ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ವೆಂಕಯ್ಯ ನಾಯ್ಡು ವಿರುದ್ಧ ಕರವೇ ಆಕ್ರೋಶ
ತೆಲುಗಿನಲ್ಲಿ ಚುನಾವಣಾ ಪ್ರಚಾರ ಭಾಷಣ ಮಾಡಿರುವ ಬಿಜೆಪಿಯ ಹಿರಿಯ ಮುಖಂಡ ವೆಂಕಯ್ಯ ನಾಯ್ಡು ಅವರ ಕ್ರಮಕ್ಕೆ ಕರ್ನಾಟಕ ರಕ್ಷಣಾ ವೇದಿಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ.

ಪಾವಗಡದಲ್ಲಿ ನಡೆದ ಪ್ರಚಾರ ಸಭೆಯಲ್ಲಿ ಭಾಗವಹಿಸಿದ ವೆಂಕಯ್ಯ ನಾಯ್ಡು ತೆಲುಗಿನಲ್ಲಿ ಭಾಷಣ ಮಾಡುವ ಮೂಲಕ ಕನ್ನಡಕ್ಕೆ ಅವಮಾನ ಮಾಡಿದ್ದಾರೆ ಎಂದು ಕರವೇ ರಾಜ್ಯಾಧ್ಯಕ್ಷ ಟಿ.ಎ. ನಾರಾಯಣ ಗೌಡ ಆರೋಪಿಸಿದ್ದಾರೆ.

ಕರ್ನಾಟಕದಿಂದ ರಾಜ್ಯಸಭೆಗೆ ಆಯ್ಕೆಯಾಗಿರುವ ನಾಯ್ಡು ಅವರು ಇನ್ನು ಕೂಡ ಕನ್ನಡ ಕಲಿಯಬೇಕೆನ್ನುವ ಕಾಳಜಿ ಇಲ್ಲ. ಇಂತಹವರನ್ನು ರಾಜ್ಯದಿಂದ ಆಯ್ಕೆ ಮಾಡಿ ಕಳುಹಿಸಿರುವುದು ಮೂರ್ಖತನದ ಪರಮಾವಧಿ ಎಂಬ ಅಭಿಪ್ರಾಯವನ್ನು ಅವರು ವ್ಯಕ್ತಪಡಿಸಿದ್ದಾರೆ.

ಯಾರೇ ಆಗಲಿ ಕನ್ನಡದಲ್ಲಿಯೇ ಪ್ರಚಾರ ಮಾಡಬೇಕು. ಅದು ಬಿಟ್ಟು ಅನ್ಯ ಭಾಷೆಯಲ್ಲಿ ಚುನಾವಣಾ ಪ್ರಚಾರ ಕೈಗೊಂಡ ನಾಯಕರಿಗೆ ಘೇರಾವ್ ಹಾಕಲಾಗುವುದು ಎಂದು ಅವರು ಎಚ್ಚರಿಕೆ ನೀಡಿದರು.
ಮತ್ತಷ್ಟು
ಕಾಂಗ್ರೆಸ್‌ಗೆ ನಿಚ್ಚಳ ಬಹುಮತ: ಸಿದ್ದು
ರಾಜ್ಯಕ್ಕೆ ಕೇಂದ್ರ ಚುನಾವಣಾ ಆಯೋಗ
ರಾಜೀನಾಮೆ: ನಾಗಮಾರಪಳ್ಳಿ ಸರದಿ
ಭಯೋತ್ಪಾದನೆ ದಮನಕ್ಕೆ ಬಿಜೆಪಿ ಪರಿಹಾರ: ಮೋದಿ
ಕುಮಾರಸ್ವಾಮಿ ಸಾಧನೆಯ ವಿಡಿಯೋ
ಕಾಂಗ್ರೆಸ್ ಭಾಷಣವನ್ನು ನಕಲಿಸಿದ ಬಿಜೆಪಿ : ಖರ್ಗೆ