ತೀವ್ರ ಕುತೂಹಲ ಮೂಡಿಸಿರುವ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆ ಫಲಿತಾಂಶ ಶುಕ್ರವಾರ ಅಪರಾಹ್ನ ಪ್ರಕಟಗೊಳ್ಳಲಿದ್ದು, ನಿಮ್ಮ ನೆಚ್ಚಿನ ವೆಬ್‌ದುನಿಯಾದಲ್ಲಿಯೂ ಫಲಿತಾಂಶ ಪ್ರಕಟಿಸಲಾಗುತ್ತದೆ.
ನಾಳೆ ರಾಜ್ಯಾದ್ಯಂತದ ಫಲಿತಾಂಶವು ಪ್ರಕಟಗೊಳ್ಳಲಿದ್ದು, ಶನಿವಾರ ಅಪರಾಹ್ನ ಆಯಾ ಕಾಲೇಜುಗಳಲ್ಲಿ ಪ್ರಕಟವಾಗಲಿದೆ. ಈ ಬಾರಿ ಒಟ್ಟು 5.73 ಲಕ್ಷ ಅಭ್ಯರ್ಥಿಗಳು ಹಾಜರಾಗಿದ್ದು, ಕಲಾ ವಿಭಾಗದಲ್ಲಿ 2,99,209, ವಾಣಿಜ್ಯ ವಿಭಾಗದಲ್ಲಿ 1,13,818 ಹಾಗೂ ವಿಜ್ಞಾನ ವಿಭಾಗದಲ್ಲಿ 1,60,419 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು.
ಪರೀಕ್ಷೆಯಲ್ಲಿ ವಿದ್ಯಾರ್ಥಿಗಳ ಮೇಲಿನ ಒತ್ತಡವನ್ನು ತಗ್ಗಿಸಲು ಹೊಸ ಪ್ರಯೋಗವಾಗಿ ಈ ಬಾರಿ ವಿದ್ಯಾರ್ಥಿಗಳಿಗೆ 15 ನಿಮಿಷಗಳಷ್ಟು ಹೆಚ್ಚಿನ ಕಾಲಾವಕಾಶವನ್ನು ನೀಡಲಾಗಿತ್ತು. ಅಲ್ಲದೆ, ಬೆಂಗಳೂರು, ಮೈಸೂರು ಹಾಗೂ ಬೆಳಗಾವಿ ಜತೆಯಲ್ಲಿ ಈ ಬಾರಿ ಹೆಚ್ಚುವರಿಯಾಗಿ ದಾವಣಗೆರೆ ಜಿಲ್ಲೆಯಲ್ಲೂ ಉತ್ತರ ಪತ್ರಿಕೆಗಳ ಮೌಲ್ಯಮಾಪನ ಕಾರ್ಯ ನಡೆದಿದೆ.
ಈ ಮಧ್ಯೆ, ಎಸ್ಸೆಸ್ಸೆಲ್ಸಿ ಪರೀಕ್ಷಾ ಫಲಿತಾಂಶ ಇದೇ ತಿಂಗಳ 5 ಅಥವಾ 6ರಂದು ಪ್ರಕಟಗೊಳ್ಳುವ ಸಾಧ್ಯತೆ ಇದೆ ಎಂದು ರಾಜ್ಯ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ತಿಳಿಸಿದೆ.
|