ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಬೆಂಗಳೂರು ರಾಮನಗರಗಳಲ್ಲಿ ಮರು ಮತದಾನ
ಗುರುತಿನ ಚೀಟಿಯಲ್ಲಿನ ಗೊಂದಲ ಹಾಗೂ ಮತಯಂತ್ರದ ತಾಂತ್ರಿಕ ದೋಷದಿಂದಾಗಿ ಬೆಂಗಳೂರು ನಗರದ ಮೂರು ಹಾಗೂ ರಾಮನಗರ ವಿಧಾನಸಭಾ ಕ್ಷೇತ್ರದ ಒಂದು ಮತಗಟ್ಟೆಯಲ್ಲಿ ಇಂದು(ಸೋಮವಾರ) ಮರು ಮತದಾನ ಪ್ರಾರಂಭಗೊಂಡಿದೆ.

ಮಲ್ಲೇಶ್ವರಂ ವಿಧಾನಸಭಾ ಕ್ಷೇತ್ರದ 6ಎ, ಶಿವಾಜಿನಗರದ 119ಎ, ಗಾಂಧಿನಗರದ 50 ಹಾಗೂ ರಾಮನಗರ ವಿಧಾನಸಭಾ ಕ್ಷೇತ್ರದ 46ರ ಮತಗಟ್ಟೆಗಳಲ್ಲಿ ಮರು ಮತದಾನ ನಡೆಯುತ್ತಿದೆ.

ಮಲ್ಲೇಶ್ವರಂನಲ್ಲಿ ಈಗಾಗಲೇ ಶೇ.25ರಷ್ಟು ಮತದಾನವಾಗಿರುವ ವರದಿ ಬಂದಿದ್ದು, ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಆದರೆ ಶಿವಾಜಿನಗರದಲ್ಲಿ ನಡೆಯುತ್ತಿರುವ ಮರು ಮತದಾನಕ್ಕೆ ನೀರಸ ಪ್ರತಿಕ್ರಿಯೆ ಕಂಡು ಬಂದಿದ್ದು, ಶನಿವಾರ ನಡೆದ ಮತದಾನದಲ್ಲಿ ಹಕ್ಕು ಚಲಾಯಿಸಿದ ಮತದಾರರಿಗೆ ಮರುಮತದಾನಕ್ಕೆ ಇಲ್ಲಿ ಅವಕಾಶ ಕಲ್ಪಿಸಿಲ್ಲ. ಇದರಿಂದಾಗಿ ಇದುವರೆಗೆ 70 ಮತದಾರರು ತಮ್ಮ ಹಕ್ಕನ್ನು ಚಲಾಯಿಸಿದ್ದಾರೆ ಎಂದು ತಿಳಿದು ಬಂದಿದೆ.

ಎಲ್ಲಾ ಕಡೆಗಳಲ್ಲಿ ಶಾಂತಿಯುತವಾಗಿ ಮತದಾನ ನಡೆಯುತ್ತಿದ್ದು, ಮರುಮತದಾನದ ವೇಳೆ ಯಾವುದೇ ಅಹಿತಕರ ಘಟನೆ ನಡೆಯದಂತೆ ಆಯೋಗ ಬಿಗಿ ಬಂದೋ ಬಸ್ತ್ ಏರ್ಪಡಿಸಿದೆ.
ಮತ್ತಷ್ಟು
ಸ್ಪೋಟ : ಲಷ್ಕರ್, ಸಿಮಿ ಕೈವಾಡದ ಶಂಕೆ
953 ಅಭ್ಯರ್ಥಿಗಳ ಭವಿಷ್ಯ ದಾಖಲು
ಮತದಾನದದ ಜೊತೆ ಅಕ್ರಮ, ಆಮಿಷಗಳ ಆರಂಭ
ಈ ಬಾರಿಯೂ ನಾನೇ ಮುಖ್ಯಮಂತ್ರಿ: ಕುಮಾರಸ್ವಾಮಿ
ಶೆ 12 ರಷ್ಟು ಮತದಾನ, ಮತಯಂತ್ರಗಳ ಸಮಸ್ಯೆ
ರಾಜರಾಜೇಶ್ವರಿ ಕ್ಷೇತ್ರದಲ್ಲಿ ನಕಲಿ ಮೂಗುತಿ ಆಮಿಷ