ಮಹಾರಾಷ್ಟ್ರದಿಂದ ಕರ್ನಾಟಕಕ್ಕೆ ಆಕ್ರಮವಾಗಿ ಸಾಗಿಸಲಾಗುತ್ತಿದ್ದ 16 ಲಕ್ಷ ರೂ ಮೌಲ್ಯದ ಮದ್ಯವನ್ನು ಅಬಕಾರಿ ಇಲಾಖೆಯ ಸಿಬ್ಬಂದಿಗಳು ಸಮೀಪದ ಕುಗನೋಳಿ ಚೆಕ್ ಪೊಸ್ಟ್ ಬಳಿ ವಶಪಡಿಸಿಕೊಂಡಿದ್ದಾರೆ.
ಕರ್ನಾಟಕ ಮತ್ತು ಮಹಾರಾಷ್ಟ್ರದ ಗಡಿ ಗ್ರಾಮ ಕುಗನೋಳಿ ಬಳಿ ಇತ್ತೀಚೆಗಷ್ಟೆ ಸ್ಥಾಪಿಸಲಾಗಿರುವ ಚೆಕ್ ಪೋಸ್ಟ್ ಬಳಿ ರಾಜಸ್ಥಾನದ ನೋಂದಣಿ ಟ್ರಕ್‍ನ್ನು ತಡೆದು ಅಬಕಾರಿ ನಿರೀಕ್ಷಕ ಸಂತೋಷ್ ತಿಪ್ಪಣ್ಣವರ ಮತ್ತವರ ತಂಡ ಪರಿಶೀಲಿಸಿದ ನಂತರ ಜವಳಿ ಉದ್ಯಮದ ವೇಸ್ಟ್‌ನ ಅಡಿಯಲ್ಲಿ ಅಂದಾಜು 1,020 ವಿಸ್ಕಿ ಬಾಟಲುಗಳು ಪತ್ತೆಯಾಗಿದ್ದು ಇವುಗಳ ಅಂದಾಜು ಮೌಲ್ಯ 16ಲಕ್ಷ ಮೀರಬಹುದು ಎನ್ನಲಾಗಿದೆ.
ಅಕ್ರಮವಾಗಿ ಮದ್ಯವನ್ನು ದಾಮನ್‌ನಿಂದ ಮಹಾರಾಷ್ಟ್ರ ಮಾರ್ಗವಾಗಿ ಬೆಂಗಳೂರಿಗೆ ಸಾಗಿಸಲಾಗುತ್ತಿತ್ತು ಎಂದು ವಾಹನ ಚಾಲಕನನ್ನು ವಿಚಾರಣೆಗೆ ಒಳಪಡಿಸಿದ ಸಂದರ್ಭದಲ್ಲಿ ತಿಳಿದು ಬಂದಿದೆ. ಆಕ್ರಮವಾಗಿ ಮದ್ಯ ಸಾಗಿಸಲಾಗುತ್ತಿದ್ದ ಟ್ರಕ್‌ನ್ನು ಅಬಕಾರಿ ಅಧಿಕಾರಿಗಳು ಜಪ್ತಿ ಮಾಡಿಕೊಂಡಿದ್ದು, ಚಾಲಕನನ್ನು ಬಂಧಿಸಿದ್ದಾರೆ.
ಅಕ್ರಮ ಮದ್ಯವನ್ನು ವಶಪಡಿಸಿಕೊಂಡ ವಿಚಾರ ತಿಳಿಯುತ್ತಲೇ ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಚುನಾವಣಾಧಿಕಾರಿ ಎಂ.ಇ. ಶಿವಲಿಂಗ ಮೂರ್ತಿ ಮತ್ತು ಅಬಕಾರಿ ಆಯುಕ್ತ ಎಸ್ ಅನಂತಕುಮಾರ್ ಸ್ಥಳಕ್ಕೆ ಭೇಟಿ ನೀಡಿದರು.
|