ಕೃಷಿ, ಶಿಕ್ಷಣ ಹಾಗೂ ಧಾರ್ಮಿಕ ಕಾರ್ಯಕ್ರಮಗಳನ್ನು ಗಮನದಲ್ಲಿಟ್ಟುಕೊಂಡು ರಾಷ್ಟ್ರೀಯ ಹಿಂದೂಸ್ತಾನ್ ಸೇನಾ ಪಕ್ಷವು ಪ್ರಣಾಳಿಕೆಯನ್ನು ಇಂದು (ಮಂಗಳವಾರ) ಬಿಡುಗಡೆ ಮಾಡಿದೆ.
ಕೃಷಿಗೆ ಪ್ರಣಾಳಿಕೆಯಲ್ಲಿ ಪ್ರಮುಖ ಆದ್ಯತೆ ನೀಡಿರುವ ಪಕ್ಷವು, ಕೃಷಿ ಪಂಪಸೆಟ್‌ಗಳಿಗೆ 24 ಗಂಟೆಗಳ ಕಾಲವೂ ಉಚಿತ ವಿದ್ಯುತ್ ಪೂರೈಕೆ, ಸಣ್ಣ ರೈತ ಸಮೂಹ ವಿಮಾ ಸೌಲಭ್ಯ ಕಲ್ಪಿಸುವುದು, ಸಾವಯವ ಕೃಷಿಗೆ ಉತ್ತೇಜನ ಸೇರಿದಂತೆ ಹಲವು ಕೃಷಿಪರ ಯೋಜನೆಗಳು ಪ್ರಣಾಳಿಕೆಯ ಪ್ರಮುಖಾಂಶಗಳು. ಬಡತನ ರೇಖೆಗಿಂತ ಕೆಳಗಿನ ಮಕ್ಕಳಿಗೆ ಉಚಿತ ಶಿಕ್ಷಣ ಸೌಲಭ್ಯ, ಹೆಚ್ಚುತ್ತಿರುವ ಡೊನೇಷನ್ ಹಾವಳಿ ತಪ್ಪಿಸಲು ಕ್ರಮ, ಪ್ರತಿ ಕ್ಷೇತ್ರಕ್ಕೊಂದು ಕಾರ್ಖಾನೆ ಆರಂಭಿಸುವ ಮೂಲಕ ನಿರುದ್ಯೋಗಿಗಳಿಗೆ ಉದ್ಯೋಗ, ಗುಡಿ ಕೈಗಾರಿಕೆಗಳಿಗೆ ಮೊದಲ ಆದ್ಯತೆ ಹಾಗೂ ಮಾರುಕಟ್ಟೆ ವ್ಯವಸ್ಥೆ, ಸ್ತ್ರೀ ಶಕ್ತಿ ಹಾಗೂ ಸ್ವಸಹಾಯ ಗುಂಪುಗಳ ಅಭಿವೃದ್ದಿ-ಇವೇ ಮೊದಲಾದವುಗಳು ಪ್ರಣಾಳಿಕೆಯ ಪ್ರಮುಖ ಅಂಶಗಳಾಗಿವೆ.
ಅಲ್ಲದೆ, ಪಕ್ಷದ ಪ್ರಮುಖ ಅಂಶವಾದ ಗೋಹತ್ಯಾ ನಿಷೇಧಕ್ಕೆ ಕಾನೂನು ರೂಪಿಸುವುದು ಮತ್ತು ಗೋಹಂತಕರಿಗೆ ಘೋರ ಶಿಕ್ಷೆ, ಭ್ರಷ್ಟಾಚಾರ ತಡೆಗೆ ಬಿಗಿ ಕಾನೂನು ರೂಪಿಸುವುದು. ಈ ನಿಟ್ಟಿನಲ್ಲಿ ಲೋಕಾಯುಕ್ತರಿಗೆ ಪೂರ್ಣ ಅಧಿಕಾರ ನೀಡುವುದಾಗಿ ಪ್ರಣಾಳಿಕೆಯಲ್ಲಿ ಪಕ್ಷ ತಿಳಿಸಿದೆ.
|