ನರೇಂದ್ರ ಮೋದಿ ಮೂಲಕ ಮೋಡಿ ಮಾಡುವುದಾಗಿ ಬಿಜೆಪಿ ಹಾಗೂ ದ್ವೇಷಾಸೂಯೆಯ ರಾಜಕೀಯದಿಂದ ಜೆಡಿಎಸ್‌ನವರು ಕರ್ನಾಟಕದ ಘನತೆ ಗೌರವವನ್ನು ಮಣ್ಣು ಪಾಲು ಮಾಡಿದ್ದಾರೆಂದು ಹಿರಿಯ ಕಾಂಗ್ರೆಸ್ ನಾಯಕ ಜನಾರ್ದನ ಪೂಜಾರಿ ಆರೋಪಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮೋದಿ ರಾಜ್ಯಕ್ಕೆ ಎಷ್ಟು ಬಾರಿ ಬರುತ್ತಾರೆಯೋ ಅಷ್ಟು ಕಾಂಗ್ರೆಸ್‌ಗೆ ಲಾಭವಾಗುತ್ತದೆ. ಮೋದಿ ಮಾದರಿ ರಾಜ್ಯಕ್ಕೆ ಬೇಡವಾಗಿದೆ. ಇತ್ತ ಅಪ್ಪ-ಮಗ ರಾಜಕೀಯದಿಂದ ಜನತೆ ಬೇಸತ್ತು ಹೋಗಿದ್ದಾರೆ ಎಂದು ತಿಳಿಸಿದರು.
ರಾಜ್ಯದಲ್ಲಿ ಕಾಂಗ್ರೆಸ್ ಈ ಬಾರಿ ಅಧಿಕಾರಕ್ಕೆ ಬರುವುದೆಂದು ಈ ಹಿಂದೆಯೇ ಹೇಳಿದ್ದೆವು. ಈಗ ಸಮೀಕ್ಷೆ ಅದನ್ನು ನಿಜ ಮಾಡಿದೆ. ಜನತೆಗೆ ಈಗ ಸ್ಥಿರ ಸರ್ಕಾರವೇ ಬೇಕಾಗಿದೆ ಎಂದು ಅವರು ತಿಳಿಸಿದರು.
ಪಕ್ಷದೊಳಗೆ ಆಂತರಿಕ ಭಿನ್ನಾಭಿಪ್ರಾಯಗಳು ಎಲ್ಲಾ ಪಕ್ಷಗಳಲ್ಲಿಯೂ ಕಾಣುವುದು ಸಹಜ. ಟಿಕೆಟ್ ಪ್ರಕಟವಾದಾಗ ಒಮ್ಮೆ ಅದು ಸ್ಪೋಟಗೊಳ್ಳಬಹುದು. ಆದರೆ ಬಳಿಕ ಶಮನಗೊಳ್ಳುತ್ತದೆ. ಟಿಕೆಟ್ ತಪ್ಪಿದವರಿಗೆ ಸೂಕ್ತ ಸ್ಥಾನಮಾನ ನೀಡಲಾಗುವುದು ಎಂದು ಅವರು ತಿಳಿಸಿದರು.
|