ಗ್ಲಾಸ್ಗೋ ವಿಮಾನ ನಿಲ್ದಾಣದ ಸ್ಫೋಟದ ಮಾಹಿತಿಯನ್ನು ಬಚ್ಚಿಟ್ಟ ಕಾರಣ ಇಂಗ್ಲೆಂಡಿನಲ್ಲಿ ಹದಿನೆಂಟು ತಿಂಗಳುಗಳ ಕಾಲ ಜೈಲು ಶಿಕ್ಷೆಗೆ ಗುರಿಯಾಗಿದ್ದ ಕಫೀಲ್ ಅಹ್ಮದ್ ಸಹೋದರ ಡಾ. ಸಬೀಲ್ ಅಹ್ಮದ್ ಗುರುವಾರ ನಸುಕಿನ ಜಾವ ಬೆಂಗಳೂರಿಗೆ ಬಂದಿದ್ದಿಳಿದ್ದಾನೆ.
ಲಂಡನ್ ಮೆಟ್ರೊಪಾಲಿಟಿನ್ ಪೊಲೀಸರಿಬ್ಬರ ಬೆಂಗಾವಲಿನಲ್ಲಿ ಬ್ರಿಟಿಷ್ ಏರ್‌ವೇಸ್ ಮೂಲಕ ಬೆಂಗಳೂರಿಗೆ ಗುರುವಾರ ನಸುಕಿನ ಜಾವ ಆಗಮಿಸಿದ ಸಬೀಲ್ ಅಹ್ಮದ್, ನಿಲ್ದಾಣದ ಹೊರಗೆ ಕಾಯುತ್ತಿದ್ದ ಮಾಧ್ಯಮ ಪ್ರತಿನಿಧಿಗಳ ಕಣ್ಣುತಪ್ಪಿಸಿ ವಿಮಾನ ನಿಲ್ದಾಣದ ಹಿಂಬಾಗಿಲಿನಿಂದ ಬನಶಂಕರಿಯಲ್ಲಿ ಇರುವ ತನ್ನ ಮನೆಗೆ ತೆರಳಿದನು. ಬನಶಂಕರಿ ಪ್ರದೇಶದಲ್ಲಿ ಇರುವ ಮನೆಯ ಬಳಿ ಕಾಯುತ್ತಿದ್ದ ಕೆಲ ಪತ್ರಿಕಾ ವರದಿಗಾರರೊಂದಿಗೆ ಸಂವಾದ ನಡೆಸುವುದಕ್ಕೆ ನಿರಾಕರಿಸಿದನು ಎಂದು ವರದಿಯಾಗಿದೆ.
ಈ ಕುರಿತು ಮಾಧ್ಯಮ ಪ್ರತಿನಿಧಿಗಳೊಂದಿಗೆ ಸಬೀಲ್ ತಾಯಿ ಡಾ ಜಕಿಯಾ ಅಹ್ಮದ್ ಅವರು ಪತ್ರಿಕಾ ಅವರು ಮಾಧ್ಯಮದೊಂದಿಗೆ ಸಂವಾದ ನಡೆಸುವುದಕ್ಕೆ ನಾನು ಸಬೀಲ್‌ಗೆ ಮನವರಿಕೆ ಮಾಡಿಕೊಡುತ್ತೇನೆ. ಸಬೀಲ್ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡುವುದಕ್ಕೆ ಎರಡು ದಿನಗಳ ಅವಕಾಶ ಬೇಕು ಎಂದು ಹೇಳಿದರು.
ಗ್ಲಾಸ್ಗೊ ವಿಮಾನ ನಿಲ್ದಾಣಕ್ಕೆ ಸ್ಪೋಟಕ ತುಂಬಿಕೊಂಡು ಹೊತ್ತಿ ಉರಿಯುವ ಜೀಪನ್ನು ಓಡಿಸಿದ್ದ ಕಫೀಲ್ ಅಹ್ಮದ್ ಅವನ ಸಹೋದರನಾದ ಸಬೀಲ್‌ನಿಗೆ ಬಾಂಬ್ ಸ್ಫೋಟದ ಸಂಚಿನ ಮಾಹಿತಿ ಸಂಪೂರ್ಣ ಮಾಹಿತಿ ಈ-ಮೇಲ್ ಮೂಲಕ ತಿಳಿದಿದ್ದರೂ ಮಾಹಿತಿಯನ್ನು ಬಚ್ಚಿಟ್ಟ ಆರೋಪದಲ್ಲಿ ಲಂಡನ್ ನ್ಯಾಯಾಲಯ ತಪ್ಪಿತಸ್ಥ ಎಂದು ತೀರ್ಪು ನೀಡಿತ್ತು. ಈಗಾಗಲೇ 18 ತಿಂಗಳುಗಳನ್ನು ಜೈಲಿನಲ್ಲಿ ಕಳೆದಿರುವುದರಿಂದ ಆತ ಶಿಕ್ಷೆ ಅನುಭವಿಸಿದ್ದು, ಆದ್ದರಿಂದ ಭಾರತಕ್ಕೆ ಗಡಿಪಾರು ಮಾಡಬೇಕು ಎಂದು ತೀರ್ಪಿನಲ್ಲಿ ನ್ಯಾಯಾಲಯ ಸೂಚಿಸಿತ್ತು.
|