ಜೆಡಿಎಸ್ ಅಧಿಕಾರಕ್ಕೆ ಬಂದರೆ ಒಂದು ವರ್ಷದಲ್ಲಿ ರೈತರ ಸಂಪೂರ್ಣ ಸಾಲಮನ್ನಾ, ಸಿಇಟಿ ರದ್ದತಿಗೆ ಕ್ರಮ, ಸಂಪೂರ್ಣ ಆರೋಗ್ಯ ಸಂಜೀವಿನಿ ಯೋಜನೆ ಸೇರಿದಂತೆ ಅನೇಕ ಭರವಸೆಗಳನ್ನೊಳಗೊಂಡ ಚುನಾವಣಾ ಪ್ರಣಾಳಿಕೆಯನ್ನು ಜೆಡಿಎಸ್ ಇಂದು (ಸೋಮವಾರ) ಬಿಡುಗಡೆ ಮಾಡಿತು.
ಪಕ್ಷದ ರಾಷ್ಟ್ರೀಯ ಮುಖಂಡ ಎಚ್. ಡಿ. ದೇವೇಗೌಡ ಇಂದು ಪಕ್ಷದ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದರು. ಬಿಪಿಎಲ್ ಕಾರ್ಡದಾರರಿಗೆ ಉಚಿತ ಅಡುಗೆ ಅನಿಲ, ಸಾಚರ್ ಸಮಿತಿ ವರದಿ ಜಾರಿಗೆ ಕ್ರಮ, ಕನ್ನಡಕ್ಕೆ ರಾಷ್ಟ್ರೀಯ ಸ್ಥಾನಮಾನ ನೀಡುವಂತೆ ವ್ಯವಸ್ಥಿತ ಹೋರಾಟವನ್ನು ಪಕ್ಷ ನಡೆಸುವುದಾಗಿ ಪ್ರಣಾಳಿಕೆಯಲ್ಲಿ ತಿಳಿಸಿದೆ.
ಅಲ್ಲದೆ, ಬೆಸ್ತ, ಮಡಿವಾಳ, ಜನಾಂಗದ ಅಭಿವೃದ್ದಿ, ಕಡುಬಡವರಿಗೆ ಲೇ ಓಟ್ ರಚನೆ, ಬಡತನ ರೇಖೆಗಿಂತ ಕೆಳಗಿನವರಿಗೆ ವಿದ್ಯಾಭ್ಯಾಸದ ನೆರವು, ಆಟೋ, ಟ್ಯಾಕ್ಸಿ ಚಾಲಕರು ಮೃತಪಟ್ಟಲ್ಲಿ ಅವರ ಕುಟುಂಬಕ್ಕೆ 1ಲಕ್ಷ ರೂ. ವಿಮಾ ಸೌಲಭ್ಯ, ಬಡತನ ರೇಖೆಗಿಂತ ಕೆಳಗಿನವರಿಗೆ ವಿದ್ಯಾಭ್ಯಾಸದ ನೆರವು, ಬೆಸ್ತ, ಮಡಿವಾಳ, ವಿಶ್ವಕರ್ಮ ಜನಾಂಗದ ಅಭಿವೃದ್ದಿಗೆ ಕ್ರಮ - ಇವು ಪ್ರಣಾಳಿಕೆಯ ಇನ್ನಿತರ ಪ್ರಮುಖಾಂಶಗಳು.
ಇದೇ ಸಂಧರ್ಭದಲ್ಲಿ ಮಾತನಾಡಿದ ದೇವೇಗೌಡರು, ಒಳಮೀಸಲಾತಿ ಕ್ರಮಕ್ಕೆ ಜೆಡಿಎಸ್ ಬದ್ದವಾಗಿದೆ ಎಂದು ತಿಳಿಸಿದರು.
|