ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಮೊದಲ ಹಂತದ ಚುನಾವಣೆ :10 ಲಕ್ಷ ರೂ. ವಿಸ್ಕಿ ವಶ
ಶನಿವಾರ ನಡೆಯಲಿರುವ ಮೊದಲ ಹಂತದ ಚುನಾವಣೆ ಹಿನ್ನೆಲೆಯಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಂಡಿರುವ ಚುನಾವಣಾ ಆಯೋಗವು ಎಲ್ಲ ಕಡೆಗಳಲ್ಲಿ ಹದ್ದಿನ ಕಣ್ಣಿಟ್ಟಿದೆ. ಇಂದು (ಗುರುವಾರ) ನಗರ ಪೊಲೀಸರು ನಡೆಸಿದ ಕಾರ್ಯಾಚರಣೆಯೊಂದರಲ್ಲಿ ಸುಮಾರು 10ಲಕ್ಷ ರೂ. ಮೌಲ್ಯದ ಪ್ರಿಮಿಯಂ ವಿಸ್ಕಿಯನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

ಖಚಿತ ಮಾಹಿತಿ ಮೇರೆಗೆ ಜ್ಞಾನ ಭಾರತಿ ಠಾಣೆಯ ಪೊಲೀಸರು ಕೆರೆಗುಂಟೆ ಪ್ರದೇಶದಲ್ಲಿ ಹೊಂಬಣ್ಣ ಅವರಿಗೆ ಸೇರಿದ ಶೆಡ್ ಮೇಲೆ ದಾಳಿ ನಡೆಸಿದರು. ಶೆಡ್‌ನಲ್ಲಿ ಸುಮಾರು 750 ಬಾಕ್ಸ್‌ಗಳಲ್ಲಿ ವಿಸ್ಕಿ ಪತ್ತೆಯಾಯಿತು ಎಂದು ತಿಳಿದು ಬಂದಿದೆ. ಮದ್ಯ ಸಾಗಾಣಿಕೆಗೆ ಬಳಕೆ ಮಾಡಲಾದ ಟಾಟಾ ಸುಮೊ ವಾಹನವನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.

ಇದನ್ನು ಚುನಾವಣೆಯಲ್ಲಿ ಮತದಾರರಿಗೆ ನೀಡಲು ತರಲಾಗಿತ್ತು ಎಂದು ತಿಳಿದು ಬಂದಿದ್ದು, ಪೊಲೀಸರು ತೀವ್ರ ತನಿಖೆ ಮುಂದುವರೆಸಿದ್ದಾರೆ.

ಈ ಮಧ್ಯೆ ಹೆಬ್ಬಾಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸುಮಾರು 5.5ಲಕ್ಷರೂ. ಮೌಲ್ಯದ ಮದ್ಯವನ್ನು ಹೆಬ್ಬಾಳದ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಸುಮಾರು 390 ಬಾಕ್ಸ್‌ಗಳಲ್ಲಿ ಮದ್ಯವನ್ನು ತುಂಬಿಡಲಾಗಿತ್ತು ಎಂದು ತಿಳಿದು ಬಂದಿದೆ.
ಮತ್ತಷ್ಟು
ಬಿಜೆಪಿ/ಕಾಂಗ್ರೆಸ್‌ನಿಂದ ಸಿಟುಗಳು ಮಾರಾಟ: ನಂಜೇಗೌಡ
ಕಾಂಗ್ರೆಸ್‌ನಿಂದ ಮಾತ್ರ ಸ್ಥಿರ ಸರಕಾರ: ಮನ್‌ಮೋಹನ್
ಸಾಯಂಕಾಲ ಚುನಾವಣಾ ಪ್ರಚಾರದ ಅಂತ್ಯ
ಬಿಜೆಪಿ-ಜೆಡಿಎಸ್ ಕಿತ್ತಾಟಕ್ಕೆ ರಾಜ್ಯ ಬಲಿ: ನಬಿ
ದುರಹಂಕಾರಿ ಸಿದ್ಧರಾಮಯ್ಯ: ದೇವೇಗೌಡ
ಬಿಜೆಪಿ/ಜೆಡಿಎಸ್ ಲಾಲಸೆಗೆ ರಾಜ್ಯ ಬಲಿ: ದೇಶ್‌ಮುಖ್