ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಮೈಸೂರಲ್ಲಿ ಬಂಧಿತರಿಗೆ ಪಾಕ್ ಉಗ್ರರ ನಂಟು
ಇಲ್ಲಿನ ವಸತಿ ಗೃಹದಲ್ಲಿ ಭಾನುವಾರ ಬಂಧಿಸಲಾಗಿರುವ ಆರು ಮಂದಿ ಉಗ್ರರು ಪಾಕಿಸ್ತಾನ ಉಗ್ರಗಾಮಿ ಸಂಘಟನೆಯಿಂದ ಶ ತರಬೇತಿ ಪಡೆದಿದ್ದರು ಎಂಬ ಆತಂಕಕಾರಿ ವಿಷಯ ವಿಚಾರಣೆ ವೇಳೆ ತಿಳಿದು ಬಂದಿದೆ.

ಬಂಧಿತರಲ್ಲಿ ಒಬ್ಬ ಕಮಾಂಡರ್ ಮತ್ತು ಮತ್ತೊಬ್ಬ ಉಪಕಮಾಂಡರ್ ಆಗಿದ್ದ ಎಂದು ಪೊಲೀಸರು ಸ್ಪಷ್ಟ ಪಡಿಸಿದ್ದು, ಉಗ್ರಗಾಮಿಗಳು ಮಣಿಪುರಕ್ಕೆ ಸೇರಿದವರಾಗಿದ್ದಾರೆ. ಅಲ್ಲದೆ, ಈ ಉಗ್ರಗಾಮಿಗಳು ಪೀಪಲ್ಸ್ ಯುನೈಟೆಡ್ ಲಿಬರೇಷನ್ ಫ್ರೆಂಟ್ (ಪಿಯುಎಲ್ಎಫ್) ಸಂಘಟನೆಗೆ ಸೇರಿದವರಾಗಿದ್ದಾರೆ ಎಂದು ತಿಳಿಸಿದರು.

ಎರಡು ದಿನಗಳ ಹಿಂದೆ ಮಣಿಪುರದಿಂದ ಕಾರಿನ ಮೂಲಕ ನಗರಕ್ಕೆ ಆಗಮಿಸಿದ್ದ ಉಗ್ರಗಾಮಿಗಳು ಲಾಡ್ಜ್ ಒಂದರಲ್ಲಿ ತಂಗಿದ್ದರು. ಈ ಬಗ್ಗೆ ಮಣಿಪುರದ ಪೊಲೀಸರು ಅರಿತು ಕೂಡಲೇ ನಗರಕ್ಕೆ ಆಗಮಿಸಿ ಸಿಸಿಬಿ ಪೊಲೀಸರ ನೆರವಿನೊಂದಿಗೆ ಆರು ಉಗ್ರರನ್ನು ಬಂಧಿಸಿದ್ದಾರೆ.

ಆರೋಪಿಗಳಿಂದ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಂಡಿದ್ದು, ಮಣಿಪುರದ ಅನೇಕ ಮಹತ್ವದ ಪ್ರಕರಣದಲ್ಲಿ ಈ ಉಗ್ರರು ಭಾಗಿಯಾಗಿದ್ದರು ಎನ್ನಲಾಗಿದೆ. ಬಂಧಿತರನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದ್ದು, ಮೇ ಆರರವರೆಗೆ ಮಣಿಪುರ ಪೊಲೀಸರ ವಶಕ್ಕೆ ಒಪ್ಪಿಸಲಾಗಿದೆ.
ಮತ್ತಷ್ಟು
ವೆಂಕಯ್ಯ ನಾಯ್ಡು ವಿರುದ್ಧ ಕರವೇ ಆಕ್ರೋಶ
ಕಾಂಗ್ರೆಸ್‌ಗೆ ನಿಚ್ಚಳ ಬಹುಮತ: ಸಿದ್ದು
ರಾಜ್ಯಕ್ಕೆ ಕೇಂದ್ರ ಚುನಾವಣಾ ಆಯೋಗ
ರಾಜೀನಾಮೆ: ನಾಗಮಾರಪಳ್ಳಿ ಸರದಿ
ಭಯೋತ್ಪಾದನೆ ದಮನಕ್ಕೆ ಬಿಜೆಪಿ ಪರಿಹಾರ: ಮೋದಿ
ಕುಮಾರಸ್ವಾಮಿ ಸಾಧನೆಯ ವಿಡಿಯೋ