ಮತದಾರರನ್ನು ಓಲೈಸಿಕೊಳ್ಳಲು ಅಭ್ಯರ್ಥಿಗಳು ಮದ್ಯ, ಸೀರೆಗಳನ್ನು ಹಂಚಿ ಸಿಕ್ಕಿಬೀಳುತ್ತಿರುವ ಘಟನೆ ದಿನಾಲೂ ನಡೆಯುತ್ತಿದೆ. ಆದರೆ ಮೊದಲ ಬಾರಿಗೆ ನಕಲಿ ಮೂಗುತಿಯನ್ನು ಹಂಚಿದ್ದು, ಮತದಾರರು ಅದನ್ನು ಎಸೆದಿದ್ದಾರೆ.
ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದ ಹರಿಜನ ಕಾಲೋನಿಯಲ್ಲಿ ರಾಜಕೀಯ ಪಕ್ಷವೊಂದರ ಕಾರ್ಯಕರ್ತರು ಗುರುವಾರ ತಡರಾತ್ರಿ ಮತದಾರರನ್ನು ಮತಹಾಕುವಂತೆ ಪುಸಲಾಯಿಸಿ ಅವರಿಗೆ ನಕಲಿ ಮೂಗುತಿ ಬೊಟ್ಟನ್ನು ನೀಡಿದರು. ಸುಮಾರು 600 ಮನೆಗಳಿರುವ ಈ ಕಾಲೋನಿಯಲ್ಲಿ ರಾಜಕೀಯ ಪಕ್ಷದ ಕಾರ್ಯಕರ್ತರು ಮೂಗುತಿ ಹಂಚಿದ್ದಾರೆ.
ಆದರೆ ಇದು 20 ರೂ. ಬೆಲೆಯ ನಕಲಿ ಮೂಗುತಿಯಾಗಿತ್ತು. ಜನರನ್ನು ಓಲೈಸಲು ಈಗಲೇ ಪೊಳ್ಳು ಭರವಸೆ ನೀಡುತ್ತಿದ್ದಾರೆ. ಮೂಗುತಿ ಬೊಟ್ಟು ನೀಡಿದ ಲಿಮಹಾನ್ ನಾಯಕರುಳಿ ಮಾತ್ರ ಪರಾರಿಯಾಗಿದ್ದಾರೆ.
ಚುನಾವನಾ ಆಯೋಗ ಮುಕ್ತ ಹಾಗೂ ನ್ಯಾಯಸಮ್ಮತ ಚುನಾವಣೆ ನಡೆಸಬೇಕೆಂದು ಪ್ರಯತ್ನಿಸಿದರೂ ಅದನ್ನು ಪರಿಣಾಮ ಕಾರಿಯಾಗಿ ಜಾರಿಗೊಳಿಸುವಲ್ಲಿ ನಮ್ಮ ರಾಜಕೀಯ ಪಕ್ಷಗಳು ಬಿಡುತ್ತಿಲ್ಲ.
|