ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಕಾಂಗ್ರೆಸ್-ಜೆಡಿಎಸ್ ಒಳಒಪ್ಪಂದ: ಡಿ.ವಿ
ಚುನಾವಣೆಯ ಬಳಿಕ ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷದ ನಾಯಕರ ಮಧ್ಯೆ ಸಮ್ಮಿಶ್ರ ಸರ್ಕಾರ ರಚಿಸುವ ಕುರಿತು ಒಳಒಪ್ಪಂದ ನಡೆದಿದೆ ಎಂದು ರಾಜ್ಯ ಬಿಜೆಪಿ ಘಟಕದ ಅಧ್ಯಕ್ಷ ಡಿ.ವಿ. ಸದಾನಂದಗೌಡ ಆಪಾದಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಸ್ಪರ್ಧಿಸಿರುವ ಶಿಕಾರಿಪುರದಲ್ಲಿ ಕಾಂಗ್ರೆಸ್-ಜೆಡಿಎಸ್ ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸದೇ ಬಂಗಾರಪ್ಪನವರನ್ನು ಬೆಂಬಲಿಸಿರುವುದು, ಈ ಎರಡೂ ಪಕ್ಷಗಳ ನಡುವಿನ ಒಳ ಒಪ್ಪಂದಕ್ಕೆ ಸಾಕ್ಷಿಯಾಗಿದೆ ಎಂದು ನುಡಿದರು.

ಚುನಾವಣೆಯ ಬಳಿಕ ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷದ ನಾಯಕರ ಮಧ್ಯೆ ಸಮ್ಮಿಶ್ರ ಸರ್ಕಾರ ರಚಿಸುವ ಕುರಿತು ಒಳಒಪ್ಪಂದ ನಡೆದಿದೆ. ಆದರೆ ಬಿಜೆಪಿ ಇದಕ್ಕೆ ಅವಕಾಶ ನೀಡುವುದಿಲ್ಲ. ನಿಶ್ಚಲ ಬಹುಮತದೊಂದಿಗೆ ಬಿಜೆಪಿ ಅಧಿಕಾರ ಪಡೆಯಲಿದೆ ಎಂದು ತಿಳಿಸಿದರು.

ಶಿಕಾರಿಪುರದಲ್ಲಿ ಯಡಿಯೂರಪ್ಪ ಗೆಲ್ಲುವುದು ಶತಃಸಿದ್ದ. ಅವರು ಶಿಕಾರಿಪುರ ಬಿಟ್ಟು ಬೇರೆಲ್ಲಿಯೂ ಸ್ಪರ್ಧಿಸುವುದಿಲ್ಲ ಎಂದು ಸ್ಪಷ್ಟ ಪಡಿಸಿದ ಅವರು, ಬಂಗಾರಪ್ಪ ಈಗ ನಡೆಯದ ನಾಣ್ಯವಾಗಿದ್ದಾರೆ. ಆದ್ದರಿಂದ ಯಡಿಯೂರಪ್ಪನವರು 30ರಿಂದ 40 ಸಾವಿರ ಅಂತರದಿಂದ ಗೆಲುವುದು ನಿಶ್ಚಿತ ಎಂದು ತಿಳಿಸಿದರು.

ಚುನಾವಣೆಯಲ್ಲಿ ಸ್ಥಿರ ಸರ್ಕಾರ, ಅನುಭವದ ರಾಜಕಾರಣ, ಅಭಿವೃದ್ಧಿಯ ಮಂತ್ರದ ಪ್ರಮುಖ ಮೂರು ಅಂಶಗಳನ್ನಾಧರಿಸಿ, ಚುನಾವಣೆ ನಡೆಯುತ್ತಿದೆ. 20 ತಿಂಗಳು ಉತ್ತಮ ಜನಪರ ಬಜೆಟ್ ನೀಡಿದ ಹೆಗ್ಗಳಿಕೆ ಹಾಗೂ ಅನುಭವ ಬಿಜೆಪಿಗಿದೆ. ಆದ್ದರಿಂದ ಬಿಜೆಪಿಯಿಂದ ಮಾತ್ರ ಸ್ಥಿರ ಸರ್ಕಾರ ಸಾಧ್ಯ ಎಂದು ತಿಳಿಸಿದರು.
ಮತ್ತಷ್ಟು
ಧರಂಗೆ ಚುನಾವಣಾ ಆಯೋಗ ನೋಟೀಸ್
ಬಾಲಕಿ ಕೊಂದ ಬಸ್ಸಿಗೆ ಕಲ್ಲು ತೂರಾಟ
ನಾಳೆ ವೆಬ್‌ದುನಿಯಾದಲ್ಲಿ ಪಿಯುಸಿ ಫಲಿತಾಂಶ
ಕೃಷ್ಣ ಮಹಾರಾಷ್ಟ್ರಕ್ಕೆ: ಹೈಕಮಾಂಡ್‌ಗೆ ಒತ್ತಡ ಹೇರಿದ್ದ ಜೆಡಿಎಸ್!
ಅಕ್ಕಿ, ಟೀವಿ, ವಿದ್ಯುತ್, ಸಾಲ: ಕಾಂಗ್ರೆಸ್ ಪ್ರಣಾಳಿಕೆ
ರಾಜ್ಯದ ಘನತೆಗೆ ಬಿಜೆಪಿ-ಜೆಡಿಎಸ್ ಕಳಂಕ: ಕಾಂಗ್ರೆಸ್