ಮತದಾರರು ನಿರ್ಭೀತಿಯಿಂದ ಮತಗಟ್ಟೆಗೆ ತೆರಳಿ ಮತ ಚಲಾಯಿಸುವಂತೆ ನಗರ ಪೊಲೀಸ್ ಆಯುಕ್ತ ನೀಲಂ ಅಚ್ಯುತ್ ರಾವ್ ಮತದಾರರಲ್ಲಿ ಮನವಿ ಮಾಡಿದ್ದಾರೆ.
ಶನಿವಾರದಂದು ಮೊದಲ ಹಂತದ ಚುನಾವಣೆಯಲ್ಲಿ ಮತದಾನದ ಕುರಿತು ಜಾಗೃತಿ ಮೂಡಿಸುವ ಹಿನ್ನೆಲೆಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮತದಾನ ಮಾಡುವುದು ಪ್ರತಿಯೊಬ್ಬ ಮತದಾರರ ಹಕ್ಕು ಮತ್ತು ಕರ್ತವ್ಯ. ಆದ್ದರಿಂದ ಅದನ್ನು ಸರಿಯಾಗಿ ಬಳಸಿಕೊಳ್ಳಬೇಕೆಂದು ಮತದಾರರಲ್ಲಿ ವಿನಂತಿಸಿದರು.
ಮತದಾನದ ಸಂದರ್ಭದಲ್ಲಿ ಯಾರಾದರೂ ಅಡ್ಡಿ ಪಡಿಸಿದರೆ ಆ ಬಗ್ಗೆ ಪೊಲೀಸರಿಗೆ ದೂರು ನೀಡಬೇಕೆಂದು ತಿಳಿಸಿದ ಅವರು, ಒಂದು ಮತಗಟ್ಟೆಗಿಂತ ಜಾಸ್ತಿ ಮತಗಟ್ಟೆಗಳಿದ್ದ ಸ್ಥಳಗಳಲ್ಲಿ ಹೆಚ್ಚು ಕಂಪೆನಿ ಅರಸೇನಾಪಡೆ ನಿಯೋಜಿಸಲಾಗುತ್ತದೆ ಎಂದರು.
ಮತದಾರರು ಸರದಿಯಲ್ಲಿ ನಿಂತು ತಾಳ್ಮೆಯಿಂದ ಮತ ಚಲಾಯಿಸಬೇಕು. ನೂಕುನುಗ್ಗಲಿಗೆ ಅವಕಾಶವಿಲ್ಲ. ನಕಲಿ ಮತದಾನ ಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ. ಚುನಾವಣಾ ಆಯೋಗ ತಿಳಿಸಿರುವ ಗುರುತಿನ ಚೀಟಿಯೊಂದಿಗೆ ಮತಗಟ್ಟೆಗಳಿಗೆ ಬರಬೇಕೆಂದು ಮತದಾರರಿಗೆ ಸೂಚನೆ ನೀಡಿದರು.
|