ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಚು, ನೀತಿ: ಕಟ್ಟುನಿಟ್ಟಿನ ಜಾರಿಗೆ ಮೆರಾಜುದ್ದೀನ್ ಆಗ್ರಹ
ರಾಜ್ಯದಲ್ಲಿ ಚುನಾವಣಾ ದಿನ ಘೋಷಿಸಿದ ಬೆನ್ನಲ್ಲೆ ಕಟ್ಟುನಿಟ್ಟಿನ ಕ್ರಮವನ್ನು ಜಾರಿಗೊಳಿಸಿರುವ ಚುನಾವಣಾ ಆಯೋಗವು ಎಲ್ಲಾ ರಾಜಕೀಯ ಪಕ್ಷಗಳ ಕೆಂಗಣ್ಣಿಗೆ ಗುರಿಯಾಗಿತ್ತು. ಆದರೆ ಈಗ ಜೆಡಿಎಸ್ ಪಕ್ಷದ ರಾಜ್ಯಾಧ್ಯಕ್ಷ ಮೆರಾಜುದ್ದೀನ್ ಪಾಟೀಲ್ ಚುನಾವಣಾ ನೀತಿ ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕೆಂದು ಆಗ್ರಹಿಸಿರುವುದು ಎಲ್ಲರನ್ನು ಹುಬ್ಬೇರಿಸಿದೆ.

ಇದಕ್ಕೆ ಕಾರಣ ಇಲ್ಲದಿಲ್ಲ. ಅವರೇ ಹೇಳುವಂತೆ, ಚುನಾವಣಾ ನೀತಿ ನಿಯಮಗಳು ಕಠಿಣವಾಗಿದ್ದರೂ, ಕೆಲವೆಡೆ ಅವುಗಳು ಸಮರ್ಪಕವಾಗಿ ಜಾರಿಯಾಗಿಲ್ಲ. ಈ ನಿಟ್ಟಿನಲ್ಲಿ ಕಠಿಣ ಕ್ರಮ ಕೈಗೊಳ್ಳುವಂತೆ ಆಯೋಗವನ್ನು ಒತ್ತಾಯಿಸಿದ್ದಾರೆ.

ಇದೇ ಸಂದರ್ಭದಲ್ಲಿ ಜೆಡಿಎಸ್ ಆಡಳಿತದ ಕುರಿತು ಮಾತನಾಡಿದ ಅವರು, ಕಳೆದ 20 ತಿಂಗಳ ಸಮ್ಮಿಶ್ರ ಸರ್ಕಾರದಲ್ಲಿ ಜೆಡಿಎಸ್ ಪಕ್ಷವು ಯಾರೂ ಕೈಗೊಳ್ಳದ ಅಭಿವೃದ್ದಿ ಕಾರ್ಯಗಳನ್ನು ಕೈಗೊಂಡಿದ್ದು, ಇದನ್ನು ಆಧರಿಸಿ ಜನತೆ ಪಕ್ಷಕ್ಕೆ ಮತ ನೀಡಲಿದ್ದಾರೆ ಎಂದು ತಿಳಿಸಿದರು.

ಅಲ್ಲದೆ, ರಾಜ್ಯದಲ್ಲಿ ಜೆಡಿಎಸ್ ಪ್ರವಾಸ ಕೈಗೊಂಡ ವೇಳೆ ಎಲ್ಲಾ ಕಡೆಗಳಲ್ಲಿ ಜೆಡಿಎಸ್ ಪರವಾದ ಅಲೆ ಕಂಡು ಬಂದಿರುವುದರಿಂದ ಈ ಬಾರಿ ಚುನಾವಣೆಯಲ್ಲಿ ಜೆಡಿಎಸ್ ಸ್ಪಷ್ಟ ಬಹುಮತ ಪಡೆಯಲಿದೆ ಎಂಬ ವಿಶ್ವಾಸವನ್ನು ಅವರು ವ್ಯಕ್ತಪಡಿಸಿದರು.
ಮತ್ತಷ್ಟು
ಬಿಜೆಪಿಯಿಂದ ಮೂವರ ಅಮಾನತು
ರಾಷ್ಟ್ರೀಯ ಹಿಂದೂಸ್ತಾನ್ ಸೇನಾ ಪ್ರಣಾಳಿಕೆ ಬಿಡುಗಡೆ
ನಕ್ಸಲ್ ಪೀಡಿತ ಪ್ರದೇಶಕ್ಕೆ ನೆರವು: ವಿಶ್ವೇಶ ಶ್ರೀಗಳು
ಗೌಡರದು ಈಗ ಬಹುಮತ ರಾಗ
ಸಾರಾಯಿ ಜಾರಿ: ಖರ್ಗೆ ಅಸಮಾಧಾನ
ಕಾಂಗ್ರೆಸ್ ಪರ ಪ್ರಚಾರಕ್ಕೆ ವೈ.ಎಸ್. ರೆಡ್ಡಿ, ಆಜಾದ್