ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಶಿಕಾರಿಪುರ: ಅಪ್ಪನ ಪರ ಪ್ರಚಾರಕ್ಕೆ ಮಗ ಸಿದ್ಧ
ತೀವ್ರ ಕುತೂಹಲ ಕೆರಳಿಸಿರುವ ಶಿಕಾರಿಪುರ ವಿಧಾನಸಭಾ ಕ್ಷೇತ್ರದಲ್ಲಿ ಕಣಕ್ಕಿಳಿದಿರುವ ಮಾಜಿ ಮುಖ್ಯಮಂತ್ರಿ ಎಸ್. ಬಂಗಾರಪ್ಪನವರ ಬದ್ದ ರಾಜಕೀಯ ವೈರಿಯಾಗಿರುವ ಅವರ ಮಗ ಮಾಜಿ ಸಚಿವ ಕುಮಾರ್ ಬಂಗಾರಪ್ಪ, ಅಪ್ಪನ ಪರ ಪ್ರಚಾರ ಮಾಡಲು ಸಿದ್ದರಿರುವುದಾಗಿ ಘೋಷಿಸಿದ್ದಾರೆ.

ನಗರದಲ್ಲಿ ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಹೈಕಮಾಂಡ್ ಬಯಸಿದರೆ ಸಮಾಜವಾದಿ ಪಕ್ಷದ ಪರ ಶಿಕಾರಿಪುರದಲ್ಲಿ ಚುನಾವಣಾ ಪ್ರಚಾರ ಮಾಡಲು ತಾವು ಸಿದ್ದರಿರುವುದಾಗಿ ತಿಳಿಸಿದ್ದಾರೆ.

ಶಿಕಾರಿಪುರ ಕ್ಷೇತ್ರದಲ್ಲಿ ಬಿಜೆಪಿಯನ್ನು ಮಣಿಸುವ ಕುರಿತು ಕಾಂಗ್ರೆಸ್ ಕೈಗೊಂಡಿರುವ ನಿಲುವು ಸ್ವಾಗತಾರ್ಹವಾಗಿದೆ. ಹೈಕಮಾಂಡ್ ಒಪ್ಪಿದರೆ ಎಸ್ಪಿ ಪರ ಪ್ರಚಾರ ನಡೆಸುವುದಾಗಿ ಅವರು ತಿಳಿಸಿದ್ದಾರೆ.

ಇದೇ ಸಂದರ್ಭದಲ್ಲಿ ಸೊರಬ ಕ್ಷೇತ್ರದಲ್ಲಿ ಎಸ್ಪಿ ಜೊತೆ ಮೈತ್ರಿ ಮಾಡಲಿದ್ದಾರೆಯೇ ಎಂಬ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಅವರು, ಕಾಂಗ್ರೆಸ್ ಯಾವುದೇ ಕಾರಣಕ್ಕೂ ಎಸ್ಪಿ ಜೊತೆ ಸೊರಬದಲ್ಲಿ ಮೈತ್ರಿ ಮಾಡಿಕೊಳ್ಳುವುದಿಲ್ಲ ಎಂದು ಸ್ಪಷ್ಟ ಪಡಿಸಿದರು.
ಮತ್ತಷ್ಟು
ನೀತಿ ಸಂಹಿತೆ ಉಲ್ಲಂಘನೆ: ಸುರೇಶಗೌಡ ಬಂಧನ
ಮೊದಲ ಹಂತದ ಚುನಾವಣೆ :10 ಲಕ್ಷ ರೂ. ವಿಸ್ಕಿ ವಶ
ಬಿಜೆಪಿ/ಕಾಂಗ್ರೆಸ್‌ನಿಂದ ಸಿಟುಗಳು ಮಾರಾಟ: ನಂಜೇಗೌಡ
ಕಾಂಗ್ರೆಸ್‌ನಿಂದ ಮಾತ್ರ ಸ್ಥಿರ ಸರಕಾರ: ಮನ್‌ಮೋಹನ್
ಪ್ರಥಮ ಹಂತ: ಅಬ್ಬರದ ಪ್ರಚಾರ ಅಂತ್ಯ
ಬಿಜೆಪಿ-ಜೆಡಿಎಸ್ ಕಿತ್ತಾಟಕ್ಕೆ ರಾಜ್ಯ ಬಲಿ: ನಬಿ