ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಶೆ 12 ರಷ್ಟು ಮತದಾನ, ಮತಯಂತ್ರಗಳ ಸಮಸ್ಯೆ
ರಾಜ್ಯದಲ್ಲಿ ಮೊದಲ ಹಂತದ ಚುನಾವಣೆ ಆರಂಭವಾಗಿದ್ದು, 89 ಕ್ಷೇತ್ರಗಳಿಗೆ ಮತದಾನ ಪ್ರಕ್ರಿಯೆ ಆರಂಭವಾಗಿದೆ. ಈವರೆಗೆ ಶೆ.12 ರಷ್ಟು ಮತದಾನವಾದ ಬಗ್ಗೆ ವರದಿಯಾಗಿದೆ.

ಮತದಾರರು ತಮ್ಮ ಹಕ್ಕನ್ನು ಚಲಾಯಿಸಲು ಚುನಾವಣಾ ಆಯೋಗ ಗುರುತಿನ ಚೀಟಿಯ ಹೊರತಾಗಿಯೂ ಪಡಿತರ ಚೀಟಿ ಸೇರಿದಂತೆ ಇತರ ಸುಮಾರು 20 ಬಗೆಯ ಗುರುತಿನ ಚೀಟಿಗಳನ್ನು ಬಳಸಿ ಮತಚಲಾಯಿಸಲು ಅವಕಾಶ ನೀಡಿದೆ. ಚುನಾವಣಾ ಆಯೋಗ ಮುಕ್ತ ಹಾಗೂ ನ್ಯಾಯಸಮ್ಮತ ಚುನಾವಣೆ ನಡೆಸಲು ಕಟ್ಟುನಿಟ್ಟಿನ ಕ್ರಮಕೈಗೊಳ್ಳಲು ಮುಂದಾಗಿದೆ.

ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಹಾಗೂ ರೇವಣ್ಣ ತಮ್ಮ ತಮ್ಮ ಮತಗಟ್ಟೆಗಳಲ್ಲಿ ಮತದಾನ ಮಾಡಿದ್ದಾರೆ. ಮಾಜಿ ಸಚಿವ ರೇವಣ್ಣ ಮತಯಂತ್ರವನ್ನು ಅವರ ವಾಸ್ತುವಿಗೆ ಅನುಗುಣವಾಗಿ ತಿರುಗಿಸಿ ಮತಹಾಕಿದ್ದಾರೆ. ಕೆಲವು ಮತಯಂತ್ರಗಳು ಕೈ ಕೊಟ್ಟಿದ್ದರಿಂದ ಕೆಲ ಸಮಯ ಮತದಾರರಲ್ಲಿ ಗೊಂದಲ ಉಂಟಾಗಿತ್ತು.

ಉಳಿದಂತೆ ಬೆಂಗಳೂರು ಸುತ್ತಮುತ್ತ ಮತದಾನ ಶಾಂತವಾಗಿ ನಡೆಯುತ್ತಿದೆ. ಮತದಾರರು ತಮ್ಮ ಹಕ್ಕನ್ನು ಚಲಾಯಿಸಲು ಉತ್ಸಾಹದಿಂದ ಮತಗಟ್ಟೆಗೆ ಬರುತ್ತಿದ್ದಾರೆ.
ಮತ್ತಷ್ಟು
ರಾಜರಾಜೇಶ್ವರಿ ಕ್ಷೇತ್ರದಲ್ಲಿ ನಕಲಿ ಮೂಗುತಿ ಆಮೀಷ
89 ಕ್ಷೇತ್ರಗಳಿಗೆ 953 ಅಭ್ಯರ್ಥಿಗಳು: ಮತದಾನ ಆರಂಭ
ನಿರ್ಭೀತಿಯಿಂದ ಮತ ಚಲಾಯಿಸಿ: ಅಚ್ಯುತರಾವ್
ಅಕ್ಕಿ ಹಂಚಲು ಸಿದ್ದವಾಗಿದ್ದ ಬಿಜೆಪಿ
ಶನಿವಾರ ಮೊದಲ ಹಂತದ ಚುನಾವಣೆ
ಕಾಂಗ್ರೆಸ್‌ಗೆ 65 ಸ್ಥಾನಗಳು ಖಚಿತ: ಖರ್ಗೆ