ಬಿಜೆಪಿ ಪರ ಮತ ಹಾಕುವಂತೆ ಮತದಾರರಿಗೆ ವಿತರಿಸಿ ಆಮೀಷ ಒಡ್ಡಲು ಸಂಗ್ರಹಿಸಲಾಗದ್ದ ಸುಮಾರು 110 ಮೂಟೆ ಅಕ್ಕಿಯನ್ನು ಹುಳಿಮಾವು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಖಚಿತ ಆಧಾರದ ಮೇಲೆ ಇಂದು (ಶುಕ್ರವಾರ) ಹುಳಿಮಾವು ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿರುವ ಚಂದ್ರು ಅವರ ಗೋದಾಮಿಗೆ ಧಾಳಿ ನಡೆಸಿದ ಪೊಲೀಸರು, 110 ಮೂಟೆಯಲ್ಲಿ ಮತದಾರರಿಗೆ ಹಂಚಲು ತುಂಬಿಡಲಾಗಿದ್ದ ಅಕ್ಕಿಯನ್ನು ವಶಪಡಿಸಿಕೊಂಡಿದ್ದಾರೆ.
ಬಿಜೆಪಿಗೆ ಓಟು ಹಾಕುವಂತೆ ಆಮಿಷವೊಡ್ಡಿ ಮತದಾರರಿಗೆ ವಿತರಿಸಲು 25 ಕೆಜಿ ತೂಕವಿರುವ ಸುಮಾರು 65 ಸಾವಿರ ರೂ. ಮೌಲ್ಯದ 110 ಅಕ್ಕಿ ಮೂಟೆಗಳನ್ನು ಗೋದಾಮಿನಲ್ಲಿ ಇಡಲಾಗಿತ್ತು ಎಂದು ತಿಳಿದು ಬಂದಿದೆ.
ಈ ಹಿನ್ನೆಲೆಯಲ್ಲಿ ಚಂದ್ರು ಅವರನ್ನು ಪೊಲೀಸರು ಬಂಧಿಸಿದ್ದು, ಅವರ ವಿರುದ್ಧ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಆರೋಪದ ಹಿನ್ನೆಲೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
|