ಸಮಾಜವಾದಿ ಪಕ್ಷವು ತನ್ನ ಚುನಾವಣೆ ಪ್ರಣಾಳಿಕೆಯನ್ನು ಮಂಗಳವಾರ ಬಿಡುಗಡೆ ಮಾಡಿದ್ದು, ರೈತರು, ಮಹಿಳೆಯರು ಹಾಗೂ ಹಿಂದುಳಿದವರಿದೆ ಆದ್ಯತೆ ನೀಡುವುದಾಗಿ ಹೇಳಿದೆ.
ಮುಖ್ಯವಾಗಿ ರೈತರನ್ನೇ ದೃಷ್ಟಿಯಲ್ಲಿಟ್ಟುಕೊಂಡು ಹೊರಡಿಸಿರುವ ಪ್ರಣಾಳಿಕೆಯಲ್ಲಿ 55 ವರ್ಷದ ಮೀರಿದ ರೈತರಿಗೆ ಉಚಿತ ಪಂಪ್‌ಸೆಟ್, ಭೂಮಿ ಇಲ್ಲದ ರೈತರಿಗೆ 2 ಎಕರೆ ಭೂಮಿ ವಿತರಣೆ, 10 ಎಚ್‌ಪಿ ಪಂಪ್‌ಸೆಟ್ ಉಳ್ಳವರಿಗೆ ಉಚಿತ ವಿದ್ಯುತ್ ಸೇರಿದಂತೆ ಹಲವು ಕಾರ್ಯಕ್ರಮಗಳನ್ನು ಪ್ರಣಾಳಿಕೆಯಲ್ಲಿ ಬಿಡುಗಡೆ ಮಾಡಿದೆ.
ಕಲರ್ ಟಿವಿ ಇಲ್ಲದವರಿಗೆ ಕಲರ್ ಟಿವಿ, ಅಲ್ಪಸಂಖ್ಯಾತರಿಗೆ ಉದ್ಯೋಗದಲ್ಲಿ ಮೀಸಲು, ಬಿಪಿಎಲ್ ಕಾರ್ಡ್‌ದಾರರಿಗೆ ಮಾಸಿಕ ಭತ್ಯೆ, ನಿರುದ್ಯೋಗಿಗಳಿಗೆ, ಪದವೀಧರರಿಗೆ ಮಾಸಿಕ ಭತ್ಯೆ-ಮೊದಲಾದವುಗಳು ಪ್ರಣಾಳಿಕೆಯ ಪ್ರಮುಖ ಅಂಶಗಳಾಗಿವೆ.
ಅಲ್ಲದೆ, ಗ್ರಾಮೀಣ ಮಹಿಳೆಯರಿಗೆ ವಿಶೇಷ ಸೌಲಭ್ಯವನ್ನು ನೀಡುವ ಕುರಿತು ಪ್ರಣಾಳಿಕೆಯಲ್ಲಿ ತಿಳಿಸಲಾಗಿದ್ದು, ಗ್ರಾಮೀಣ ಮಹಿಳೆಯರಿಗೆ ಹೆರಿಗೆ ಭತ್ಯೆ ನೀಡುವುದಾಗಿ ಪಕ್ಷ ಭವರಸೆ ನೀಡಿದೆ.
|