ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಎಸ್ಸೆಸ್ಸೆಲ್ಸಿ: ಶೇ.69.63 ವಿದ್ಯಾರ್ಥಿಗಳು ತೇರ್ಗಡೆ
ಬೆಂಗಳೂರು: ಎಸ್ಸೆಸ್ಸೆಲ್ಸಿ ಫಲಿತಾಂಶ ಭಾನುವಾರ ಪ್ರಕಟಗೊಂಡಿದ್ದು, ಮತ್ತೊಮ್ಮೆ ಬಾಲಕಿಯರು ಫಲಿತಾಂಶದಲ್ಲಿ ಮೇಲುಗೈ ಸಾಧಿಸಿದ್ದಾರೆ.

ಭಾನುವಾರ ಪ್ರಕಟಗೊಂಡ ಫಲಿತಾಂಶದಲ್ಲಿ ಒಟ್ಟು ಶೇ. 69.63 ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದಾರೆ. ಒಟ್ಟು 8,39,006 ವಿದ್ಯಾರ್ಥಿಗಳು ಎಸ್ಎಸ್ಎಲ್ಸಿ ಪರೀಕ್ಷೆ ಬರೆದಿದ್ದರೆ, 5,56,874 ವಿದ್ಯಾರ್ಥಿಗಳು ಉತ್ತೀರ್ಣಗೊಂಡಿದ್ದಾರೆ.

ಜಿಲ್ಲಾವಾರು ಫಲಿತಾಂಶದ ನೋಡಿದರೆ, ಚಿಕ್ಕೋಡಿ ಶೇ. 84.71ರಷ್ಟು ಫಲಿತಾಂಶ ಹೊಂದಿದ್ದು, ಮೊದಲ ಸ್ಥಾನ ಪಡೆದಿದೆ. ಚಿತ್ರದುರ್ಗ ಶೇ. 79.53ರೊಂದಿಗೆ ಎರಡನೇ ಸ್ಥಾನ ಗಳಿಸಿದರೆ, ಉಡುಪಿ ಮೂರನೇ ಸ್ಥಾನ ಗಳಿಸಿದೆ. ಬೀದರ್ ಶೇ. 27.39ರೊಂದಿಗೆ ಕೊನೆಯ ಸ್ಥಾನ ಹೊಂದಿದೆ.

ಈ ಬಾರಿಯು ಫಲಿತಾಂಶದಲ್ಲಿ ಬಾಲಕಿಯರೇ ಮೇಲುಗೈ ಸಾಧಿಸಿದ್ದು, ಶೇ. 69ರಷ್ಟು ಬಾಲಕಿಯರು ತೇರ್ಗಡೆ ಹೊಂದಿದ್ದರೆ, ಶೇ. 64.61ರಷ್ಟು ಬಾಲಕರು ಉತ್ತೀರ್ಣರಾಗಿದ್ದಾರೆ.
ಮತ್ತಷ್ಟು
ಭಯೋತ್ಪಾದನೆ ನಿಗ್ರಹದಲ್ಲಿ ಯುಪಿಎ ವಿಫಲ: ರಾಜನಾಥ್
ಮೊಯ್ಲಿ ಚರ್ಚೆಗೆ ಬರಲಿ: ಯಡಿಯೂರ್ ಸವಾಲು
ಹುಬ್ಬಳ್ಳಿಯಲ್ಲಿ ಭಾರಿ ಪ್ರಮಾಣದ ಸ್ಫೋಟಕ ಪತ್ತೆ
ಸ್ತ್ರೀಯಾಧಾರಿತ ಚುನಾವಣಾ ಪ್ರಣಾಳಿಕೆ: ಕುಮಾರ ಸ್ವಾಮಿ
ಅನುಕಂಪದ ಬಿಜೆಪಿಗೆ ಆಶೀರ್ವಾದ
ಬಿಎಸ್ಪಿ ಆಡಂಬರದ ಪಕ್ಷವಲ್ಲ: ಸಿಂಧ್ಯಾ