ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಬಿಜೆಪಿ/ಜೆಡಿಎಸ್ ಲಾಲಸೆಗೆ ರಾಜ್ಯ ಬಲಿ: ದೇಶ್‌ಮುಖ್
ಅಧಿಕಾರದ ಲಾಲಸೆಯಿಂದ ಅಭಿವೃದ್ದಿಯನ್ನು ಕಡೆಗೆಣಿಸಿರುವ ಜೆಡಿಎಸ್ ಮತ್ತು ಬಿಜೆಪಿಯನ್ನು ಬಿಟ್ಟು ಕಾಂಗ್ರೆಸ್ಗೆ ಮತ ಹಾಕಬೇಕೆಂದು ಮಹಾರಾಷ್ಟ್ತ್ರ ಮುಖ್ಯಮಂತ್ರಿ ವಿಲಾಸರಾವ್ ದೇಶಮುಖ್ ಮತದಾರರಲ್ಲಿ ಮನವಿ ಮಾಡಿದ್ದಾರೆ.

ನಗರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರ ಮಾಡಿದ ಅವರು, ದೇವೇಗೌಡರು ತಮ್ಮ ಮಗನನ್ನು ಮುಖ್ಯಮಂತ್ರಿ ಮಾಡುವ ದೃಷ್ಟಿಯಿಂದ ಕಾಂಗ್ರೆಸ್ ಬಿಟ್ಟು ಬಿಜೆಪಿ ಜತೆ ಕೈ ಜೋಡಿಸಿದರು. ಇದರಿಂದ ರಾಜ್ಯದ ಅಭಿವೃದ್ದಿ ಕುಂಠಿತವಾಯಿತು. ಇಂತವರಿಗೆ ಅಧಿಕಾರ ಸಿಗದಂತೆ ನೋಡಿಕೊಳ್ಳುವುದು ಜನತೆಯ ಕೈಯಲ್ಲಿದೆ. ಈ ನಿಟ್ಟಿನಲ್ಲಿ ಅಭಿವೃದ್ದಿಯೇ ಮೂಲಮಂತ್ರವನ್ನಾಗಿಸಿರುವ ಕಾಂಗ್ರೆಸ್ ಪಕ್ಷಕ್ಕೆ ಮತ ಹಾಕಬೇಕೆಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ಕಾಂಗ್ರೆಸ್ ಪ್ರಣಾಳಿಕೆಯ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದ ಅವರು, ಪ್ರಣಾಳಿಕೆಯಲ್ಲಿ ಹೇಳಿರುವ ಅಂಶಗಳಿಗೆ ಕಾಂಗ್ರೆಸ್ ಬದ್ದವಾಗಿದೆ ಎಂದು ತಿಳಿಸಿದರು.

ಅಭ್ಯರ್ಥಿಯೇ ನಾಪತ್ತೆ!
ಕಾಂಗ್ರೆಸ್ ಅಭ್ಯರ್ಥಿ ಎನ್.ಎ. ಹ್ಯಾರಿಸ್ ಪರ ಪ್ರಚಾರ ಮಾಡಲು ಮಾಹಾರಾಷ್ಟ್ತ್ರ ಮುಖ್ಯಮಂತ್ರಿ ವಿಲಾಸರಾವ್ ದೇಶ್‌ಮುಖ್ ರಾಜ್ಯಕ್ಕೆ ಆಗಮಿಸಿದ್ದರು. ಆದರೆ ಪ್ರಚಾರ ಸಂದರ್ಭದಲ್ಲಿ ಅಭ್ಯರ್ಥಿಯೇ ನಾಪತ್ತೆಯಾಗಿದ್ದರು. ಆದರೂ, ಜನತೆಯಲ್ಲಿ ಪಕ್ಷಕ್ಕೆ ಮತ ನೀಡುವಂತೆ ಮನವಿ ಮಾಡಿದ : ದೇಶ್‌ಮುಖ್ ಅತ್ತ ಹೋಗುತ್ತಿದ್ದಂತೆ ಇತ್ತ ಕಡೆಯಿಂದ ಬಂದ ಹ್ಯಾರಿಸ್ ಅಲ್ಲಿದ್ದವರನ್ನುದ್ದೇಶಿಸಿ ಒಂದೆರಡು ಮಾತನಾಡಿದರು. ಕೊನೆಗೆ ತಡವಾಗಿ ಬರಲು ಟ್ರಾಫಿಕ್ ಜಾಮ್ ಎಂದು ಕಾರಣ ನೀಡಿದರು.
ಮತ್ತಷ್ಟು
ಭಾರತಕ್ಕೆ ಬಂದ ಸಬೀಲ್ ಅಹ್ಮದ್
ರಾಜಧಾನಿಯಲ್ಲಿ 30 ಲಕ್ಷ ಮೌಲ್ಯದ ದರೋಡೆ
ಪುತ್ತೂರು ಬಂಡಾಯ ಪಕ್ಷಕ್ಕೆ ಕಪ್ಪು ಚುಕ್ಕೆ: ಡಿ.ವಿ
ಮುಸ್ಲಿಂ ಅಭ್ಯರ್ಥಿಗೆ ಸಚಿವ ಸಂಪುಟ ಸ್ಥಾನ: ಬಿಎಸ್‌ವೈ
ಬಿಜೆಪಿ ವಿರುದ್ಧ ಕ್ರಮಕ್ಕೆ ವಯಲಾರ್ ಒತ್ತಾಯ
ಮಹಿಳಾ ಮೀಸಲಾತಿಗೆ ಕಾಂಗ್ರೆಸ್ ಬದ್ಧ: ಸೋನಿಯಾ