ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಬಿಜೆಪಿ ಪ್ರಣಾಳಿಕೆ ಬಿಡುಗಡೆ
ಬೆಂಗಳೂರು: ಹಲವಾರು ಆಕರ್ಷಕ ಭರವಸೆಗಳನ್ನೊಳಗೊಂಡಿರುವ ಚುನಾವಣಾ ಪ್ರಣಾಳಿಕೆಯನ್ನು ಭಾರತೀಯ ಜನತಾ ಪಕ್ಷ ಗುರವಾರ ಬಿಡುಗಡೆ ಮಾಡಿದೆ. ರೈತರ ಪಂಪ್‌ಸೆಟ್‌ಗಳಿಗೆ ಉಚಿತ ವಿದ್ಯುತ್, ಹಾಲು ಉತ್ಪಾದಕರಿಗೆ 2 ರೂಪಾಯಿ ಸಬ್ಸಿಡಿ, ಬಡವರಿಗೆ 2 ರೂ.ಗೆ ಒಂದು ಕೆ.ಜಿ.ಅಕ್ಕಿ ನೀಡುವುದೂ ಸೇರಿದಂತೆ ಬಡವರಿಗೆ ಪ್ರಣಾಳಿಕೆಯಲ್ಲಿ ಆದ್ಯತೆ ನೀಡಲಾಗಿದೆ.

ಬಿಜೆಪಿ ಅಧಿಕಾರಕ್ಕೆ ಬಂದರೆ ಬಡ ಹೆಣ್ಣುಮಕ್ಕಳಿಗಾಗಿ ಜಾರಿಯಾಗಿರುವ ಭಾಗ್ಯಲಕ್ಷ್ಮಿ ಯೋಜನೆಯ ಠೇವಣಿ ಹಣವನ್ನು ಏರಿಸಿ ವಿಮಾ ಪಾಲಿಸಿಯ ಅವಧಿ ಮುಗಿದ ನಂತರ ಒಂದು ಲಕ್ಷ ರೂಪಾಯಿ ನೀಡುವ ಭರವಸೆ ಪ್ರಣಾಳಿಕೆಯ ವಿಶೇಷ.

ಬೆಂಗಳೂರು ನಗರದ ಮೂಲಭೂತ ಸೌಕರ್ಯ ಅಭಿವೃದ್ಧಿಗೆ ಒತ್ತು ನೀಡಿ ಸಂಚಾರ ವ್ಯವಸ್ಥೆ ಸುಗಮಗೊಳಿಸಲು ನೂತನ ಸುಧಾರಣೆಗಳನ್ನು ಜಾರಿಗೊಳಿಸುವುದಾಗಿ ಬೆಂಗಳೂರು ನಾಗರಿಕರಿಗೆ ಪ್ರಣಾಳಿಕೆಯಲ್ಲಿ ಭರವಸೆ ನೀಡಲಾಗಿದೆ.

ಮುಂದಿನ 5 ವರ್ಷಗಳಲ್ಲಿ ಸಮಗ್ರ ಅಭಿವೃದ್ದಿಯನ್ನು ಗಮನದಲ್ಲಿಟ್ಟುಕೊಂಡು ಈ ಪ್ರಣಾಳಿಕೆಯನ್ನು ಸಿದ್ಧಗೊಳಿಸಲಾಗಿದೆ ಎಂದು ತಿಳಿಸಿರುವ ಬಿಜೆಪಿ, ಕರ್ನಾಟಕದ ಜನತೆ ಈ ಬಾರಿ ಪಕ್ಷಕ್ಕೆ ಸಂಪೂರ್ಣ ಬಹುಮತ ನೀಡಿ ಅಧಿಕಾರದ ಗದ್ದುಗೆಗೆ ಏರಿಸಲಿದ್ದಾರೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದೆ.
ಮತ್ತಷ್ಟು
ಕೆಪಿಸಿಸಿ ಕಚೇರಿಗಾಜು ಪುಡಿಗೈದ ಕಾರ್ಯಕರ್ತರು
ಬಂಗಾರಪ್ಪನಿಗೇಕೆ ಹೆದರಲಿ: ಯಡಿಯೂರ್
ಸಿದ್ಧರಾಮಯ್ಯಗೂ ಮುಖ್ಯಮಂತ್ರಿಯಾಗುವಾಸೆ
ಬಹುಜನ ಸಮಾಜವಾದಿ ಪಕ್ಷಕ್ಕೆ ತಾರಾ ರಂಗು
ರಾಹುಕಾಲ: ರೇವಣ್ಣ - ಕಟ್ಟಾ ಕಿತ್ತಾಟ
ಜಿ. ಪಂ. ಸದಸ್ಯ ಸಾವು: ಮಂಡ್ಯ ಪ್ರಕ್ಷುಬ್ಧ