಗೂ ಋಣಿ. ಕಳೆದ 5 ಬಾರಿ ನನ್ನನ್ನು ಈ ಕ್ಷೇತ್ರದಿಂದ ಗೆಲ್ಲಿಸಿ ಶಾಸಕ, ಹಣಕಾಸು ಸಚಿವ, ಉಪಮುಖ್ಯಮಂತ್ರಿ, ಮುಖ್ಯಮಂತ್ರಿ ಹುದ್ದೆಯನ್ನು ಅಲಂಕರಿಸಲು ಇಲ್ಲಿನ ಜನ ಅವಕಾಶ ಮಾಡಿಕೊಟ್ಟಿದ್ದಾರೆ. ಈ ಬಾರಿಯೂ ನನ್ನನ್ನು ಬಹುಮತದಿಂದ ಗೆಲ್ಲಿಸಿ ಮುಖ್ಯಮಂತ್ರಿಯನ್ನಾಗಿ ಆರಿಸುತ್ತಾರೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

ಬಂಗಾರಪ್ಪ ಸ್ಪರ್ಧೆಯಿಂದ ನಿಮಗೆ ಭೀತಿ ಉಂಟಾಗಿದೆಯೇ ಎಂಬ ಪ್ರಶ್ನೆಗೆ, ಶಿಕಾರಿಪುರದ ಜನತೆ ಯಡಿಯೂರಪ್ಪ ಹಾಗೂ ಕಮಲ ಬಿಟ್ಟು ಬೇರೇನನ್ನು ಯೋಚಿಸುವುದಿಲ್ಲ. ಆದ್ದರಿಂದ ನನಗೆ ಯಾವ ಭಯವೂ ಇಲ್ಲ. ನಾನು ಹೆದರುವುದು ದೇವರಿಗೆ ಮಾತ್ರ. ಬಂಗಾರಪ್ಪನವರಿಗೆ ಹೆದರಿ ನಾನು ತುಮಕೂರಿನಿಂದ ಸ್ಪರ್ಧಿಸುತ್ತೇನೆ ಎಂಬ ವರದಿಗಳೆಲ್ಲಾ ಮಾಧ್ಯಮಗಳ ಸೃಷ್ಟಿ. ನಾನು ಬದುಕಿರುವವರೆಗೆ ಶಿಕಾರಿಪುರ ಕ್ಷೇತ್ರದಿಂದಲೇ ಸ್ಪರ್ಧಿಸುತ್ತೇನೆ ಎಂದರು.
ಮತ್ತಷ್ಟು
ಸಿದ್ಧರಾಮಯ್ಯಗೂ ಮುಖ್ಯಮಂತ್ರಿಯಾಗುವಾಸೆ
ಬಹುಜನ ಸಮಾಜವಾದಿ ಪಕ್ಷಕ್ಕೆ ತಾರಾ ರಂಗು
ರಾಹುಕಾಲ: ರೇವಣ್ಣ - ಕಟ್ಟಾ ಕಿತ್ತಾಟ
ಜಿ. ಪಂ. ಸದಸ್ಯ ಸಾವು: ಮಂಡ್ಯ ಪ್ರಕ್ಷುಬ್ಧ
ಕುಮಾರಣ್ಣ ಜ್ಯೋತಿಷ್ಯಕ್ಕೇ ಜೋತು ಬಿದ್ದಿಲ್ವಂತೆ!
ದೇವರ ಮೊರೆ ಹೋಗುತ್ತಿರುವ ರಾಜಕಾರಣಿಗಳು