ಸಿದ್ಧರಾಮಯ್ಯ ವಿಶ್ವಾಸದ್ರೋಹಿ, ದುರಹಂಕಾರಿ. ಅವರಿಗೆ ತಕ್ಕ ಪಾಠ ಕಲಿಸಿ. ಹೀಗೆಂದು ವರುಣಾದ ಜನತೆಯಲ್ಲಿ ಹೇಳಿದವರು ಜೆಡಿಎಸ್‌ನ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ. ದೇವೇಗೌಡ. ವರುಣಾ ವಿಧಾನಸಭಾ ಕ್ಷೇತ್ರದಲದ್ಲಿ ಬಹಿರಂಗಸಭೆಯನ್ನುದ್ದೇಶಿಸಿ ಮಾತನಾಡಿದ ಅವರು ತಮ್ಮ ಭಾಷಣದುದ್ದಕ್ಕೂ ಸಿದ್ಧರಾಮಯ್ಯನವರನ್ನು ಟೀಕಿಸುತ್ತಲೇ ಹೋದರು.
ಸಿದ್ದರಾಮಯ್ಯ ಹಾಸನದಲ್ಲಿ ಅಪ್ಪ-ಮಕ್ಕಳನ್ನು ರಾಜಕೀಯದಿಂದ ಓಡಿಸಬೇಕು. ಅಹಿಂದ ಹೆಸರಿನಲ್ಲಿ ಭಾವಚಿತ್ರಕ್ಕೆ ಚಪ್ಪಲಿ ಹಾರ ಹಾಕಿದ ದುರಹಂಕಾರಿ ಸಿದ್ಧರಾಮಯ್ಯ. ಇಂತಹ ಅಹಂಕಾರಿಗೆ ಇಲ್ಲಿನ ಜನತೆಯೇ ಸರಿಯಾದ ಪಾಠ ಕಲಿಸಬೇಕು ಎಂದು ದೇವೇಗೌಡರು ಮತದಾರರನ್ನು ಕೇಳಿಕೊಂಡರು.
ಈ ಹಿಂದೆ ಸಿದ್ಧರಾಮಯ್ಯ ನನ್ನ ವಿರುದ್ಧ ಮಾಡಿದ ಎಲ್ಲ ಅಪಮಾನಗಳನ್ನು ಸಹಿಸಿದ್ದೇನೆ. ಆದರೆ ನನ್ನನ್ನು ಓಡಿಸುವಂತೆ ಸಿದ್ಧರಾಮಯ್ಯ ಹೇಳಿದ್ದಾರೆ. ಇದು ನನ್ನ ಮನಸ್ಸಿಗೆ ತುಂಬಾ ನೋವಾಗಿದೆ. ಸಿದ್ಧರಾಮಯ್ಯ ನಯ-ವಿನಯವಿಲ್ಲದ ವ್ಯಕ್ತಿ ಎಂದು ದೂರಿದರು.
ಈ ಬಾರಿ ಜೆಡಿಎಸ್‌ನ್ನು ಬಹುಮತದೊಂದಿಗೆ ಗೆಲ್ಲಿಸಿದ್ದಲ್ಲಿ ರಾಜ್ಯವನ್ನು ಮಾದರಿ ರಾಜ್ಯವನ್ನಾಗಿ ಮಾಡುತ್ತೇನೆ ಎಂದು ಹೇಳಿದರು.
|