ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ನಕ್ಸಲ್ ಪೀಡಿತ ಪ್ರದೇಶಕ್ಕೆ ನೆರವು: ವಿಶ್ವೇಶ ಶ್ರೀಗಳು
ನಕ್ಸಲ್ ಪೀಡಿತ ಪ್ರದೇಶದ ಜನರಿಗೆ ಮಠದ ವತಿಯಿಂದ ಮೂಲಸೌಕರ್ಯವನ್ನು ಒದಗಿಸಲಾಗುವುದು ಎಂದು ತಿಳಿಸಿದ ಪೇಜಾವರ ಮಠದ ಶ್ರೀ ವಿಶ್ವೇಶ್ವರತೀರ್ಥ ಶ್ರೀಗಳು, ಈ ಕಾರ್ಯವನ್ನು ಚಿಕ್ಕಮಗಳೂರು ಜಿಲ್ಲೆಯಿಂದಲೇ ಆರಂಭಿಸುವುದಾಗಿ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಚಿಕ್ಕಮಗಳೂರು ಜಿಲ್ಲೆಯ ಮೆಣಸಿನಹಾಡ್ಯದಲ್ಲಿನ ಪ್ರತಿ ಮನೆಗಳಿಗೆ 5 ಸಾವಿರ ರೂ. ವೆಚ್ಚದಲ್ಲಿ ವಿದ್ಯುತ್ ಸಂಪರ್ಕ ಕಲ್ಪಿಸಲಾಗುತ್ತಿದ್ದು, ಇದಕ್ಕಾಗಿ ಒಟ್ಟು 3.85 ಲಕ್ಷ ರೂ. ವ್ಯಯಿಸಲಾಗುತ್ತದೆ. ಮೂಡಿಗೆರೆಯ ಶಂಕರಕುಡಿಗೆ-ನೀರ್ಕಲ್ಲು ಪ್ರದೇಶದ ಪರಿಶಿಷ್ಟ ಪಂಗಡಗಳ ಜನತೆಗೆ 8 ಸಾವಿರ ರೂ. ವೆಚ್ಚದಲ್ಲಿ ಕುಡಿಯುವ ನೀರಿನ ವ್ಯವಸ್ಥೆ ರೂಪಿಸಲಾಗಿದೆ.

ಕೊಪ್ಪ ತಾಲೂಕಿನ ಗಿರಿಜನರಿಗೆ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಲು 13 ಸಾವಿರ ರೂ. ವ್ಯಯಿಸಲು ಮಠ ನಿರ್ಧರಿಸಿದೆ. ಬಡ ವಿದ್ಯಾರ್ಥಿಗಳ ಶಿಕ್ಷಣಕ್ಕೆ 65 ಸಾವಿರ ರೂ. ಹಾಗೂ ಮೆಣಸಿನ ಹಾಡ್ಯದಲ್ಲಿ ನಕ್ಸಲರ ಗುಂಡಿಗೆ ಹತನಾದ ಶೇಷಪ್ಪ ಗೌಡ ಅವರ ಪುತ್ರನ ವಿದ್ಯಾಭ್ಯಾಸ ಮುಂದುವರೆಸಲು ಮಠ 17 ಸಾವಿರ ರೂ. ನೀಡಿದೆ.

ಮಾನವೀಯ ದೃಷ್ಟಿಯಿಂದ ಸೇವಾ ಕಾರ್ಯ ಕೈಗೊಳ್ಳುತ್ತಿದ್ದೇವೆ. ಇದರಲ್ಲಿ ರಾಜಕೀಯವಿಲ್ಲ. ನಕ್ಸಲರು ತಮ್ಮನ್ನು ಸಂಪರ್ಕಿಸಿದರೆ ತಾವು ಅವರೊಂದಿಗೆ ಮಾತುಕತೆಗೆ ಸಿದ್ಧ ಎಂದು ಶ್ರೀಗಳು ತಿಳಿಸಿದ್ದಾರೆ. ಬಡ ವಿದ್ಯಾರ್ಥಿಗಳಿಗೆ ಉಚಿತ ಹಾಸ್ಟೆಲ್ ನಿರ್ಮಾಣಕ್ಕೆ ಮೇ 21 ರಂದು ಶಂಕುಸ್ಥಾಪನೆ ನಡೆಯಲಿದೆ.
ಮತ್ತಷ್ಟು
ಗೌಡರದು ಈಗ ಬಹುಮತ ರಾಗ
ಸಾರಾಯಿ ಜಾರಿ: ಖರ್ಗೆ ಅಸಮಾಧಾನ
ಕಾಂಗ್ರೆಸ್ ಪರ ಪ್ರಚಾರಕ್ಕೆ ವೈ.ಎಸ್. ರೆಡ್ಡಿ, ಆಜಾದ್
ವೈಜನಾಥ್ ಪಾಟೀಲ್ ಬಿಜೆಪಿಗೆ?
ದಾವಣಗೆರೆಯಲ್ಲಿ ಲೋಕಜನಶಕ್ತಿ ಅಭ್ಯರ್ಥಿಗೆ ಬೆಂಬಲ:ಚೌಹಾಣ್
ಮೂರನೇ ಹಂತದ ಚುನಾವಣೆ :ಇಂದು ನಾಮಪತ್ರ ಪರೀಶೀಲನೆ