ಲಾಕರ್‌ನಲ್ಲಿಟ್ಟಿದ್ದ ಸುಮಾರು 30 ಲಕ್ಷ ಮೌಲ್ಯದ ಒಡವೆಯನ್ನು ಮನೆಗೆ ತೆಗೆದುಕೊಂಡು ಹೋಗುತ್ತಿದ್ದಾಗ ಮಹಿಳೆಯೋರ್ವಳನ್ನು ಇಬ್ಬರು ದುಷ್ಕರ್ಮಿಗಳು ವಂಚಿಸಿ ಅಪಹರಿಸಿಕೊಂಡು ಹೋಗಿದ್ದಾರೆ.
ಸರ್ಜಾಪುರ ರಸ್ತೆಯ ಬೆಳ್ಳಂದೂರು ಕೆರೆ ಸಮೀಪ ಇಂದು(ಬುಧವಾರ) ಹಾಡುಹಗಲೇ ಈ ವಂಚನೆ ಪ್ರಕರಣ ನಡೆದಿದೆ. ಇಂದು ಅಕ್ಷಯ ತೃತೀಯ ದಿನವಾಗಿದ್ದರಿಂದ ವಿಶೇಷ ಪೂಜೆ ಸಲ್ಲಿಸುವ ಸಲುವಾಗಿ ಎಚ್.ಡಿ.ಎಫ್.ಸಿ ಬ್ಯಾಂಕ್‌ನಲ್ಲಿಟ್ಟಿದ್ದ ಒಡವೆಯನ್ನು ಮನೆಗೆ ತೆಗೆದುಕೊಂಡು ಹೋಗುತ್ತಿದ್ದಾಗ ಈ ಘಟನೆ ಸಂಭವಿಸಿದೆ.
ಒಡೆವೆಯನ್ನು ಕಾರಿನಲ್ಲಿ ತೆಗೆದುಕೊಂಡು ಹೋಗುತ್ತಿದ್ದಾಗ ಮಾರ್ಗದ ಮಧ್ಯೆದಲ್ಲಿ ಇಬ್ಬರು ದುಷ್ಕರ್ಮಿಗಳು ಅವರನ್ನು ತಡೆದು ಪೆಟ್ರೋಲ್ ಟ್ಯಾಂಕ ಸೋರುತ್ತಿದೆ ನೋಡಿಕೊಳ್ಳಿರಿ ಎಂದು ತಿಳಿಸಿದರು. ಅದರೆ ಅದಕ್ಕೆ ಜಗ್ಗದ ಶೃತಿ ಆಯಿತು ಎಂದು ಹೇಳಿ ವೇಗವಾಗಿ ಮುಂದೆ ಸಾಗಿದರು.
ಆದರೆ ಶೃತಿ ಅವರನ್ನು ಬೆನ್ನು ಬಿಡದ ದುಷ್ಕರ್ಮಿಗಳು ಮತ್ತೆ ತಿಳಿಸಿದಾಗ, ಮಾತಿಗೆ ಮರುಳಾದ ಶೃತಿ ಅವರು, ಕಾರಿನಿಂದಿಳಿದು ನೋಡಿದರು. ಆ ಸಮಯಕ್ಕಾಗಿ ಕಾಯುತ್ತಿದ್ದ ದುಷ್ಕರ್ಮಿಗಳು ಒಡವೆ ತೆಗೆದುಕೊಂಡು ಪರಾರಿಯಾಗಿದ್ದಾರೆ. ಪ್ರಕರಣವನ್ನು ಪೊಲೀಸರು ದಾಖಲಿಸಿಕೊಂಡಿದ್ದು, ತನಿಖೆ ಮುಂದುವರೆಸಿದ್ದಾರೆ.
|