ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ನ್ಯಾಯಾಲಯದಲ್ಲಿ ಸ್ಪೋಟ:ರಾಜ್ಯಾದ್ಯಂತ ಕಟ್ಟೆಚ್ಚರ
ಕಳೆದ ಶನಿವಾರ ಹುಬ್ಬಳ್ಳಿಯ ಜೆಎಂಎಫ್‌ಸಿ ನ್ಯಾಯಾಲಯದಲ್ಲಿ ಸಂಭವಿಸಿದ ಪ್ರಬಲ ಬಾಂಬ್ ಸ್ಪೋಟದ ಸಂಚಿನಲ್ಲಿ ಲಷ್ಕರ್ ಅಥವಾ ಸಿಮಿ ಸಂಘಟನೆಯ ಕೈವಾಡದ ಶಂಕೆ ವ್ಯಕ್ತವಾಗುತ್ತಿದ್ದಂತೆ ಪೊಲೀಸರು ನಗರದಲ್ಲಿ ಬಿಗಿ ಬಂದೋ ಬಸ್ತ್ ಏರ್ಪಾಡು ಮಾಡಿದ್ದಾರೆ.

ಈ ಸಂಬಂಧ ಹೈಕೋರ್ಟ್ ಸುತ್ತ ಹೆಚ್ಚಿನ ಪೊಲೀಸರನ್ನು ನೇಮಿಸಲಾಗಿದ್ದು, ನ್ಯಾಯಾಲಯದ ಒಳಹೋಗುವವರನ್ನು ತೀವ್ರ ತಪಾಸನೆ ನಡೆಸಲಾಗುತ್ತಿದೆ. ಅಲ್ಲದೆ, ವಕೀಲರು ಹಾಗೂ ಸಿಬ್ಬಂದಿಗಳ ಗುರುತಿನ ಚೀಟಿ ನೋಡಿದ ಬಳಿಕವೇ ಒಳಗೆ ಬಿಡಲಾಗುತ್ತಿದೆ.

ಅಲ್ಲದೆ, ಎಲ್ಲಾ ನ್ಯಾಯಾಲಯಗಳಿಗೂ ಭದ್ರತೆಯನ್ನು ಹೆಚ್ಚಿಸಲಾಗಿದೆ. ಮುಂದಿನ ದಿನಗಳಲ್ಲಿ ಶಂಕಿತ ಉಗ್ರಗಾಮಿಗಳ ವಿಚಾರಣೆ ನಡೆಯುವ ಸಂದರ್ಭದಲ್ಲಿ ಮತ್ತಷ್ಟು ಭದ್ರತೆಯನ್ನು ಕೈಗೊಳ್ಳುವ ಕುರಿತು ಈಗಾಗಲೇ ಪೊಲೀಸ್ ಇಲಾಖೆ ಚರ್ಚೆ ನಡೆಸಿದೆ ಎಂದು ತಿಳಿದು ಬಂದಿದೆ.

ಹುಬ್ಬಳ್ಳಿ ವರದಿ:
ಈ ಮಧ್ಯೆ ಶಂಕಿತ ಉಗ್ರರ ವಿಚಾರಣೆಯನ್ನು ಕೈಗೆತ್ತಿಕೊಂಡ ಹುಬ್ಬಳ್ಳಿಯ ಜೆಎಂಎಫ್ಸಿ ನ್ಯಾಯಾಲಯವು ನ್ಯಾಯಾಂಗ ಬಂಧನದ ಅವಧಿಯನ್ನು ವಿಸ್ತರಿಸಿದೆ.
ಮತ್ತಷ್ಟು
ಮರುಮತದಾನದ ಮಾಹಿತಿ ಇಲ್ಲದ ಬೇಗ್
ಮರಳಿ ಕೈ ಹಿಡಿದ ದಿವಾಕರ ಬಾಬು
ಅಮೆರಿಕದ ಒತ್ತಡಕ್ಕ ಮಣಿದಿರುವ ಕೇಂದ್ರ: ಆಡ್ವಾಣಿ
ಭಯೋತ್ಪಾದನೆಗೆ ಕಾಂಗ್ರೆಸ್ ಕಾರಣ: ಡಿ.ವಿ
ಬೆಂಗಳೂರು ರಾಮನಗರಗಳಲ್ಲಿ ಮರು ಮತದಾನ
ಸ್ಪೋಟ : ಲಷ್ಕರ್, ಸಿಮಿ ಕೈವಾಡದ ಶಂಕೆ