ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಕಾಂಗ್ರೆಸ್‌ಗೆ ನಿಚ್ಚಳ ಬಹುಮತ: ಸಿದ್ದು
ಮೈಸೂರು: ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಪಕ್ಷವನ್ನು ಹಿಂದಿಕ್ಕಿ, ಕಾಂಗ್ರೆಸ್ ಪಕ್ಷ ನಿಚ್ಚಳ ಬಹುಮತದೊಂದಿಗೆ ಅಧಿಕಾರ ಪಡೆಯಲಿದೆ ಎಂದು ಮಾಜಿ ಉಪಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದ್ದಾರೆ.

ಅವರು ನಗರದಲ್ಲಿ ಸೋಮವಾರ ನಡೆದ ಪತ್ರಿಕಾ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು. ಯಡಿಯೂರಪ್ಪನವರು ವಿತ್ತ ಸಚಿವರಾಗಿದ್ದಾಗ ಮಂಡಿಸಿದ ಬಜೆಟ್‌ನಲ್ಲಿ ಹಣವಿಲ್ಲದೆ ಕಾರ್ಯಕ್ರಮಗಳನ್ನು ಘೊಷಣೆ ಮಾಡಿದ್ದಾರೆ. ಆ ಮೂಲಕ ಬಜೆಟ್ ಪಾವಿತ್ರ್ಯತೆಯನ್ನು ಕೆಡಿಸಿದ್ದಾರೆ ಎಂದು ಆಪಾದಿಸಿದರು.

ಬಿಜೆಪಿ ಹಾಗೂ ಜೆಡಿಎಸ್ನಲ್ಲಿ ಭ್ರಷ್ಟಾಚಾರ ತುಂಬಿ ಹೋಗಿದ್ದು, ಈ ಎರಡು ಪಕ್ಷಗಳಿಗೂ ಹಣ ಮಾಡುವುದೊಂದೇ ಗುರಿ ವಿನಃ ಅಭಿವೃದ್ಧಿಯಲ್ಲ ಎಂದ ಅವರು, ಬಿಜೆಪಿ ಮುಂದಿನ ಚುನಾವಣೆಯಲ್ಲಿ 50 ಸ್ಥಾನಕ್ಕಿಂತ ಮೇಲೆ ಗೆಲ್ಲುವುದಿಲ್ಲ. ಇತ್ತ ಜೆಡಿಎಸ್ ಎರಡಂಕಿ ಸ್ಥಾನ ಗಳಿಸುವುದು ಕೂಡ ಕಷ್ಟ ಎಂದು ತಿಳಿಸಿದರು.

ಬೆಂಗಳೂರು ವರದಿ:
ಇತ್ತ ಬೆಂಗಳೂರಿನಲ್ಲಿ ಚುನಾವಣಾ ಪ್ರಚಾರ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಬಳಿಕ ಮಾತನಾಡಿದ ಕಾಂಗ್ರೆಸ್ ಮುಖಂಡ ಎಸ್. ಎಂ. ಕೃಷ್ಣರವರು ಕೂಡ ಕಾಂಗ್ರೆಸ್ ಚುನಾವಣೆಯಲ್ಲಿ ಗೆಲ್ಲುವುದೆಂದು ಭವಿಷ್ಯ ನುಡಿದಿದ್ದಾರೆ.
ಮತ್ತಷ್ಟು
ರಾಜ್ಯಕ್ಕೆ ಕೇಂದ್ರ ಚುನಾವಣಾ ಆಯೋಗ
ರಾಜೀನಾಮೆ: ನಾಗಮಾರಪಳ್ಳಿ ಸರದಿ
ಭಯೋತ್ಪಾದನೆ ದಮನಕ್ಕೆ ಬಿಜೆಪಿ ಪರಿಹಾರ: ಮೋದಿ
ಕುಮಾರಸ್ವಾಮಿ ಸಾಧನೆಯ ವಿಡಿಯೋ
ಕಾಂಗ್ರೆಸ್ ಭಾಷಣವನ್ನು ನಕಲಿಸಿದ ಬಿಜೆಪಿ : ಖರ್ಗೆ
ಅಂತಿಮ ಹಂತದ ಚುನಾವಣೆಗೆ ಅಧಿಸೂಚನೆ