ಮಹಿಳೆ, ಯುವಜನತೆ ಸ್ವಾವಲಂಬಿಯಾಗಿ ಬದುಕಲು ಬೇಕಾಗುವ ಯೋಜನೆಗಳನ್ನು ಗಮನದಲ್ಲಿಟ್ಟುಕೊಂಡು ಚುನಾವಣಾ ಪ್ರಣಾಳಿಕೆ ಜೆಡಿಎಸ್ ಬಿಡುಗಡೆ ಮಾಡಲಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಘೊಷಿಸಿದ್ದಾರೆ.
ನಗರದಲ್ಲಿ ಇಂದು (ಶನಿವಾರ) ಪಕ್ಷದ ಅಭ್ಯರ್ಥಿ ಪರ ಪ್ರಚಾರ ಕೈಗೊಂಡ ಕುಮಾರಸ್ವಾಮಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ, ಜನರ ಆಶೋತ್ತರಗಳಿಗೆ ಪೂರಕವಾಗುವಂತಹ ಪ್ರಣಾಳಿಕೆಯನ್ನು ಜೆಡಿಎಸ್ ಜನತೆಗೆ ನೀಡಲಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಪ್ರಣಾಳಿಕೆಯ ಕುರಿತು ಟೀಕಿಸಿದ ಅವರು, ಈಗಾಗಲೇ ನೀಡಿರುವ ಆಶ್ವಾಸನೆಗಳನ್ನೇ ಸಕಾರಗೊಳಿಸಲು ಸಾಧ್ಯವಾದ ಕಾಂಗ್ರೆಸ್, ಈಗ ಮತ್ತೆ ಆಶ್ವಾಸನೆಗಳ ಮಹಾಪೂರವೇ ನೀಡುತ್ತಿರುವುದು ವಿಷಾದನೀಯ ಎಂದು ವ್ಯಂಗ್ಯವಾಡಿದರು.
ಈ ಮಧ್ಯೆ ನಾಳೆ ಬಿಡುಗಡೆ ಮಾಡಲಿರುವ ಜೆಡಿಎಸ್ ಚುನಾವಣಾ ಪ್ರಣಾಳಿಕೆಯ ಅಂತಿಮ ತಯಾರಿ ಭರದಿಂದ ಸಾಗುತ್ತಿದೆ. ಕಾಂಗ್ರೆಸ್ ಹಾಗೂ ಬಿಜೆಪಿ ಈಗಾಗಲೇ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದೆ. ಇಂದು ಪಕ್ಷದ ಸಾಧನೆಗಳ ಕುರಿತ ಸಿಡಿ ಬಿಡುಗಡೆ ಮಾಡಿರುವ ಜೆಡಿಎಸ್, ಕುಮಾರಸ್ವಾಮಿಯವರನ್ನೇ ನಾಯಕನನ್ನಾಗಿ ಬಿಂಬಿಸಿದೆ.
|