ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಸಾರಾಯಿ ಜಾರಿ:ಮೊಯಿಲಿ
ಇತ್ತೀಚೆಗಷ್ಟೆ ರಾಮನ ಮೂರ್ತಿ ಮತ್ತು ಹುಂಡಿಯನ್ನು ರಾಮಭಕ್ತರು ಕದ್ದುಕೊಂಡು ಹೋಗಿದ್ದಾರೆ ಎಂಬ ವಿವಾದದ ಹೇಳಿಕೆ ನೀಡಿರುವ ಬೆನ್ನಲ್ಲೆ, ಮಾಜಿ ಮುಖ್ಯಮಂತ್ರಿ ಎಂ ವೀರಪ್ಪ ಮೊಯಿಲಿ ಈಗ ಮತ್ತೊಂದು ವಿವಾದಕ್ಕೆ ನಾಂದಿ ಹಾಡಿದ್ದಾರೆ.

ಇಂದು (ಶನಿವಾರ) ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಜೆಡಿಎಸ್-ಬಿಜೆಪಿ ಸಮ್ಮಿಶ್ರ ಸರ್ಕಾರದಲ್ಲಿ ಜಾರಿಗೆ ತಂದಿರುವ ಸಾರಾಯಿ ನಿಷೇಧದಿಂದ ಮದ್ಯ ಕುಡಿಯುವವರ ಸಂಖ್ಯೆಯಲ್ಲಿ ಕಡಿಮೇಯೇನೂ ಆಗಿಲ್ಲ. ದುಬಾರಿ ಬೆಲೆಗೆ ಜನ ಮದ್ಯ ಸೇವಿಸುತ್ತಿದ್ದಾರೆ. ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಈ ಬಗ್ಗೆ ಪರೀಶೀಲನೆ ನಡೆಸುವುದು ಎಂದು ತಿಳಿಸಿದರು. ಈ ಮೂಲಕ ಪರೋಕ್ಷವಾಗಿ ಸರಾಯಿ ನಿಷೇಧವನ್ನು ಹಿಂದಕ್ಕೆ ಪಡೆಯುವುದಾಗಿ ಅವರು ತಿಳಿಸಿದರು.

ಈ ಮಧ್ಯೆ ಬಿಜೆಪಿ ಮೇಲೆ ಹರಿಹಾಯ್ದ ಅವರು, ದೇಶದಲ್ಲಿ ಭಯೋತ್ಪಾದನೆ ಹೆಚ್ಚಳಕ್ಕೆ ಹಿಂದಿನ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರವೇ ಕಾರಣ. ಈಗ ರಾಮಸೇತುವೆ ಬಗ್ಗೆ ಅಪಸ್ವರ ಎತ್ತುತ್ತಿರುವ ಬಿಜೆಪಿ, ಅಧಿಕಾರದಲ್ಲಿದ್ದ ಸಂದರ್ಭದಲ್ಲಿ ಅಡಮ್ ಬ್ರಿಡ್ಜ್ ಎಂಬ ಹೆಸರಿನೊಂದಿಗೆ ರಾಮಸೇತುವೆ ಕೆಡವುದಕ್ಕಾಗಿ ಯೋಜನೆ ಕೈಗೆತ್ತಿಕೊಂಡಿತ್ತು ಎಂದು ಆರೋಪಿಸಿದರು.

ಕಾಂಗ್ರೆಸ್ ಮುಂದಿನ ಚುನಾವಣೆಯಲ್ಲಿ ಅಧಕಾರಕ್ಕೆ ಬಂದರೆ ಮಹಿಳೆಯರಿಗೆ ಮೊದಲ ಆದ್ಯತೆ ನೀಡುವುದಾಗಿ ಅವರು ಈ ಸಂದರ್ಭದಲ್ಲಿ ತಿಳಿಸಿದರು.
ಮತ್ತಷ್ಟು
ದ್ವಿತೀಯ ಪಿಯುಸಿ ಫಲಿತಾಂಶ: ದ.ಕ ಪ್ರಥಮ
ಹಣದುಬ್ಬರಕ್ಕೆ ಯುಪಿಎ ಸರ್ಕಾರ ಕಾರಣ: ಅಡ್ವಾಣಿ
2008ರ ಪಿಯುಸಿ ಫಲಿತಾಂಶ ಇಲ್ಲಿ ಲಭ್ಯ
ಇಂದು ಸಂಜೆ ಜೆಡಿಎಸ್ ಮೂರನೇ ಪಟ್ಟಿ
ಕಾಂಗ್ರೆಸ್-ಜೆಡಿಎಸ್ ಒಳಒಪ್ಪಂದ: ಡಿ.ವಿ
ಧರಂಗೆ ಚುನಾವಣಾ ಆಯೋಗ ನೋಟೀಸ್