ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಹಣದುಬ್ಬರಕ್ಕೆ ಯುಪಿಎ ಸರ್ಕಾರ ಕಾರಣ: ಅಡ್ವಾಣಿ
ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ ಎಲ್ಲ ವಿಧದಲ್ಲೂ ವಿಫಲವಾಗಿದೆ, ಹಣದುಬ್ಬರ ಏರಿಕೆಗೆ ಯುಪಿಎ ಸರ್ಕಾರದ ನೀತಿಯೇ ಕಾರಣ ಎಂದು ಬಿಜೆಪಿಯ ಹಿರಿಯ ಮುಖಂಡ ಎಲ್. ಕೆ. ಅಡ್ವಾಣಿ ಆಪಾದಿಸಿದ್ದಾರೆ.

ಚುನವಣಾ ಪ್ರಚಾರಕ್ಕಾಗಿ ನಗರದಲ್ಲಿ ಆಯೋಜಿಸಿದ್ದ ಬೃಹತ್ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದ ಅವರು ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷವು ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಕ್ಕೆ ತಕ್ಕ ಪಾಠ ಕಲಿಸಲಿದೆ ಎಂದು ನುಡಿದರು.

ರಾಜ್ಯದಲ್ಲಿ ಅತಂತ್ರ ಸ್ಥಿತಿ ನಿರ್ಮಾಣದಿಂದ ಅಭಿವೃದ್ದಿ ಹೊಂದಲು ಸಾಧ್ಯವಿಲ್ಲ. ಆದ್ದರಿಂದ ಬಿಜೆಪಿಗೆ ಮತ ನೀಡಿ ಗೆಲ್ಲಿಸಬೇಕೆಂದು ಮತದಾರರಲ್ಲಿ ಅವರು ಮನವಿ ಮಾಡಿದರು.

ಚಾಮರಾಜನಗರ ವರದಿ:
ಈ ಮಧ್ಯೆ ಚಾಮರಾಜನಗರದಲ್ಲಿ ನಡೆದ ಬಿಜೆಪಿ ಬೃಹತ್ ಸಮಾವೇಶದಲ್ಲಿ ಪತ್ರಕರ್ತರಿಗೆ ಸೂಕ್ತ ಆಸನ ವ್ಯವಸ್ಥೆ ಕಲ್ಪಿಸದ ಕಾರಣ ಆಕ್ರೋಶಗೊಂಡ ಪತ್ರಕರ್ತರು ಧರಣಿ ನಡೆಸಿದ್ದಾರೆ.

ಇಂದು ಮಧ್ಯಾಹ್ನ ನಡೆದ ಸಮಾವೇಶದಲ್ಲಿ ಪತ್ರಕರ್ತರಿಗೆ ಬಲುದೂರದಲ್ಲಿ ಆಸನ ವ್ಯವಸ್ಥೆ ಕಲ್ಪಿಸಲಾಗಿತ್ತು. ಆದರೆ ಇದರಿಂದ ವರದಿ ಮಾಡಲು ಅನಾನುಕೂಲವಾಗುತ್ತದೆಂದು ಮನವಿ ಸಲ್ಲಿಸಿದರೂ, ಯಾವುದೇ ಪ್ರತಿಕ್ರಿಯೆಗಳು ಬರಲಿಲ್ಲ. ಈ ಬಗ್ಗೆ ಸ್ವತಃ ಅಡ್ವಾಣಿಯವರೇ ಪೊಲೀಸರಿಗೆ ವ್ಯವಸ್ಥೆ ಕಲ್ಪಿಸುವಂತೆ ತಿಳಿಸಿದರು. ಆದರೆ ಎಸ್ಪಿ ಭದ್ರತೆ ದೃಷ್ಟಿಯಿಂದ ತಳ್ಳಿ ಹಾಕಿದರು.

ಈ ಘಟನೆಯಿಂದ ಆಕ್ರೋಶಗೊಂಡು ಸಮಾವೇಶ ನಡೆಯುತ್ತಿದ್ದಂತೆ ಪ್ರತಿಭಟನೆ ನಡೆಸಿದ ಸುಮಾರು 25 ಪತ್ರಕರ್ತರನ್ನು ಪೊಲೀಸರು ಬಂಧಿಸಿದ್ದಾರೆ.
ಮತ್ತಷ್ಟು
2008ರ ಪಿಯುಸಿ ಫಲಿತಾಂಶ ಇಲ್ಲಿ ಲಭ್ಯ
ಇಂದು ಸಂಜೆ ಜೆಡಿಎಸ್ ಮೂರನೇ ಪಟ್ಟಿ
ಕಾಂಗ್ರೆಸ್-ಜೆಡಿಎಸ್ ಒಳಒಪ್ಪಂದ: ಡಿ.ವಿ
ಧರಂಗೆ ಚುನಾವಣಾ ಆಯೋಗ ನೋಟೀಸ್
ಬಾಲಕಿ ಕೊಂದ ಬಸ್ಸಿಗೆ ಕಲ್ಲು ತೂರಾಟ
ನಾಳೆ ವೆಬ್‌ದುನಿಯಾದಲ್ಲಿ ಪಿಯುಸಿ ಫಲಿತಾಂಶ