ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಮರುಮತದಾನದ ಮಾಹಿತಿ ಇಲ್ಲದ ಬೇಗ್
ನಾಲ್ಕು ಮತಗಟ್ಟೆಗಳಲ್ಲಿ ಸೋಮವಾರ ಮರುಮತದಾನದ ಕುರಿತು ಮಾಹಿತಿ ನೀಡದಿರುವ ಬಗ್ಗೆ ಶಿವಾಜಿನಗರದ ಕಾಂಗ್ರೆಸ್ ಅಭ್ಯರ್ಥಿ ರೋಷನ್ ಬೇಗ್ ಆಯೋಗವನ್ನು ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮರು ಮತದಾನ ನಡೆಸುವುದರಲ್ಲಿ ತಪ್ಪಿಲ್ಲ. ಆದರೆ ಈ ಬಗ್ಗೆ ಆಯೋಗವು ಅಭ್ಯರ್ಥಿಗಳಿಗೆ ಮಾಹಿತಿ ನೀಡಬೇಕಿತ್ತು. ತಮಗೆ ಈ ಮತಗಟ್ಟೆಯಲ್ಲಿ ಮರು ಮತದಾನ ನಡೆಸುತ್ತಾರೆಂಬುದು ತಿಳಿದಿದ್ದೆ ನಿನ್ನೆ ರಾತ್ರಿ ಎಂದು ತಿಳಿಸಿದರು.

ಈ ಮಧ್ಯೆ ಮತಗಟ್ಟೆಗಳಲ್ಲಿ ಗುರುತಿನ ಚೀಟಿ ಗೊಂದಲ ಇಂದು ಕೂಡ ಕಂಡು ಬಂದಿತ್ತು. ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರಿಲ್ಲದಿರುವ ಬಗ್ಗೆ ಅಸಮಾಧಾನಗೊಂಡ ಮತದಾರರು, ಆಯೋಗದ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಗಾಂಧಿನಗರದ 50ರ ಮತಗಟ್ಟೆಯಲ್ಲಿ ಒಟ್ಟು 550 ಮತದಾರರಿದ್ದು, ಮಧ್ಯಾಹ್ನದ ವೇಳೆಗೆ ಸುಮಾರು 250 ಮತದಾರರು ತಮ್ಮ ಹಕ್ಕನ್ನು ಚಲಾಯಿಸಿದ್ದಾರೆ. ಬೆಂಗಳೂರಿನ ಮೂರು ವಿಧಾನಸಭಾ ಕ್ಷೇತ್ರದಲ್ಲಿ ಈವರೆಗೆ ಶೇ.40ರಷ್ಟು ಮತದಾನವಾಗಿರುವ ವರದಿ ಬಂದಿದೆ. ರಾಮನಗರ ವಿಧಾನಸಭಾ ಕ್ಷೇತ್ರದ ಮತಗಟ್ಟೆ ಸಂಖ್ಯೆ 46ರಲ್ಲಿ ಇದುವರೆಗೆ ಶೇ.45ರಷ್ಟು ಮತದಾನವಾಗಿರುವ ವರದಿ ಬಂದಿದೆ.
ಮತ್ತಷ್ಟು
ಮರಳಿ ಕೈ ಹಿಡಿದ ದಿವಾಕರ ಬಾಬು
ಅಮೆರಿಕದ ಒತ್ತಡಕ್ಕ ಮಣಿದಿರುವ ಕೇಂದ್ರ: ಆಡ್ವಾಣಿ
ಭಯೋತ್ಪಾದನೆಗೆ ಕಾಂಗ್ರೆಸ್ ಕಾರಣ: ಡಿ.ವಿ
ಬೆಂಗಳೂರು ರಾಮನಗರಗಳಲ್ಲಿ ಮರು ಮತದಾನ
ಸ್ಪೋಟ : ಲಷ್ಕರ್, ಸಿಮಿ ಕೈವಾಡದ ಶಂಕೆ
953 ಅಭ್ಯರ್ಥಿಗಳ ಭವಿಷ್ಯ ದಾಖಲು