ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಸಾರಾಯಿ ಜಾರಿ ಕಾಂಗ್ರೆಸ್ ಹೇಳಿಕೆಗೆ ಖಂಡನೆ
ರಾಜ್ಯದಲ್ಲಿ ಚುನಾವಣಾ ರಂಗು ದಿನೇ ದಿನೇ ಏರುತ್ತಿದ್ದಂತೆ ರಾಜಕೀಯ ಪಕ್ಷಗಳ ಆಶ್ವಾಸನೆಗಳು ಹೆಚ್ಚಾಗುತ್ತಾ ಸಾಗುತ್ತಿವೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಸಾರಾಯಿ ನಿಷೇಧವನ್ನು ಹಿಂದಕ್ಕೆ ಪಡೆಯುವುದಾಗಿ ಇತ್ತೀಚೆಗಷ್ಟೆ ಕಾಂಗ್ರೆಸ್ ಮುಖಂಡರಾದ ವೀರಪ್ಪ ಮೊಯಿಲಿ ಹಾಗೂ ಜರ್ನಾರ್ಧನ ಪೂಜಾರಿ ಹೇಳಿಕೆ ನೀಡಿರುವುದನ್ನು ಬಿಜೆಪಿ ಹಾಗೂ ಜೆಡಿಎಸ್ ತೀವ್ರವಾಗಿ ಖಂಡಿಸಿದೆ.

ನಗರದಲ್ಲಿ ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷ ಡಿ.ವಿ. ಸದಾನಂದ ಗೌಡ, ಪೂಜಾರಿ ಅವರ ಕನಸು ಬರೀ ಕನಸಷ್ಟೇ. ಅದು ಯಾವತ್ತೂ ನನಸಾಗಲೂ ಸಾಧ್ಯವಿಲ್ಲ. ಕಾಂಗ್ರೆಸ್ ಚುನಾವಣೆಯ ಮೊದಲೇ ಜನತೆಯನ್ನು ಅಮಲೇರಿಸಲು ಹೊರಟಿದೆ ಎಂದು ವ್ಯಂಗ್ಯವಾಡಿದರು.

ಇತ್ತ ಜೆಡಿಎಸ್ ಮುಖಂಡ ಎಚ್.ಡಿ. ಕುಮಾರಸ್ವಾಮಿ, ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ತಾನೇ ಸಾರಾಯಿ ನಿಷೇಧ ವಾಪಾಸ್ ತೆಗೆದುಕೊಳ್ಳುವುದು. ಜೆಡಿಎಸ್, ಪುನಃ ಸಾರಾಯಿ ಜಾರಿ ಮಾಡಲು ಯಾವತ್ತೂ ಅವಕಾಶ ಮಾಡಿಕೊಡುವುದಿಲ್ಲ ಎಂದು ತಿಳಿಸಿದರು.

ಈ ಮಧ್ಯೆ ಮಾಜಿ ಪ್ರಧಾನಿ ಎಚ್. ಡಿ. ದೇವೇಗೌಡ ಮುಖ್ಯವಾಗಿ ಮಹಿಳೆಯರಿಗೆ ಕಿವಿಮಾತು ಹೇಳಿದ್ದಾರೆ. ಸಾರಾಯಿ ನಿಷೇಧ ಮಾಡಿ ರಾಜ್ಯದ ಅಸಂಖ್ಯಾತ ಮಹಿಳೆಯರು ನೆಮ್ಮದಿಯ ಜೀವನ ನಡೆಸುವಂತೆ ಮಾಡಲಾಗಿತ್ತು. ಆದರೆ ಈಗ ಕಾಂಗ್ರೆಸ್ ಮತ್ತೆ ಸಾರಾಯಿ ಮಾರಾಟ ಜಾರಿಗೆ ತರುತ್ತದೆ ಎಂದು ಸಾರಿದೆ. ಮಹಿಳೆಯರೇ ಈ ಬಗ್ಗೆ ಎಚ್ಚರವಿರಲಿ ಎಂದು ತಿಳಿಸಿದರು.
ಮತ್ತಷ್ಟು
ಎಸ್ಸೆಸ್ಸೆಲ್ಸಿ: ಶೇ.69.63 ವಿದ್ಯಾರ್ಥಿಗಳು ತೇರ್ಗಡೆ
ಭಯೋತ್ಪಾದನೆ ನಿಗ್ರಹದಲ್ಲಿ ಯುಪಿಎ ವಿಫಲ: ರಾಜನಾಥ್
ಮೊಯ್ಲಿ ಚರ್ಚೆಗೆ ಬರಲಿ: ಯಡಿಯೂರ್ ಸವಾಲು
ಹುಬ್ಬಳ್ಳಿಯಲ್ಲಿ ಭಾರಿ ಪ್ರಮಾಣದ ಸ್ಫೋಟಕ ಪತ್ತೆ
ಸ್ತ್ರೀಯಾಧಾರಿತ ಚುನಾವಣಾ ಪ್ರಣಾಳಿಕೆ: ಕುಮಾರ ಸ್ವಾಮಿ
ಅನುಕಂಪದ ಬಿಜೆಪಿಗೆ ಆಶೀರ್ವಾದ