ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಬಾಲಕಿ ಕೊಂದ ಬಸ್ಸಿಗೆ ಕಲ್ಲು ತೂರಾಟ
ಬಿಎಂಟಿಸಿ ಬಸ್ಸಿನ ಆರ್ಭಟಕ್ಕೆ ಫಾತಿಮಾ ಎಂಬ ಮೂರು ವರ್ಷದ ಬಾಲಕಿ ಬಲಿಯಾಗಿರುವ ಘಟನೆ ಮೈಸೂರು ರಸ್ತೆಯ ಗುಡ್ಡದಹಳ್ಳಿಯಲ್ಲಿ ಗುರುವಾರ ಸಂಭವಿಸಿದೆ.

ಈ ಘಟನೆಯಿಂದ ಆಕ್ರೋಶಗೊಂಡ ಸಾರ್ವಜನಿಕರು ಚಾಲಕನನ್ನು ಅಮಾನತುಗೊಳಿಸುವಂತೆ ಒತ್ತಾಯಿಸಿ, ಬಸ್ ಮೇಲೆ ಕಲ್ಲುತೂರಾಟ ನಡೆಸಿದ್ದಾರೆ. ಉದ್ರಿಕ್ತ ಗುಂಪನ್ನು ಚದುರಿಸಲು ಪೊಲೀಸರು ಲಾಠಿ ಪ್ರಹಾರ ನಡೆಸಿದ್ದಾರೆ.

ಇಂದು ಮಧ್ಯಾಹ್ನದ ಸುಮಾರಿಗೆ ಬಿಎಂಟಿಸಿ ಬಸ್ ಎದುರಿಗೆ ಬರುತ್ತಿದ್ದ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದ ಪರಿಣಾಮ ಹಿಂದುಗಡೆ ಕೂತಿದ್ದ ಬಾಲಕಿ ನೆಲಕ್ಕುರುಳಿದಳು. ಆಗ ಬಸ್ ಆ ಮಗುವಿನ ಮೇಲೆ ಹರಿದಾಡಿದ್ದರಿಂದ ಮಗು ಸ್ಥಳದಲ್ಲಿಯೇ ಮೃತಪಟ್ಟಿದೆ ಎಂದು ತಿಳಿದು ಬಂದಿದೆ.

ಇದರಿಂದ ಆಕ್ರೋಶಗೊಂಡ ಸಾರ್ವಜನಿಕರು ಚಾಲಕನಿಗೆ ಧರ್ಮದೇಟು ನೀಡಿದ್ದಾರೆ. ಇದರಿಂದ ರಸ್ತೆ ಸಂಚಾರವೂ ಅಸ್ತವ್ಯಸ್ತಗೊಂಡಿತ್ತು. ಪರಿಸ್ಥಿತಿ ವಿಕೋಪಕ್ಕೆ ತಿರುಗುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಹೆಚ್ಚುವರಿ ಪೊಲೀಸರು ಪರಿಸ್ಥಿತಿ ನಿಯಂತ್ರಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಮತ್ತಷ್ಟು
ನಾಳೆ ವೆಬ್‌ದುನಿಯಾದಲ್ಲಿ ಪಿಯುಸಿ ಫಲಿತಾಂಶ
ಕೃಷ್ಣ ಮಹಾರಾಷ್ಟ್ರಕ್ಕೆ: ಹೈಕಮಾಂಡ್‌ಗೆ ಒತ್ತಡ ಹೇರಿದ್ದ ಜೆಡಿಎಸ್!
ಅಕ್ಕಿ, ಟೀವಿ, ವಿದ್ಯುತ್, ಸಾಲ: ಕಾಂಗ್ರೆಸ್ ಪ್ರಣಾಳಿಕೆ
ರಾಜ್ಯದ ಘನತೆಗೆ ಬಿಜೆಪಿ-ಜೆಡಿಎಸ್ ಕಳಂಕ: ಕಾಂಗ್ರೆಸ್
ಕಾವೇರಿದ ಚುನಾವಣೆ ಪ್ರಕ್ರಿಯೆ: ಆಡ್ವಾಣಿ ನಾಳೆ ರಾಜ್ಯಕ್ಕೆ
ಖರ್ಗೆ, ಧರಂ ನಾಮಪತ್ರ ಸಲ್ಲಿಕೆ