ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ರಾಜ್ಯಕ್ಕೆ ಕೇಂದ್ರ ಚುನಾವಣಾ ಆಯೋಗ
ರಾಜ್ಯದಲ್ಲಿ ಮುಕ್ತ ಹಾಗೂ ನ್ಯಾಯಸಮ್ಮತ ಚುನಾವಣೆ ನಡೆಸುವ ನಿಟ್ಟಿನಲ್ಲಿ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡಿರುವ ಕೇಂದ್ರ ಚುನಾವಣಾ ಆಯೋಗವು ಸೋಮವಾರ ಸಂಜೆ ರಾಜ್ಯಕ್ಕೆ ಭೇಟಿ ನೀಡಲಿದೆ.

ಈ ಹಿನ್ನೆಲೆಯಲ್ಲಿ ಮುಖ್ಯ ಚುನಾವಣಾ ಆಯುಕ್ತರಾದ ಗೋಪಾಲಸ್ವಾಮಿ ನೇತೃತ್ವದ ಕೇಂದ್ರ ಚುನಾವಣಾ ಆಯೋಗವು ಇಂದು ಸಂಜೆ ನಗರಕ್ಕೆ ಆಗಮಿಸಲಿದ್ದು, ರಾಜ್ಯದ ಹಿರಿಯ ಅಧಿಕಾರಿಗಳೊಂದಿಗೆ ಚುನಾವಣಾ ಕಾರ್ಯಗಳ ಕುರಿತು ಸಮಾಲೋಚನೆ ನಡೆಸಲಿದ್ದಾರೆ.

ಇದೇ ಸಂದರ್ಭದಲ್ಲಿ ಆಯೋಗವು ರಾಜ್ಯ ಚುನಾವಣೆಗೆ ನಡೆಸಲಾಗುತ್ತಿರುವ ಸಿದ್ಧತೆಗಳ ಪರಿಶೀಲನೆ ಕೂಡ ನಡೆಸಲಿದ್ದಾರೆ. ಅಲ್ಲದೆ, ಚುನಾವಣಾ ಸಂದರ್ಭದಲ್ಲಿ ಯಾವುದೇ ರೀತಿಯ ಅಹಿತಕರ ಘಟನೆ ನಡೆಯದಂತೆ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳುವಂತೆ ಅಧಿಕಾರಿಗಳಿಗೆ ಕೆಲವು ಸೂಚನೆಗಳನ್ನು ನೀಡಲಿದ್ದಾರೆ ಎಂದು ತಿಳಿದು ಬಂದಿದೆ.

ಮೊದಲ ಹಂತದ ಚುನಾವಣೆಗೆ ಕೇವಲ 13ದಿನಗಳು ಬಾಕಿ ಉಳಿದಿರುವುದರಿಂದ ಚುನಾವಣಾ ಆಯೋಗದ ರಾಜ್ಯ ಭೇಟಿಗೆ ಎಲ್ಲಿಲ್ಲದ ಮಹತ್ವ ಬಂದಿದೆ. ಅಲ್ಲದೆ, ದೇಶದಲ್ಲಿಯೇ ಮೊದಲ ಬಾರಿಗೆ ಕ್ಷೇತ್ರ ಪುನರ್ ವಿಂಗಡಣೆಯ ಆಧಾರದಲ್ಲಿ ನಡೆಯಲಿರುವ ಚುನಾವಣೆ ಇದಾಗಿರುವುದರಿಂದ ಎಲ್ಲರ ಗಮನ ಕರ್ನಾಟಕದತ್ತಲೇ ಕೇಂದ್ರೀಕೃತವಾಗಿದೆ.
ಮತ್ತಷ್ಟು
ರಾಜೀನಾಮೆ: ನಾಗಮಾರಪಳ್ಳಿ ಸರದಿ
ಭಯೋತ್ಪಾದನೆ ದಮನಕ್ಕೆ ಬಿಜೆಪಿ ಪರಿಹಾರ: ಮೋದಿ
ಕುಮಾರಸ್ವಾಮಿ ಸಾಧನೆಯ ವಿಡಿಯೋ
ಕಾಂಗ್ರೆಸ್ ಭಾಷಣವನ್ನು ನಕಲಿಸಿದ ಬಿಜೆಪಿ : ಖರ್ಗೆ
ಅಂತಿಮ ಹಂತದ ಚುನಾವಣೆಗೆ ಅಧಿಸೂಚನೆ
ನಾಗರಿಕ ಸೇವಾ ನಿಯಮಗಳಿಗೆ ತಿದ್ದುಪಡಿ