ಚುನಾವಣೆಯಲ್ಲಿ 114 ಸ್ಥಾನಗಳನ್ನು ಗೆಲ್ಲುತ್ತೇವೆ ಎಂದು ಬಿಜೆಪಿ ಹಗಲು ಕನಸು ಕಾಣುತ್ತಿದೆ ಎಂದು ಮಾಜಿ ಉಪಮುಖ್ಯಮಂತ್ರಿ ಸಿದ್ದರಾಮಯ್ಯ ವ್ಯಂಗ್ಯವಾಡಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ಚುನಾವಣೆಯಲ್ಲಿ ಬಂಗಾರಪ್ಪ ಬಿಜೆಪಿಯಲ್ಲಿದ್ದುದರಿಂದ 89 ಸ್ಥಾನಗಳನ್ನು ಪಡೆದಿದ್ದರು. ಆದರೆ ಈಗ ಬಿಜೆಪಿ 114 ಸ್ಥಾನಗಳು ಬರುವುದೆಂದು ಹೇಳುವ ಮೂಲಕ ಹಗಲುಕನಸು ಕಾಣುತ್ತಿದ್ದಾರೆಂದು ತಿಳಿಸಿದರು.
ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಹೇಳಿರುವ ಎಲ್ಲ ಅಂಶಗಳನ್ನು ಕಾರ್ಯರೂಪಕ್ಕೆ ತರಲಿದೆ. ಇದಕ್ಕಾಗಿ ಬಜೆಟಿನಲ್ಲಿ 56ರಿಂದ 57ಸಾವಿರ ಕೋಟಿ ರೂ. ಹೆಚ್ಚಸಲಿದೆ ಎಂದ ಅವರು, ಶಿಕಾರಿಪುರದಲ್ಲಿ ಕೋಮುವಾದಿ ಪಕ್ಷವನ್ನು ಸೋಲಿಸುವುದೇ ನಮ್ಮ ಮುಖ್ಯ ಉದ್ದೇಶ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಮೋದಿ ಸರ್ಕಾರವನ್ನು ಟೀಕಿಸಿದ ಅವರು, ಕರ್ನಾಟಕ ಗುಜರಾತ್‌ನಂತೆ ಅಭಿವೃದ್ದಿಯಾಗಿಲ್ಲವೆಂದು ಟೀಕಿಸುವ ಮೋದಿಯರು ಗುಜರಾತ್‌ನಂತೆ ಮಧ್ಯ ಪ್ರದೇಶ, ರಾಜಸ್ತಾನ, ಉತ್ತರ ಪ್ರದೇಶ ರಾಜ್ಯವನ್ನು ಏಕೆ ಅಭಿವೃದ್ದಿ ಪಡಿಸಲಿಲ್ಲವೆಂದು ಪ್ರಶ್ನಿಸಿದರು.
|