ಬೆಂಗಳೂರು: ತಾನು ಅಕ್ರಮವಾಗಿ ಹಣ ಸಂಪಾದಿಸಿಲ್ಲ ಎಂದು ಹೇಳಿರುವ ಮಾಜಿ ಶಾಸಕ ದಿನೇಶ್ ಗುಂಡೂರಾವ್, ಆಸ್ತಿ ಘೋಷಣೆಗೆ ಸಂಬಂಧಿಸಿದಂತೆ ಮಾಧ್ಯಮಗಳಲ್ಲಿ ಬಂದಿರುವ ವರದಿಗಳೆಲ್ಲ ಕಪೋಲಕಲ್ಪಿತ ಎಂದಿದ್ದಾರೆ.
ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡುತ್ತಿದ್ದ ಅವರು, ತಮಗೆ ದೇವನಹಳ್ಳಿ ಸಮೀಪ 18ಎಕರೆ ಪಿತ್ರಾರ್ಜಿತ ಭೂಮಿ ಇದೆ. ತಮ್ಮ ತಂದೆಯವರು ಖರೀದಿಸಿದಾಗ ಎಕರೆಗೆ 6 ಸಾವಿರ ರೂ. ಮೌಲ್ಯವಿದ್ದುದು ಈಗ ಕೋಟಿಗೆ ಬಂದುಮುಟ್ಟಿದೆ. ತಮ್ಮ ಪಾಲಿನ ಭೂಮಿಯ ವಿವರಗಳನ್ನು ಆಯೋಗಕ್ಕೆ ನಾಮಪತ್ರ ಸಲ್ಲಿಸುವಾಗ ನೀಡಿರುವುದಾಗಿ ತಿಳಿಸಿದರು.
ಇಲ್ಲಿಯವರೆಗೆ ತಮ್ಮ ಪತ್ನಿಯ ಹೆಸರಿನಲ್ಲಿ ಬೆಂಗಳೂರಿನ ರೇಸ್ಕೋರ್ಸ್ ರಸ್ತೆಯಲ್ಲಿರುವ ಒಂದು ಕೋಟಿ ರೂ.ಮೌಲ್ಯದ ಆಸ್ತಿಯನ್ನು ಹೊರತುಪಡಿಸಿದರೆ ಸ್ವಂತ ಗಳಿಕೆಯ ಸಂಪತ್ತು ಯಾವುದೂ ಇಲ್ಲ ಎಂದು ದಿನೇಶ್ ಇದೇ ಸಂದರ್ಭದಲ್ಲಿ ಸ್ಪಷ್ಟಪಡಿಸಿದ್ದಾರೆ.
ಆಯೋಗಕ್ಕೆ ಮಾಹಿತಿಯನ್ನು ನೀಡುವಾಗ ಕಣ್ತಪ್ಪಿನಿಂದಾಗಿ ಕೆಲವು ತಪ್ಪುಗಳಾಗಿವೆ. ಅದನ್ನು ಸರಿಪಡಿಸಲಾಗಿದೆ ಎಂದು ಅವರು ನುಡಿದರು.
|