ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಮೇಡಂ ಭೇಟಿಗೆ ತೆರಳಿದ ಜಾಫರ್
ತನ್ನ ಮೊಮ್ಮಕ್ಕಳಿಗೆ ಹಾಗೂ ತಾನು ಶಿಫಾರಸ್ಸು ಮಾಡಿದವರಿಗೆ ಟಿಕೆಟ್ ನೀಡಲಿಲ್ಲವೆಂದು ಬೇಸತ್ತ ಕಾಂಗ್ರೆಸ್ ನಾಯಕ ಮಾಜಿ ಸಚಿವ ಜಾಫರ್ ಷರೀಫ್ ರಾಜೀನಾಮೆ ನೀಡಿದ್ದಾರೆ. ಆದರೆ ರಾಜೀನಾಮೆ ಇನ್ನೂ ಅಂಗೀಕಾರವಾಗಿಲ್ಲ. ಜಾಫರ್‌ಷರೀಫ್ ನಾಲ್ಕು ಪುಟಗಳ ರಾಜೀನಾಮೆ ಪತ್ರವನ್ನು ಸೋನಿಯಾಗೆ ಕಳುಹಿಸಿದ್ದು, ಅದರಲ್ಲಿ ತಮ್ಮ ನೋವನ್ನು ತೋಡಿಕೊಂಡಿದ್ದಾರೆ ಎನ್ನಲಾಗಿದೆ.

ರಾಜೀನಾಮೆಯ ಸುದ್ದಿ ತಿಳಿಯುತ್ತಿದ್ದಂತೆ ಸೋನಿಯಾಗಾಂಧಿ ಜಾಫರ್ ಷರೀಪ್‌ರನ್ನು ದೆಹಲಿಗೆ ಕರೆದಿದ್ದು, ಶನಿವಾರ ಮಾತುಕತೆ ನಡೆಸಲಿದ್ದಾರೆ ಎಂದು ಹೇಳಲಾಗಿದೆ.

ಇವರು ತಮ್ಮ ರಾಜೀನಾಮೆ ಪತ್ರದಲ್ಲಿ "ನಾನು ಕಾಂಗ್ರೆಸ್‌ನಲ್ಲಿ ಹಿರಿಯ ನಾಯಕನಾಗಿದ್ದು ಪಕ್ಷಕ್ಕಾಗಿ ಹಲವು ವರ್ಷದಿಂದ ದುಡಿದಿದ್ದರೂ ಟಿಕೆಟ್ ಹಂಚಿಕೆ ವಿಷಯದಲ್ಲಿ ನನ್ನನ್ನು ಕಡೆಗಣಿಸಲಾಗಿದೆ. ರಾಜ್ಯದ ಇಬ್ಬರು ಹಿರಿಯ ಕಾಂಗ್ರೆಸ್ ನಾಯಕರು ನನ್ನ ವಿರುದ್ಧ ಪಿತೂರಿ ನಡೆಸುತ್ತಿದ್ದು, ನನ್ನನ್ನು ವೈರಿಯಂತೆ ಕಾಣುತ್ತಿದ್ದಾರೆ" ಎಂದು ದೂರಿದ್ದಾರೆ ಎನ್ನಲಾಗಿದೆ.

ಇತ್ತೀಚೆಗೆ ಪಕ್ಷಕ್ಕೆ ಆಗಮಿಸಿದ ಸಿ.ಎಂ.ಇಬ್ರಾಹಿಂ ಅವರಿಗೆ ಪಕ್ಷದಲ್ಲಿ ಹೆಚ್ಚು ಮಣೆ ಹಾಕಲಾಗುತ್ತಿದೆ. ಭಾಷಾ ಹಾಗೂ ಧಾರ್ಮಿಕ ಅಲ್ಪಸಂಖ್ಯಾತರನ್ನು ಟಿಕೆಟ್ ನೀಡುವಾಗ ನಿರ್ಲಕ್ಷಿಸಲಾಗಿದೆ ಎಂದು ತಮ್ಮ ರಾಜೀನಾಮೆ ಪತ್ರದಲ್ಲಿ ತಿಳಿಸಿದ್ದಾರೆ. ಇವರ ರಾಜೀನಾಮೆ ವಿಷಯ ರಾಜ್ಯದ ಯಾವುದೇ ನಾಯಕರಿಗೆ ತಿಳಿದಿರಲಿಲ್ಲ. ಇವರು ನೇರವಾಗಿ ದೆಹಲಿಗೆ ತಮ್ಮ ರಾಜೀನಾಮೆ ಪತ್ರವನ್ನು ರವಾನಿಸಿದ್ದರು. ದೆಹಲಿಯಿಂದ ಮಾಹಿತಿ ಬಂದೊಡನೆ ದಿಗ್ವಿಜಯ್ ಸಿಂಗ್ ಹಾಗೂ ರಾಜ್ಯದಲ್ಲಿ ಪಕ್ಷದ ಉಸ್ತುವಾರಿ ವಹಿಸಿರುವ ಪೃಥ್ವಿರಾಜ್ ಚವ್ಹಾಣ್ ಜಾಫರ್ ಷರೀಫ್ ಅವರ ಮನವೊಲಿಸಲು ಪ್ರಯತ್ನಿಸಿದರು ಎಂದು ತಿಳಿದು ಬಂದಿದೆ.
ಮತ್ತಷ್ಟು
ಮಲೇರಿಯಾ ನಿಯಂತ್ರಣ ಆದ್ಯತೆಯಾಗಲಿ: ಸಂತೋಷ್ ಹೆಗಡೆ
ಆನೇಕಲ್‌ನಲ್ಲಿ ಅಕ್ರಮ ಮದ್ಯ, ಸೀರೆ ವಶ
ಹರಪನಹಳ್ಳಿ: ಕರುಣಾಕರರೆಡ್ಡಿ ನಾಮಪತ್ರ ಸಲ್ಲಿಕೆ
ಸದ್ಯವೇ ರಾಜ್ ಸ್ಮಾರಕ: ಐ.ಎಂ.ವಿಠಲಮೂರ್ತಿ
ಬಿಜೆಪಿ ಪ್ರಚಾರಕ್ಕೆ ನರೇಂದ್ರ ಮೋದಿ
ಮಡಿಕೇರಿಯಲ್ಲಿ ಜೈಜಗದೀಶ್ ನಾಮಪತ್ರ ತಿರಸ್ಕೃತ