ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಕಾಂಗ್ರೆಸ್‌ನಿಂದ ಮಾತ್ರ ಸ್ಥಿರ ಸರಕಾರ ಸಾಧ್ಯ: ರೆಡ್ಡಿ
ಸಮ್ಮಿಶ್ರ ಸರ್ಕಾರದ ಅಸ್ಥಿರತೆಯಿಂದ ಬೇಸತ್ತಿರುವ ಜನತೆ ಸ್ಥಿರ ಹಾಗೂ ಸುಭದ್ರ ಸರ್ಕಾರ ನೀಡುವ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಿ ಗೆಲ್ಲಿಸಬೇಕೆಂದು ಆಂಧ್ರ ಪ್ರದೇಶದ ಮುಖ್ಯಮಂತ್ರಿ ವೈ.ಎಸ್. ರಾಜಶೇಖರ ರೆಡ್ಡಿ ತಿಳಿಸಿದ್ದಾರೆ.

ಚುನಾವಣಾ ಪ್ರಚಾರಕ್ಕೆ ರಾಜ್ಯಕ್ಕೆ ಆಗಮಿಸಿದ ಅವರು ಸುದ್ದಿಗಾರರೊಂದಿಗೆ ಮಾತನಾಡುತ್ತಾ, ರಾಜ್ಯದಲ್ಲಿ ಸ್ಥಿರ ಸರ್ಕಾರ ನೀಡುವುದು ಕಾಂಗ್ರೆಸ್ ಪಕ್ಷದಿಂದ ಮಾತ್ರ ಸಾಧ್ಯವೆಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ನೂತನ ವಿಮಾನ ನಿಲ್ದಾಣದ ಬಗ್ಗೆ ಮಾತನಾಡಿದ ಅವರು, ಬೆಂಗಳೂರು ಹಾಗೂ ಹೈದರಾಬಾದ್‌ನಲ್ಲಿ ವಿಮಾನ ನಿಲ್ದಾಣ ಒಂದೇ ಸಮಯದಲ್ಲಿ ಪ್ರಾರಂಭಗೊಂಡಿತ್ತು. ಹೈದರಬಾದ್ ವಿಮಾನ ನಿಲ್ದಾಣ ಈಗಾಗಲೇ ಕಾರ್ಯಾರಂಭ ಮಾಡಿದರೆ ಕರ್ನಾಟಕದಲ್ಲಿ ಪ್ರಾರಂಭವೇ ಆಗಿಲ್ಲ. ಇದಕ್ಕೆ ಸರ್ಕಾರದ ಅಸ್ಥಿರತೆಯೇ ಕಾರಣ ಎಂದು ತಿಳಿಸಿದರು.

ಕಾಂಗ್ರೆಸ್ ಪಕ್ಷ ತನ್ನ ಪ್ರಣಾಳಿಕೆಯಲ್ಲಿ ನೀಡಿದ ಆಶ್ವಾಸನೆಗಳನ್ನು ಚಾಚೂ ತಪ್ಪದೇ ಈಡೇರಿಸುತ್ತಾ ಬಂದಿದೆ. ಆಂಧ್ರದಲ್ಲಿ ಪಕ್ಷ ಅಧಿಕಾರಕ್ಕೆ ಬಂದ 24 ತಾಸುಗಳಲ್ಲಿ 25 ಲಕ್ಷ ರೈತರಿಗೆ ಉಚಿತ ವಿದ್ಯುತ್ ನೀಡಿರುವುದೇ ಇದಕ್ಕೆ ಉತ್ತಮ ಉದಾಹರಣೆ ಎಂದ ಅವರು, ಈ ನಿಟ್ಟಿನಲ್ಲಿ ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸುವ ಮೂಲಕ ಜನತೆ ಹಳೆಯ ವೈಭವಗಳನ್ನು ಮರುಕಳಿಸುತ್ತಾರೆಂದು ಆಶಾಭಾವನೆ ವ್ಯಕ್ತಪಡಿಸಿದರು.
ಮತ್ತಷ್ಟು
ಚು, ನೀತಿ: ಕಟ್ಟುನಿಟ್ಟಿನ ಜಾರಿಗೆ ಮೆರಾಜುದ್ದೀನ್ ಆಗ್ರಹ
ಬಿಜೆಪಿಯಿಂದ ಮೂವರ ಅಮಾನತು
ರಾಷ್ಟ್ರೀಯ ಹಿಂದೂಸ್ತಾನ್ ಸೇನಾ ಪ್ರಣಾಳಿಕೆ ಬಿಡುಗಡೆ
ನಕ್ಸಲ್ ಪೀಡಿತ ಪ್ರದೇಶಕ್ಕೆ ನೆರವು: ವಿಶ್ವೇಶ ಶ್ರೀಗಳು
ಗೌಡರದು ಈಗ ಬಹುಮತ ರಾಗ
ಸಾರಾಯಿ ಜಾರಿ: ಖರ್ಗೆ ಅಸಮಾಧಾನ