"ಜನರು ನೀಡಿದ ವಿಶ್ವಾಸದ್ರೋಹ ಎಂಬ ಶಾಪದಿಂದ ನನ್ನ ಮಗ ವಿಮೋಚನೆಗೊಂಡು ಮತ್ತೆ ವಿಧಾನಸೌಧದ ಮುಂದೆ ಪ್ರಮಾಣ ವಚನ ಸ್ವೀಕರಿಸುವುದನ್ನು ನೋಡುವುದೇ ನನ್ನ ಕೊನೆಯ ಆಸೆ..."
ಇಲ್ಲಿ ಪಕ್ಷದ ಕಚೇರಿಯನ್ನು ಉದ್ವಾಟಿಸಿ ಮಾತನಾಡಿದ ಅವರು, "ನಾನು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದನ್ನು ನೋಡಲು ನನ್ನ ತಾಯಿಗೆ ಹಾಗೂ ಹೆಂಡತಿಗೆ ಸಾಧ್ಯವಾಗಲಿಲ್ಲ. ಕಳೆದ ಬಾರಿಯ ಸಮ್ಮಿಶ್ರ ಸರ್ಕಾರದಲ್ಲಿ ನನ್ನ ಇಚ್ಛೆಗೆ ವಿರುದ್ಧವಾಗಿ ಬಿಜೆಪಿಯೊಂದಿಗೆ ಕೈ ಜೋಡಿಸಿದ್ದರಿಂದ ನನ್ನ ಮಗ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸುವುದನ್ನು ನೋಡಲಾಗಲಿಲ್ಲ" ಎಂದು ತಿಳಿಸಿದರು.
"ನನ್ನ ಮಗ ಶಾಪ ಮುಕ್ತನಾಗಬೇಕಾದರೆ ರಾಜ್ಯದ ಜನತೆ ಜೆಡಿಎಸ್‌ಗೆ ಸಂಪೂರ್ಣ ಅಧಿಕಾರ ನೀಡಬೇಕು. ನಮ್ಮ ಹುಡುಗನಿಗೆ ಬಡವರ ಬಗ್ಗೆ ಕಾಳಜಿ ಇದೆ. ಆದ್ದರಿಂದಲೇ ಆತ ಬಡವರ ಮನೆಯಲ್ಲಿ ಗ್ರಾಮವಾಸ್ತವ್ಯ ಮಾಡುತ್ತಿದ್ದ" ಎಂದು ತಮ್ಮ ಪುತ್ರ ಕುಮಾರಸ್ವಾಮಿಯವರನ್ನು ಹೊಗಳಿದರು.
ಮುಂದುವರಿದು ಮಾತನಾಡಿದ ಅವರು, ಇತ್ತೀಚೆಗೆ ಕಣ್ಣೀರು ಸುರಿಸಿದ ಮಹಾನುಭಾವರೊಬ್ಬರನ್ನು ಮುಖ್ಯಮಂತ್ರಿಯನ್ನಾಗಿಸಲು ಸೋನಿಯಾಗಾಂಧಿ ಮನೆ ಮುಂದೆ ಐದು ದಿನ ಕಾದು ಕುಳಿತಿದ್ದೆ. ಇದು ಸುಳ್ಳೆಂದು ಅವರು ಪ್ರಮಾಣ ಮಾಡಲಿ ಎಂದು ಸಿದ್ಧರಾಮಯ್ಯನವರಿಗೆ ಸವಾಲೆಸೆದರು.
|